ದೇವಾಸ (ಮಧ್ಯಪ್ರದೇಶ)ನ ೨ ಕ್ರೈಸ್ತ ಮಿಶನರಿ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಕ್ರೈಸ್ತ ಪ್ರಾರ್ಥನೆ ಕಲಿಕೆ !

  • ಹಿಂದೂ ವಿದ್ಯಾರ್ಥಿಗಳ ಮತಾಂತರದ ಪ್ರಯತ್ನ

  • ೧೦ ವರ್ಷಗಳಕ್ಕಿಂತಲೂ ಚಿಕ್ಕ ಮಕ್ಕಳಿಂದ ಶೌಚಾಲಯ ಸ್ವಚ್ಛತೆ !

ನವ ದೆಹಲಿ – ಮಧ್ಯಪ್ರದೇಶದಲ್ಲಿನ ದೇವಾಸ್‌ನ ೨ ಕ್ರೈಸ್ತ ಮಿಷಿನರಿ ಶಾಲೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಜನಾಂಗದಲ್ಲಿನ ಹಿಂದೂ ವಿದ್ಯಾರ್ಥಿಗಳಿಗೆ ಕ್ರೈಸ್ತ ಪ್ರಾರ್ಥನೆ ಮಾಡಲು ಕಲಿಸಲಾಗುತ್ತದೆ, ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ ಕಾನೂನಗೋ ಇವರು ಸಾಮಾಜಿಕ ಜಾಲತಾಣದ ಮೂಲಕ ಈ ಮಾಹಿತಿ ನೀಡಿದರು. ‘ಈ ಮೂಲಕ ಮಕ್ಕಳನ್ನು ಕ್ರೈಸ್ತ ಮತಕ್ಕೆ ಮತಾಂತರ ಗೊಳಿಸುವ ಕಾರ್ಯ ನಡೆಯುತ್ತಿದ್ದು ಈ ಶಾಲೆಗಳಿಗೆ ಪ್ರಭಾವಿ ಜನರ ಸಹಾಯ ದೊರೆಯುತ್ತದೆ, ಎಂದು ಅವರು ದಾವೆ ಕೂಡ ಮಾಡಿದರು. ಕಾನೂನುಗೋ ಇವರು ಎರಡು ಶಾಲೆಗಳಿಗೆ ಭೇಟಿ ನೀಡಿದ ನಂತರ ಈ ಮಾಹಿತಿ ದೊರೆತಿದೆ.

ಕಾನೂನುಗೋ ಮಾತು ಮುಂದುವರಿಸುತ್ತಾ, ಈ ಶಾಲೆಯಲ್ಲಿನ ಎಲ್ಲ ವಿದ್ಯಾರ್ಥಿಗಳು ಹಿಂದುಗಳಾಗಿದ್ದಾರೆ. ಅವರಿಗೆ ಕ್ರೈಸ್ತರ ಎಲ್ಲಾ ಪ್ರಾರ್ಥನೆ ಬಾಯಿ ಪಾಠವಾಗಿವೆ. ೧೦ ವರ್ಷಗಳಕ್ಕಿಂತಲೂ ಚಿಕ್ಕ ವಯಸ್ಸಿನ ವಿದ್ಯಾರ್ಥಿಗಳಿಂದ ಹುಲ್ಲು ಕತ್ತರಿಸುವುದು ಮತ್ತು ಶೌಚಾಲಯ ಸ್ವಚ್ಛಗೊಳಿಸುವ ಕೆಲಸ ಕೂಡ ಮಾಡಿಸಲಾಗುತ್ತದೆ. ಈ ಶಾಲೆಗಳಿಗೆ ವಿದೇಶದಿಂದ ಧನ ಸಹಾಯ ಆಗುತ್ತಿರುವುದು ಕಂಡು ಬಂದಿದೆ. ಈ ಶಾಲೆಗೆ ರಾಜಕೀಯ ವ್ಯಕ್ತಿಗಳ ಜೊತೆ ಸಂಬಂಧವಿದೆ. ಇದರಿಂದ, ಪ್ರಭಾವಶಾಲಿ ಜನರನ್ನು ಉಪಯೋಗಿಸಿ ಹಿಂದೂ ಹುಡುಗರ ಮತಾಂತರದ ಪ್ರಯತ್ನ ನಡೆಯುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ಸಂದರ್ಭದಲ್ಲಿ ಮಧ್ಯಪ್ರದೇಶ ಸರಕಾರದ ಮುಖ್ಯ ಸಚಿವರಿಗೆ ನೋಟಿಸ್ ಜಾರಿಗೊಳಿಸಿ ಕ್ರಮ ಕೈಗೊಳ್ಳಲಾಗುವುದು.

ಸಂಪಾದಕೀಯ ನಿಲುವು

ಮಧ್ಯಪ್ರದೇಶದಲ್ಲಿ ಕಳೆದ ಅನೇಕ ವರ್ಷಗಳಿಂದ ಭಾಜಪದ ಸರಕಾರ ಇದ್ದರೂ ಕೂಡ ಈ ರೀತಿಯ ಘಟನೆಗಳು ಹೇಗೆ ಘಟಿಸುತ್ತವೆ ? ಇಂತಹ ಪ್ರಶ್ನೆ ಹಿಂದುಗಳ ಮನಸ್ಸಿನಲ್ಲಿ ಉದ್ಭವಿಸುತ್ತದೆ ! ಇಂತಹ ಘಟನೆಗಳು ತಕ್ಷಣ ನಿಲ್ಲಿಸಿ ಸಂಬಂಧಿಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ !