|
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಪ್ರಕರಣದಲ್ಲಿ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳವು ಮೊಹಮ್ಮದ್ ಅಬ್ದುಲ್ ಅವ್ವಲ್ ಇವನನ್ನು ಡಿಸೆಂಬರ್ 20 ರಂದು ದೆಹಲಿಯಿಂದ ಬಂಧಿಸಿದೆ. ಇಲ್ಲಿನ ನಿಜಾಮುದ್ದೀನ್ ರೈಲು ನಿಲ್ದಾಣದಲ್ಲಿ ಆತನನ್ನು ಬಂಧಿಸಲಾಗಿದೆ. ಅವ್ವಲ್ ಒಳನುಸುಳುವಿಕೆ ಮತ್ತು ಭಯೋತ್ಪಾದನೆಗೆ ಆರ್ಥಿಕ ನೆರವು ಒದಗಿಸುವ ಗುಂಪಿನ ಸದಸ್ಯನಿದ್ದಾನೆ. ಅವನು ಅಸ್ಸಾಂನ ಗೋಲ್ಪಾರಾ ಮೂಲದವನಾಗಿದ್ದು, ಕಳೆದ 5 ವರ್ಷಗಳಿಂದ ದೆಹಲಿಯಲ್ಲಿ ನೆಲೆಸಿದ್ದಾನೆ.
ಅವ್ವಲ್ ಇಲ್ಲಿನ ‘ಫಿನೋ ಬ್ಯಾಂಕ್’ನಲ್ಲಿ ಅಕ್ರಮವಾಗಿ ಖಾತೆ ತೆರೆದಿದ್ದ. ಈ ಖಾತೆಯಲ್ಲಿ ಸರಕಾರೇತರ ಸಂಸ್ಥೆಯಿಂದ ವಿದೇಶದಿಂದ ಹಣ ಪಡೆಯುತ್ತಿದ್ದರು. ವಿದೇಶಿ ದೇಣಿಗೆ ಕಾಯ್ದೆಯಡಿ ಸಂಸ್ಥೆ ಕೋಟ್ಯಂತರ ರೂಪಾಯಿ ಬರುತ್ತದೆ. ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಯೊಬ್ಬರು ಡಿಸೆಂಬರ್ 19 ರಂದು, ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ 500 ಕ್ಕೂ ಹೆಚ್ಚು ‘ಸಂದೇಹಾಸ್ಪದ’ ಬ್ಯಾಂಕ್ ಖಾತೆಗಳನ್ನು ತನಿಖೆ ಮಾಡಬೇಕಾಗಿದೆ ಎಂದು ಹೇಳಿದರು. ನುಸುಳುಕೋರರನ್ನು ಮರೆಮಾಚುವ ಹಾಗೂ ನಕಲಿ ದಾಖಲೆಗಳನ್ನು ಸಿದ್ಧಪಡಿಸಲು ಈ ಹಣವನ್ನು ಬಳಸಿರುವ ಸಂದೇಹ ವ್ಯಕ್ತವಾಗಿದೆ. ಈ ಮೂಲಕ ದೇಶವಿರೋಧಿ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದೂ ಆರೋಪಿಸಲಾಗಿದೆ. ಈ ಗುಂಪಿನ 5 ಭಯೋತ್ಪಾದಕರನ್ನು ಬಂಧಿಸಲಾಗಿದೆ. ಇವರಲ್ಲಿ ಆದಿಲುರ್ ರೆಹಮಾನ್ ಅಸ್ರಫಿ, ತಾನಿಯಾ ಮಂಡಲ್ ಮತ್ತು ಇಬ್ರಾಹಿಂ ಖಾನ್, ಈ 3 ಬಾಂಗ್ಲಾದೇಶಿ ನಾಗರಿಕರು ಮತ್ತು ಅಬು ಹುರೈರಾ ಗಾಜಿ ಮತ್ತು ಶೇಖ್ ನಜೀಬುಲ್ ಹಕ್ ಅವರು ಬಂಗಾಳ ರಾಜ್ಯದವರಾಗಿದ್ದಾರೆ. ಅಬ್ದುಲ್ ಅವ್ವಲ್ ಈ ಪ್ರಕರಣದಲ್ಲಿ ಬಂಧಿತ ಆರನೇ ಆರೋಪಿಯಾಗಿದ್ದಾನೆ.
ಮೇಲಿನ ಖಾತೆಗೆ ಬರುವ ಹಣವನ್ನು ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳ ಹೆಸರಿನಲ್ಲಿ ತೆರೆಯಲಾದ ಖಾತೆಗಳಿಗೆ ಜಮಾ ಮಾಡುತ್ತಿದ್ದರು.
ಸಂಪಾದಕೀಯ ನಿಲುವುದೇಶದ ಮಾರಕವಾಗಿರುವ ದೇಶದ್ರೋಹಿಗಳಿಗೆ ಸರಕಾರ ಗಲ್ಲು ಶಿಕ್ಷೆ ವಿಧಿಸಬೇಕು ! |