ಭಾರತವನ್ನು ಶ್ಲಾಘಿಸಿದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ !
ಇಸ್ಲಾಮಾಬಾದ್ (ಪಾಕಿಸ್ತಾನ) – ನಮ್ಮ ನೆರೆಹೊರೆಯವರು ಚಂದ್ರನನ್ನು ತಲುಪಿದರು; ಆದರೆ ನಾವು ನೆಲದಿಂದ ಮೇಲೇಳಲೂ ಸಾಧ್ಯವಾಗಿಲ್ಲ. ನಮ್ಮ ಅವನತಿಗೆ ನಾವೇ ಕಾರಣ, ಇಲ್ಲದಿದ್ದರೆ ನಮ್ಮ ದೇಶ ಬೇರೆ ಹಂತಕ್ಕೆ ತಲುಪುತ್ತಿತ್ತು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ (ಪಿ.ಎಂ.ಎಲ್.ಎನ್.) ಪಕ್ಷದ ನಾಯಕ ನವಾಜ್ ಶರೀಫ್ ಪಕ್ಷದ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುವಾಗ ಹೇಳಿದರು.
ಶರಿಫ್ ಮಾತನ್ನು ಮುಂದುವರೆಸುತ್ತಾ, 2013 ರಲ್ಲಿ ದೇಶವು ವಿದ್ಯುತ್ ದಟ್ಟಣೆಯ ಬಿಕ್ಕಟ್ಟನ್ನು ಎದುರಿಸುತ್ತಿತ್ತು, ನಾವು ಈ ಬಿಕ್ಕಟ್ಟನ್ನು ಕೊನೆಗೊಳಿಸಿದ್ದೇವು. ಪಾಕಿಸ್ತಾನದಾದ್ಯಂತ ಭಯೋತ್ಪಾದನೆಯನ್ನು ಕೊನೆಗೊಳಿಸಿದೆವು, ಕರಾಚಿಗೆ ಶಾಂತಿಯನ್ನು ತಂದೆವು. (ಶರೀಫ್ ಅವರ ಹಾಸ್ಯ ! – ಸಂಪಾದಕರು) ನಂತರ ಅಭಿವೃದ್ಧಿಯ ಯುಗ ಬಂದಿತು; ಆದರೆ ಈಗಿನ ಹಣದುಬ್ಬರ ನೋಡಿದರೆ ನಾವೇ ನಮ್ಮ ಕಾಲಿಗೆ ಕೊಡಲಿ ಏಟು ಹಾಕಿದ್ದೇವೆ. 2014ರಲ್ಲಿ ನಮ್ಮ ಸರಕಾರದ ಅವಧಿಯಲ್ಲಿ ಹಣದುಬ್ಬರ ಕಡಿಮೆಯಾಗಿತ್ತು. ಆಗ 2 ರೂಪಾಯಿಗೆ ಸಿಗುತ್ತಿದ್ದ ರೊಟ್ಟಿ ಈಗ 30 ರೂಪಾಯಿಗೆ ಸಿಗುತ್ತಿದೆ ಎಂದು ಹೇಳಿದರು.