‘ಗ್ರೀನವಿಚ್ ಟೈಮ್’ ಈ ಮಾನದಂಡ ಬದಲಾಯಿಸಿ ಉಜ್ಜಯಿನಿಯ ಸಮಯದ ಮಾನದಂಡ ತಯಾರಿಸಲು ಪ್ರಯತ್ನ ಮಾಡುವೆವು ! – ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ ಯಾದವ

  • ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ ಯಾದವ ಇವರಿಂದ ವಿಧಾನಸಭೆಯಲ್ಲಿ ಪ್ರತಿಪಾದನೆ !

  • ಪುರಾತನ ಕಾಲದಿಂದಲೂ ಉಜ್ಜೈನಿ ನಗರ ಸಮಯದ ಜನಕ ಇತ್ತು ಎಂದು ಪ್ರತಿಪಾದನೆ !

ಭೋಪಾಲ್ (ಮಧ್ಯಪ್ರದೇಶ) – ಇಂದಿನಿಂದ ೩೦೦ ವರ್ಷಗಳ ಹಿಂದೆ ಸಂಪೂರ್ಣ ಜಗತ್ತು ಭಾರತದ ಎಂದರೆ ಉಜ್ಜೈನ್ ನ ‘ಟೈಮ್ ಸ್ಟ್ಯಾಂಡರ್ಡ್’ ಎಂದರೆ ಸಮಯ ಅಳೆಯುವ ಮಾನದಂಡ ಒಪ್ಪಿಕೊಂಡಿತ್ತು; ಆದರೆ ಕಾಲದ ಪ್ರವಾಹದಲ್ಲಿ ನಾವು ಗುಲಾಮರಾದೆವು ಮತ್ತು ಇಂದು ನಾವು ಸಹಿತ ಸಂಪೂರ್ಣ ಜಗತ್ತು ಇಂಗ್ಲೆಂಡಿನ ‘ಗ್ರೀನ್ ವಿಚ್ ಟೈಮ್’ ಪಾಲನೆ ಮಾಡುತ್ತಿದ್ದೇವೆ. ಇದನ್ನು ಬದಲಾಯಿಸಿ ಮತ್ತೊಮ್ಮೆ ಭಾರತದ ಎಂದರೆ ಉಜ್ಜೈನ್ ಇಲ್ಲಿಯ ಸಮಯ ಮಾಪನ ತರುವುದಕ್ಕಾಗಿ ನಮ್ಮ ಸರಕಾರ ಪ್ರಯತ್ನ ಮಾಡಲಿದೆ, ಎಂದು ಮಧ್ಯಪ್ರದೇಶದಲ್ಲಿನ ಭಾಜಪ ಸರಕಾರದ ಮುಖ್ಯಮಂತ್ರಿ ಡಾ. ಮೋಹನ ಯಾದವ ಇವರು ವಿಧಾನಸಭೆಯಲ್ಲಿ ಹೇಳಿಕೆ ನೀಡಿದರು.

೧. ಮುಖ್ಯಮಂತ್ರಿ ಡಾ. ಯಾದವ ಮಾತು ಮುಂದುವರೆಸಿ, ನಾವು ಪೂರ್ವ ಹಾಗೂ ಅವರು ಪಶ್ಚಿಮಾತ್ಯ ದೇಶದವರಾಗಿದ್ದೇವೆ. ಒಂದು ಪ್ರಾಣಿ ಸೂರ್ಯೋದಯದಿಂದ ದಿನಚರಿ ಆರಂಭ ಮಾಡುತ್ತದೆ ಹಾಗೂ ಇನ್ನೊಂದು ನಿಶಾಚರ ಆಗಿದೆ. ಅದು ಸೂರ್ಯಾಸ್ತದ ನಂತರ ದಿನಚರಿ ಆರಂಭಿಸುತ್ತದೆ, ಎಂದರೆ ಮಧ್ಯರಾತ್ರಿ ದಿನ ಬದಲಾವಣೆಯ ಯಾವ ಮಾನದಂಡ ಇದೆ ? ಇದರಿಂದ ಭಾರತೀಯ ಸಂಸ್ಕೃತಿಯನ್ನು ಕೀಳಾಗಿ ನೋಡುವ ಪ್ರಯತ್ನ ಆಗಿದೆ. ಇದಕ್ಕಾಗಿ ಜಗತ್ತಿನ ಸಮಯ ವ್ಯವಸ್ಥಿತ ಮಾಡುವುದಕ್ಕಾಗಿ ಉಜ್ಜೈನಿಯ ವೇದಶಾಲೆಯಲ್ಲಿ ಸಂಶೋಧನೆ ಮಾಡಲಾಗುವುದು. ಐ.ಐ.ಟಿ. ಮತ್ತು ಐ.ಐ.ಎಂ ಇವರ ಸಂಶೋಧಕರಿಂದ ಸಂಶೋಧನೆ ಮಾಡಲಾಗುವುದು. ಈ ವಿಷಯಕ್ಕೆ ಜಗತ್ತಿನಲ್ಲಿನ ಅನೇಕ ದೇಶಗಳು ನಮಗೆ ಬೆಂಬಲ ನೀಡುವರು. ಇದರಲ್ಲಿ ಪಾಕಿಸ್ತಾನ ಮತ್ತು ಚೀನಾದ ಸಮಾವೇಶ ಇರಲಿದೆ.

೨. ಮುಖ್ಯಮಂತ್ರಿ ಡಾ. ಯಾದವ ಮಾತು ಮುಂದುವರೆಸಿ, ನಮ್ಮ ಸರಕಾರ ‘ಪ್ರೈಮ್ ಮೆರಿಡಿಯನ್’ ಎಂದರೆ ದೇಶಾಂತರ್ಗತ ರೇಖೆ, ಅದರ ಉಪಯೋಗ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾಡಲಾಗುತ್ತದೆ, ಇಂಗ್ಲೆಂಡಿನ ಗ್ರೀನ್ ವಿಚನಿಂದ ಉಜ್ಜೈನ ಇಲ್ಲಿ ಸ್ಥಳಾಂತರಿಸುವ ಪ್ರಯತ್ನ ಮಾಡುವುದು ಎಂದು ಹೇಳಿದರು.

ಗ್ರೀನ್ ವಿಚ್ ಮೀನ್ ಟೈಮ್ (ಜಿ.ಎಮ್.ಟಿ) ಎಂದರೆ ಏನು ?

ಗ್ರೀನ್ ವಿಚ್ ಮೀನ್ ಟೈಮ್ ಇದು ‘ಲಂಡನ್ ಬರೋ ಆಫ್ ಗ್ರೀನ್ವಿಚ್’ ದಲ್ಲಿನ ರಾಯಲ್ ವೇದಶಾಲೆಯಲ್ಲಿ ಅನುಸರಿಸಲಾಗುವ ಒಂದು ಮಾನದಂಡದ ಸಮಯವಾಗಿದೆ. ‘ಪೃಥ್ವಿಯ ‘ಪ್ರೇಮ್ ಮೆರಿಡಿಯನ್’ ಎಂದರೆ ‘೦ ರೇಖಾಂಶ’ ಇದು ಗ್ರೀನ್ವಿಚ್ ಈ ಲಂಡನ್ನಿನ ಉಪನಗರದಿಂದ ಹಾದು ಹೋಗುತ್ತದೆ, ಎಂದು ನಂಬಲಾಗಿದೆ. ಇದರಿಂದಲೇ ಅದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅನನ್ಯ ಸಾಧಾರಣ ಮಹತ್ವವಿದೆ. ಯುಟಿಸಿ (ಕೋರ್ಡಿನೇಟೆಡ್ ಯುನಿವರ್ಸಲ್ ಟೈಮ್) ಅಥವಾ ಗ್ರೀನ್ ವಿಚ್ ಸ್ಥಳೀಯ ಸಮಯವು ಜಗತ್ತಿನಾದ್ಯಂತದ ಸಮಯಕ್ಕಾಗಿ ಆಧಾರ ಎಂದು ಉಪಯೋಗಿಸಲಾಗುತ್ತದೆ. ಹಿಂದೆ ಈ ಸಮಯದ ಮಾನದಂಡ ಉಜ್ಜೈನಿ ಇಲ್ಲಿಂದ ಅಳೆಯಲಾಗುತ್ತಿತ್ತು. ಈಗ ಅದನ್ನು ಪುನರುಸ್ತಾಪಿಸಲು ಪ್ರಯತ್ನ ಮಾಡಲಾಗುತ್ತಿದೆ.

ಉಜ್ಜೈನಿನಗರ ಪೃಥ್ವಿಯ ನಾಭಿ !

ಪ್ರಾಚೀನ ಹಿಂದೂ ಖಗೋಳದ ಮಾನ್ಯತೆಯ ಪ್ರಕಾರ ಉಜ್ಜೈನ್ ಒಂದು ಕಾಲದಲ್ಲಿ ಭಾರತದ ಕೇಂದ್ರ ಮದ್ಯ ರೇಖೆ ಎಂದು ನಂಬಲಾಗುತ್ತಿತ್ತು. ಈ ನಗರದಿಂದ ದೇಶದ ಸಮಯ ಮತ್ತು ಅಂತರ ಅಳೆಯಲಾಗುತ್ತಿತ್ತು. ಹಿಂದೂ ಪಂಚಾಂಗಕ್ಕಾಗಿ ಕೂಡ ಇದೆ ಸಮಯದ ಆಧಾರ ತೆಗೆದುಕೊಳ್ಳಲಾಗುತ್ತಿತ್ತು.

ಉಜ್ಜೈನ್ ನಗರದಲ್ಲಿ ಕರ್ಕ ರೇಖೆ ಮತ್ತು ಭೂಮಧ್ಯ ರೇಖೆ ಪರಸ್ಪರ ಛೇದಿಸುತ್ತವೆ. ಇದನ್ನೇ ಪೃಥ್ವಿಯ ನಾಭಿ ಎಂದು ಕೂಡ ಹೇಳಲಾಗುತ್ತದೆ. ಈ ಸಂದರ್ಭದಲ್ಲಿ ಚರ್ಚಿಸುವುದಕ್ಕಾಗಿ ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನ ಮಾಧ್ಯಮದಿಂದ ಅಂತರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ಸಿನ ಆಯೋಜನೆ ಮಾಡಲಾಗುವುದು. ಅಂತರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ಸ ಏನಾದರೂ ಇದು ಒಪ್ಪಿಕೊಂಡರೆ ಆಗ ಸಮಯದ ಮಾನದಂಡ ಬದಲಿಸಲು ಸಾಧ್ಯವಾಗುವುದು.