ಮಧ್ಯಪ್ರದೇಶದ ಉಜ್ಜೈನಿ ಮತ್ತು ಶಾಜಾಪುರ ಜಿಲ್ಲೆಯಲ್ಲಿನ ಶಾಲೆಯಲ್ಲಿ ವಿದ್ಯಾರ್ಥಿಗಳು ಸಂತಾಕ್ಲಾಸ್ ಆಗುವ ಮೊದಲು ಪೋಷಕರ ಅನುಮತಿ ಪಡೆಯಿರಿ ! – ಶಿಕ್ಷಣಾಧಿಕಾರಿಗಳ ಆದೇಶ


ಉಜ್ಜೈನ್ (ಮಧ್ಯಪ್ರದೇಶ) – ಮಧ್ಯ ಪ್ರದೇಶದಲ್ಲಿ ಉಜ್ಜೈನ್ ಮತ್ತು ಶಾಜಾಪುರ ಇಲ್ಲಿಯ ಶಾಲೆಗಳಲ್ಲಿ ವಿದ್ಯಾರ್ಥಿಗಳು ಸಂತಾಕ್ಲಾಸ್ ಆಗುವ ಮೊದಲು ತಮ್ಮ ಪೋಷಕರ ಅನುಮತಿ ಪಡೆಯಬೇಕು, ಎಂದು ಶಿಕ್ಷಣಾಧಿಕಾರಿಗಳಿಂದ ಆದೇಶ ನೀಡಲಾಗಿದೆ. ಅನುಮತಿ ಪಡೆಯದೆ ವಿದ್ಯಾರ್ಥಿಯು ಸಾಂತಾಕ್ಲಾಸ್ ಆಗಿ ಏನಾದರೂ ವಿವಾದ ನಿರ್ಮಾಣವಾದರೆ, ಆಗ ಸಂಬಂಧಿತ ಶಾಲೆಯೇ ಜವಾಬ್ದಾರ ಆಗಿರುವುದು ಎಂದು ಈ ಆದೇಶದಲ್ಲಿ ಹೇಳಲಾಗಿದೆ.

ಶಾಲೆಯಲ್ಲಿ ಕ್ರಿಸ್‌ಮಸ್ ಸಮಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಆ ಸಮಯದಲ್ಲಿ ವಿದ್ಯಾರ್ಥಿಗಳು ಬೇರೆ ಬೇರೆ ಉಡುಪು ಧರಿಸುತ್ತಾರೆ. ಇದರ ಹಿನ್ನೆಲೆಯಲ್ಲಿ ಶಿಕ್ಷಣಾಧಿಕಾರಿಗಳಿಂದ ಮೇಲಿನ ಆದೇಶ ನೀಡಲಾಗಿದೆ.

ಸಂಪಾದಕೀಯ ನಿಲುವು

ಹಿಂದೂ ವಿದ್ಯಾರ್ಥಿಗಳು ಕ್ರಿಸ್‌ಮಸ್‌ ಏತಕ್ಕಾಗಿ ಆಚರಿಸಬೇಕು ಮತ್ತು ಸಂತಾಕ್ಲಾಸ್ ಉಡುಪು ಏಕೆ ಧರಿಸಬೇಕು ? ಎಷ್ಟು ಕ್ರೈಸ್ತ ಶಾಲೆಗಳಲ್ಲಿ ಗಣೇಶೋತ್ಸವ, ದೀಪಾವಳಿ, ಹೋಳಿ ಮುಂತಾದ ಹಿಂದೂ ಹಬ್ಬಗಳನ್ನು ಆಚರಿಸುತ್ತಾರೆ ?