ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಿಂದ ಪುನಃ ಪರಮಾಣು ದಾಳಿಯ ಬೆದರಿಕೆ !

ದಕ್ಷಿಣ ಕೊರಿಯಾ ಮತ್ತು ಅಮೆರಿಕಾ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿವೆ !

ಪ್ಯೊಂಗ್ಯಾಂಗ್ (ಉತ್ತರ ಕೊರಿಯಾ) – ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತೊಮ್ಮೆ ಪರಮಾಣು ದಾಳಿಯ ಬೆದರಿಕೆ ಹಾಕಿದ್ದಾರೆ. ಪ್ರಚೋದನೆ ನೀಡಿದರೆ ಅಣ್ವಸ್ತ್ರ ದಾಳಿನಡೆಸಲು ಹಿಂದೆಮುಂದೆ ನೋಡುವುದಿಲ್ಲ ಎಂಬುದು ನಮ್ಮ ದೇಶದ ನೀತಿಯಾಗಿದೆ ಎಂದರು. ಡಿಸೆಂಬರ್ 18 ರಂದು ಉತ್ತರ ಕೊರಿಯಾ ‘ಹವಾಸಾಂಗ್-18’ ಹೆಸರಿನ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ ಎಂದು ಹೇಳಲಾಗಿದೆ. ದಕ್ಷಿಣ ಕೊರಿಯಾ ಮತ್ತು ಅಮೇರಿಕಾ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿವೆ ಮತ್ತು ಅದಕ್ಕಾಗಿ ಸಭೆಗಳನ್ನು ನಡೆಸುತ್ತಿವೆ ಎಂದು ಉನ್ ಹೇಳಿದ್ದಾರೆ.

1. ಕಳೆದ ವರ್ಷ, ವಿದೇಶಿ ತಜ್ಞರು ಉತ್ತರ ಕೊರಿಯಾದಲ್ಲಿ ಇನ್ನೂ ಪರಮಾಣು ಕ್ಷಿಪಣಿಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಪರಮಾಣು ಅಸ್ತ್ರಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.

2. ಉತ್ತರ ಕೊರಿಯಾ ಇತ್ತೀಚೆಗೆ ದೂರದ ವ್ಯಾಪ್ತಿಯ ಖಂಡಾಂತರ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಉತ್ತರ ಕೊರಿಯಾದ ಕೇಂದ್ರ ಸುದ್ದಿ ಸಂಸ್ಥೆ ‘ಕೆ.ಸಿ.ಎನ್‌.ಎ.’ಯು, ಡಿಸೆಂಬರ್ 20 ರಂದು ಕ್ಷಿಪಣಿ ತಯಾರಕರು ಮತ್ತು ಸೈನಿಕರನ್ನು ಭೇಟಿ ಮಾಡಿದ ಕಿಮ್ ಜಾಂಗ್ ಉನ್ ಅವರು ಹ್ವಾಸಾಂಗ್ -18 ಬ್ಯಾಲಿಸ್ಟಿಕ್ ಕ್ಷಿಪಣಿಯ ಯಶಸ್ವಿ ಉಡಾವಣೆಗಾಗಿ ಅವರನ್ನು ಅಭಿನಂದಿಸಿದರು.

ಉತ್ತರ ಕೊರಿಯಾ ಕಳೆದ 2 ವರ್ಷಗಳಲ್ಲಿ 100 ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಪರೀಕ್ಷಿಸಿದೆ !

ಉತ್ತರ ಕೊರಿಯಾ ಕಳೆದ ವರ್ಷ ಕಾನೂನನ್ನು ಜಾರಿಗೊಳಿಸಿತು. ಉತ್ತರ ಕೊರಿಯಾ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಬಹುದಾದ ಪರಿಸ್ಥಿತಿಗಳನ್ನು ಇದು ಉಲ್ಲೇಖಿಸುತ್ತದೆ. ಅದಕ್ಕಾಗಿಯೇ ಅದು ಪರಮಾಣು ಶಸ್ತ್ರಾಸ್ತ್ರಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ಕ್ಷಿಪಣಿಗಳನ್ನು ವೇಗವಾಗಿ ಪರೀಕ್ಷಿಸುತ್ತಿದೆ. 2022 ರಿಂದ ಇದು ಸುಮಾರು 100 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪರೀಕ್ಷಿಸಿದೆ.