|
ಮುರಾದಾಬಾದ (ಉತ್ತರಪ್ರದೇಶ) – ಇಲ್ಲಿಯ ಮೂಢಾಪಾಂಡೆ ಪ್ರದೇಶದಲ್ಲಿನ ಚಾಮುಂಡಾ ಮಾತೆಯ ದೇವಸ್ಥಾನದ ಗೋಡೆಯ ಕಾಮಗಾರಿ ನಡೆಯುತ್ತಿರುವಾಗ ಸ್ಥಳೀಯ ಮತಾಂಧ ಮುಸಲ್ಮಾನರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಅವರು ಉಪಸ್ಥಿತ ಹಿಂದುಗಳ ಜೊತೆಗೆ ವಾಗ್ವಾದ ನಡೆಸಿದರು. ಪರಿಸ್ಥಿತಿ ಹಿಡಿತಕ್ಕೆ ತರುವುದಕ್ಕಾಗಿ ಬಂದಿದ್ದ ಪೊಲೀಸರ ಮೇಲೆ ಅವರು ಕಲ್ಲು ತೂರಾಟ ಕೂಡ ನಡೆಸಿದರು. ಆ ಸಮಯದಲ್ಲಿ ಮುಸಲ್ಮಾನ ಮಹಿಳೆ ಕೂಡ ದಾಳಿ ನಡೆಸಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿರುವ ವಿಡಿಯೋದಲ್ಲಿ ಕಂಡು ಬಂದಿದೆ. ಡಿಸೆಂಬರ್ ೧೯ ರಂದು ನಡೆದಿರುವ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ೩೪ ಜನರ ವಿರುದ್ಧ ದೂರು ದಾಖಲಿಸಿದ್ದು ೫ ಜನರನ್ನು ಬಂಧಿಸಿದ್ದಾರೆ. ಇದರಲ್ಲಿ ಅಬ್ದುಲ್ಲಾ ಮತ್ತು ರಹೀಸ್ ಇವರ ಸಮಾವೇಶವಿದ್ದು ಅದರಲ್ಲಿ ಅವರ ಸಹಚರರನ್ನು ಕರೆಸಿ ಹಿಂಸಾಚಾರ ನಡೆಸಿದರು.
೧. ಚಾಮುಂಡಾ ಮಾತೆ ದೇವಸ್ಥಾನದ ಗೋಡೆಯ ಜೀರ್ಣೋದ್ಧಾರ ಮಾಡಲು ಅನೇಕ ದಿನಗಳಿಂದ ಹಿಂದೂ ಭಕ್ತರು ಅದರ ಕಾಮಗಾರಿಗೆ ಒತ್ತಾಯಿಸುತ್ತಿದ್ದರು.
೨. ಕಳೆದ ತಿಂಗಳು ನವಂಬರ್ ೨೫ ರಂದು ಇದರ ಕಾಮಗಾರಿ ಆರಂಭವಾದ ನಂತರ ಮುಸಲ್ಮಾನರು ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ಆದ್ದರಿಂದ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಗೋಡೆಯ ಕಾಮಗಾರಿಯ ಕೆಲಸ ನಿಲ್ಲಿಸಿದರು.
೩. ಅದರ ನಂತರ ಮತ್ತೆ ಡಿಸೆಂಬರ್ ೧೯ ರಂದು ಗೋಡೆಯ ಕಾಮಗಾರಿ ಕೆಲಸಕ್ಕೆ ಆರಂಭ ಮಾಡಿದಾಗ ಮುಸಲ್ಮಾನರು ಹಿಂಸಾಚಾರ ನಡೆಸಿದರು. ಈಗ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ತಂಡಗಳು ಉಪಸ್ಥಿತವಾಗಿತ್ತು ಪರಿಸ್ಥಿತಿಯನ್ನು ಹಿಡಿತಕ್ಕೆ ತಂದಿದ್ದಾರೆ.
೪. ಮುಸಲ್ಮಾನರಿಂದ ಜೈಬುನ್ನಿಶಾ ಎಂಬ ಮಹಿಳಾ ನ್ಯಾಯವಾದಿಯು, ಈ ದೇವಸ್ಥಾನ ಹಿಂದಿನಿಂದ ಇದ್ದಿದ್ದರೂ, ಈಗ ಹಿಂದೂಗಳು ಈ ದೇವಸ್ಥಾನದ ವಿಸ್ತಾರ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಂಪಾದಕೀಯ ನಿಲುವುಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಇವರ ಸರಕಾರ ಇದ್ದರೂ ಕೂಡ ಮುಸಲ್ಮಾನರ ಉದ್ಧಟತನ ನೋಡಿದರೆ ಕಾನೂನು ವ್ಯವಸ್ಥೆ ಬಗ್ಗೆ ಅವರಿಗೆ ಎಳ್ಳಷ್ಟು ಭಯ ಇಲ್ಲದಿರುವುದು ಕಾಣುತ್ತದೆ. ಇಂತಹವರಿಗೆ ಈಗ ಸರಕಾರ ಜೈಲಿಗೆ ಕಳುಹಿಸಿ ಕಠಿಣದಲ್ಲಿ ಕಠಿಣ ಶಿಕ್ಷೆ ನೀಡಬೇಕು ! ವಕ್ಫ್ ಕಾನೂನಿನ ಹೆಸರಿನಲ್ಲಿ ಹಿಂದೂಗಳ ಮತ್ತು ದೇಶದ ಲಕ್ಷಾಂತರ ಎಕರೆ ಭೂಮಿ ನುಂಗಿರುವ ಮುಸಲ್ಮಾನ ಜನಾಂಗದಿಂದ ಮುರಾದಾಬಾದ ಇಲ್ಲಿಯ ದೇವಸ್ಥಾನ ಕೂಡ ವಶಕ್ಕೆ ಪಡೆದರೆ ಆಶ್ಚರ್ಯ ಪಡಬಾರದು ! |