ಆಸ್ಟ್ರೇಲಿಯದ ಕ್ರಿಕೆಟಿಗ ಉಸ್ಮಾನ್ ಖ್ವಾಜಾಗೆ ಅನುಮತಿ ನೀಡಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ನಿರಾಕರಣೆ !

ಗಾಜಾವನ್ನು ಬೆಂಬಲಿಸಲು ಬ್ಯಾಟ್ ಮತ್ತು ಬೂಟುಗಳ ಮೇಲೆ ‘ಲೋಗೋ’ ಹಾಕಲು ಬೇಡಿಕೆ ಇತ್ತು

ಸಿಡ್ನಿ (ಆಸ್ಟ್ರೇಲಿಯಾ) – ಆಸ್ಟ್ರೇಲಿಯಾದ ಕ್ರಿಕೆಟಿಗ ಉಸ್ಮಾನ್ ಖ್ವಾಜಾನು ತಮ್ಮ ಬ್ಯಾಟ್ ಮತ್ತು ಬೂಟುಗಳಲ್ಲಿ ಗಾಜಾವನ್ನು ಬೆಂಬಲಿಸುವ ಲೋಗೊವನ್ನು ಅಳವಡಿಸಲು ‘ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್’ (ಐಸಿಸಿ) ಯಿಂದ ಅನುಮತಿ ಕೋರಿದ್ದ. ‘ಐಸಿಸಿ’ಯು ಈ ಅನುಮತಿಯನ್ನು ತಿರಸ್ಕರಿಸಿದೆ. ಇದು ಐಸಿಸಿಯ ದ್ವಂದ್ವ ನೀತಿ ಎಂದು ಉಸ್ಮಾನ್ ಖ್ವಾಜಾ ಹೇಳಿದ್ದಾನೆ.

1. ಕೆಲವು ದಿನಗಳ ಹಿಂದೆ, ಕ್ರಿಕೆಟ್ ಪಂದ್ಯದ ವೇಳೆ, ಪ್ಯಾಲೆಸ್ತೀನ್ ಅನ್ನು ಬೆಂಬಲಿಸುವ ಫಲಕಗಳನ್ನು ಪ್ರದರ್ಶಿಸಿದ್ದಕ್ಕಾಗಿ ಪಾಕಿಸ್ತಾನಿ ಅಭಿಮಾನಿಗಳನ್ನು ಆಸ್ಟ್ರೇಲಿಯಾದ ಪರ್ತ್‌ನ ಕ್ರೀಡಾಂಗಣದಿಂದ ಹೊರಹಾಕಲಾಗಿತ್ತು.

2. ಆಸ್ಟ್ರೇಲಿಯಾದ ಕ್ರಿಕೆಟಿಗ ಉಸ್ಮಾನ್ ಖ್ವಾಜಾ ಈ ಹಿಂದೆ ಗಾಜಾವನ್ನು ಬೆಂಬಲಿಸಿ ತಮ್ಮ ಬೂಟುಗಳಲ್ಲಿ ಸಂದೇಶವನ್ನು ಬರೆದಿದ್ದ. ಹಾಗಾಗಿ ಆತಂಕ ಸೃಷ್ಟಿಯಾಗಿತ್ತು. ನಂತರ ಅವರು ಗಾಜಾವನ್ನು ಬೆಂಬಲಿಸಲು ತಮ್ಮ ಬ್ಯಾಟ್ ಮತ್ತು ಬೂಟುಗಳಲ್ಲಿ ಲೋಗೋವನ್ನು ಬಳಸಲು ಅನುಮತಿಸುವಂತೆ ಐಸಿಸಿಗೆ ವಿನಂತಿಸಿದ್ದ.

3. ಐಸಿಸಿ ಅದನ್ನು ತಿರಸ್ಕರಿಸಿದ ನಂತರ ಉಸ್ಮಾನ್ ಖ್ವಾಜಾನು ‘ಐಸಿಸಿ’ ಅನ್ನು ಟೀಕಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಾನೆ. ಇದರಲ್ಲಿ ‘ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಕೇಶವ್ ಮಹಾರಾಜ್ ಅವರ ಬ್ಯಾಟ್ ಮೇಲೆ ‘ಓಂ’ ಚಿಹ್ನೆ ಇದೆ. ಅಂತೆಯೇ, ನಿಕೋಲಸ್ ಪೂರನ್ ಮತ್ತು ಇತರ ಕೆಲವು ಬ್ಯಾಟ್ಸ್‌ಮನ್‌ಗಳು ತಮ್ಮ ಬ್ಯಾಟ್‌ಗಳಲ್ಲಿ ವಿಭಿನ್ನ ಧಾರ್ಮಿಕ ಚಿಹ್ನೆಗಳನ್ನು ಹಾಕಿದ್ದಾರೆ. ಇದರಿಂದ ‘ಅವರು ವಿರೋಧಿಸಲಿಲ್ಲ; ಆದರೆ ನನಗೆ ವಿರೋಧ ವ್ಯಕ್ತವಾಗುತ್ತಿದೆ’ ಎಂದು ಖ್ವಾಜಾ ತೋರಿಸಲು ಯತ್ನಿಸುತ್ತಿದ್ದಾನೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಎಷ್ಟು ಹಿಂದೂ ಕ್ರಿಕೆಟಿಗರು ಕಾಶ್ಮೀರ ಅಥವಾ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ಹಿಂದೂಗಳ ನರಮೇಧವನ್ನು ಮಾತನಾಡುತ್ತಾರೆ ಅಥವಾ ಸಾರ್ವಜನಿಕವಾಗಿ ವಿರೋಧಿಸುತ್ತಾರೆ ?