ಭೀಕರ ಆಪತ್ಕಾಲ ಆರಂಭವಾಗುವ ಮೊದಲೇ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಗ್ರಂಥನಿರ್ಮಿತಿಯ ಕಾರ್ಯದಲ್ಲಿ ಪಾಲ್ಗೊಂಡು ಶೀಘ್ರ ಈಶ್ವರೀ ಕೃಪೆಗೆ ಪಾತ್ರರಾಗಿ !

(ಪೂ.) ಸಂದೀಪ ಆಳಶಿ

೧. ರಾಮರಾಜ್ಯದ ಪ್ರಜೆಗಳು ಸಾತ್ತ್ವಿಕರಾಗಿದ್ದರು; ಆದ್ದರಿಂದ ಅವರಿಗೆ ಶ್ರೀರಾಮನಂತಹ ಆದರ್ಶ ರಾಜನು ಲಭಿಸಿದನು. ರಾಮರಾಜ್ಯದಂತೆ ಎಲ್ಲ ರೀತಿಯಲ್ಲಿ ಸುಂದರ ಮತ್ತು ಆದರ್ಶ ವಾಗಿರುವ ಹಿಂದೂ ರಾಷ್ಟ್ರ ಬರಲು ಇಂದಿನ ಸಮಾಜವೂ ಸಾತ್ತ್ವಿಕವಾಗುವುದು ಅನಿವಾರ್ಯವಾಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಂಕಲನ ಮಾಡುತ್ತಿರುವ ಗ್ರಂಥಗಳಲ್ಲಿನ ಜ್ಞಾನದಿಂದ ಸಮಾಜವು ಸಾತ್ತ್ವಿಕವಾಗಿ ಅದು ಹಿಂದೂ ರಾಷ್ಟ್ರಕ್ಕಾಗಿ ಪೂರಕವಾಗುವುದು. ಇದರಿಂದಲೇ ಹಿಂದೂ ರಾಷ್ಟ್ರವು ನಿರ್ಮಾಣವಾಗಲಿದೆ.

೨. ಮೂರನೇ ಮಹಾಯುದ್ಧ, ನೆರೆ ಇತ್ಯಾದಿಗಳ ರೂಪದಲ್ಲಿನ ಮಹಾಭಯಂಕರ ಆಪತ್ಕಾಲದಿಂದ ಬದುಕಿದರೆ ಮಾತ್ರ ನಾವು ಹಿಂದೂ ರಾಷ್ಟ್ರವನ್ನು ನೋಡಬಲ್ಲೆವು ! ನಾವು ಸಾಧನೆಯನ್ನು ಮಾಡಿದರೆ ಮಾತ್ರ ಆಪತ್ಕಾಲದಿಂದ ಬದುಕಲು ಸಾಧ್ಯವಿದೆ; ಏಕೆಂದರೆ ಸಾಧಕರ ಮೇಲೆ ದೇವರ ಕೃಪೆ ಇರುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಂಕಲನ ಮಾಡುತ್ತಿರುವ ಗ್ರಂಥಗಳಿಂದ ಸುಯೋಗ್ಯ, ಸದ್ಯದ ವೈಜ್ಞಾನಿಕ ಯುಗದಲ್ಲಿನ ಪೀಳಿಗೆಗೆ ಸಹಜವಾಗಿ ತಿಳಿಯುವಂತಹ ವೈಜ್ಞಾನಿಕ ಪರಿಭಾಷೆಯಲ್ಲಿ ಮತ್ತು ಕಾಲಕ್ಕನುಸಾರ ಆವಶ್ಯಕವಿರುವ ಸಾಧನೆಯ ಜ್ಞಾನ ಸಿಗುತ್ತಿದೆ. ಆದ್ದರಿಂದ ಈ ಗ್ರಂಥಗಳ ಮಹತ್ವವು ಅಸಾಧಾರಣವಾಗಿದೆ.

೩. ಪ್ರತಿಯೊಬ್ಬನ ಪ್ರಕೃತಿ ಮತ್ತು ಆಸಕ್ತಿಗನುಸಾರ ಅವನಿಗೆ ಅಧ್ಯಾತ್ಮದ ಶಿಕ್ಷಣ ದೊರಕಿದರೆ, ಅವನಲ್ಲಿ ಸಾಧನೆಯ ಆಸಕ್ತಿ ಬೇಗ ನಿರ್ಮಾಣವಾಗುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ವಿವಿಧ ವಿಷಯಗಳ ಬಗ್ಗೆ ಗ್ರಂಥಗಳ ಸಂಕಲನ ಮಾಡುತ್ತಿರುವುದರಿಂದ ಆ ಮಾಧ್ಯಮದಿಂದ ಅನೇಕ ಜನರು ತಮ್ಮ ಪ್ರಕೃತಿ ಮತ್ತು ಆಸಕ್ತಿಗನುಸಾರ ಸಾಧನೆಯ ಕಡೆಗೆ ಬೇಗನೇ ಹೊರಳಬಹುದು.

೪. ಹಿಂದೂ ರಾಷ್ಟ್ರವು ಕೆಲವು ಸಾವಿರ ವರ್ಷಗಳವರೆಗೆ ಉಳಿಯಬಹುದು; ಆದರೆ ಗ್ರಂಥಗಳಲ್ಲಿನ ಜ್ಞಾನವು ಅನಂತ ಕಾಲದ ವರೆಗೆ ಉಳಿಯುವುದರಿಂದ ಹಿಂದೂ ರಾಷ್ಟ್ರವು ಹೇಗೆ ಬೇಗನೆ ಬರುವುದು ಆವಶ್ಯಕವಿದೆಯೋ, ಅಷ್ಟೇ ಅವಸರದಿಂದ ಭೀಕರ ಆಪತ್ಕಾಲ ಆರಂಭವಾಗುವ ಮೊದಲು ಈ ಗ್ರಂಥಗಳನ್ನು ಪ್ರಕಟಿಸಬೇಕಾಗಿದೆ. ಅದಕ್ಕಾಗಿಯೇ ‘ಈ ಗ್ರಂಥಗಳ ನಿರ್ಮಿತಿಕಾರ್ಯದಲ್ಲಿ ಪಾಲ್ಗೊಳ್ಳುವುದು’, ಈಶ್ವರೀ ಕೃಪೆಯ ಬಹುದೊಡ್ಡ ಪರ್ವವೇ ಆಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸಂಕಲನ ಮಾಡಿದ, ಆದರೆ ಇನ್ನೂ ಪ್ರಕಟಿಸದ ಸುಮಾರು ೫೦೦೦ ಗ್ರಂಥಗಳಿವೆ. ಈ ಗ್ರಂಥಗಳ ಮಾಧ್ಯಮದಿಂದ ಅವುಗಳಲ್ಲಿನ ಜ್ಞಾನವನ್ನು ಆದಷ್ಟು ಬೇಗನೇ ಸಮಾಜದವರೆಗೆ ತಲುಪಿಸುವುದು ಆವಶ್ಯಕವಾಗಿದೆ. ಈ ಗ್ರಂಥಕಾರ್ಯದಲ್ಲಿ ಪಾಲ್ಗೊಂಡು ಎಲ್ಲರೂ ಈ ಅವಕಾಶದ ಲಾಭವನ್ನು ಹೆಚ್ಚೆಚ್ಚು ಪಡೆಯಬೇಕು !

ಗ್ರಂಥ ಸೇವೆಗೆ ಸಂಬಂಧಿಸಿದ ಸಂಕಲನ, ಅನುವಾದ, ಸಂರಚನೆ, ಮುಖಪುಟ-ನಿರ್ಮಿತಿ, ಮುದ್ರಣ ಮುಂತಾದ ವಿವಿಧ ಸೇವೆಗಳಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ತಮ್ಮ ಮಾಹಿತಿಯನ್ನು ಸನಾತನದ ಜಿಲ್ಲಾಸೇವಕರ ಮೂಲಕ ಕಳುಹಿಸಬೇಕು.

ಸಂಪರ್ಕ : ಸೌ. ಭಾಗ್ಯಶ್ರೀ ಸಾವಂತ,

ವಿ-ಅಂಚೆ : [email protected]

ಅಂಚೆ ವಿಳಾಸ : ‘ಸನಾತನ ಆಶ್ರಮ’, ರಾಮನಾಥಿ, ಫೋಂಡಾ, ಗೋವಾ ೪೦೩ ೪೦೧.’

– (ಪೂ.) ಸಂದೀಪ ಆಳಶಿ, ಸನಾತನದ ಗ್ರಂಥಗಳ ಸಂಕಲನಕಾರರು.