ನವ ದೆಹಲಿ – ದೇಶದಲ್ಲಿ ಕೊರೋನಾ ರೋಗಾಣುವಿನ ಸಂಕ್ರಮಣವಾಗಲು ಪ್ರಾರಂಭವಾಗಿದೆ. ಪ್ರತಿದಿನ ಕೊರೊನಾದ ಹೊಸ ಪ್ರಕರಣಗಳು ಹೆಚ್ಚುತ್ತಿದೆ. ಆತಂಕದ ವಿಷಯವೆಂದರೆ, ಕೇರಳದ ನಂತರ ಈಗ ಇನ್ನೂ ಎರಡು ರಾಜ್ಯಗಳಲ್ಲಿ ಕೊರೋನಾದ ರೋಗಿಗಳು ಕಂಡು ಬಂದಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಹೇಳಿಕೆಯ ಪ್ರಕಾರ ಮಹಾರಾಷ್ಟ್ರದಲ್ಲಿ ಒಂದು, ಹಾಗು ಗೋವಾದಲ್ಲಿ ೧೮ ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಕೊರೋನಾದ ಹೊಸ ಉಪತಳಿ (ಸಬ್ವೇರಿಯಂಟ್) ‘ಜೆಎನ್ ೧’ ಈ ಪ್ರಕರಣಗಳ ಸಮಾವೇಶ ಇದರಲ್ಲಿ ಇದೆ. ಆದ್ದರಿಂದ ಮತ್ತೊಮ್ಮೆ ಕೊರೋನಾದ ಅಲೆ ಬರುವ ಸಾಧ್ಯತೆ ಇದೆ. ದೇಶದಲ್ಲಿ ಕೊರೋನಾದ ಸಕ್ರಿಯ ಪ್ರಕರಣಗಳು ಪ್ರತಿದಿನ ಹೆಚ್ಚುತ್ತಿದ್ದೂ ಅದರ ಸಂಖ್ಯೆ ೨ ಸಾವಿರಾದಾಟಿದೆ.
ಕೊರೊನಾದ ಈ ಹೊಸ ತಳಿಯ ಸಂದರ್ಭದಲ್ಲಿನ ಮಾಹಿತಿ
‘ಜೆಎನ್ ೧’ ಈ ರೋಗಾಣುವಿನ ತಳಿ ಅಮೇರಿಕಾ, ಸಿಂಗಾಪುರ್ ಮತ್ತು ಚೀನಾದಲ್ಲಿ ಉದ್ಭವಿಸಿದೆ. ಈ ತಳಿಯ ಹೆಚ್ಚುತ್ತಿರುವ ಪ್ರಕರಣಗಳನ್ನು ನೋಡಿದರೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಇದನ್ನು ‘ವೇರಿಯಂಟ್ ಆಫ್ ಇಂಟರೆಸ್ಟ್’ ಎಂದು ಹೇಳಲಾಗಿದೆ.
ಕೊರೊನಾದ ಹೆಚ್ಚುತ್ತಿರುವ ಪ್ರಕರಣಗಳನ್ನು ನೋಡುತ್ತಾ ತಜ್ಞರಿಂದ ಜನರಿಗೆ ಜಾಗರೂಕರಾಗಿರುವಂತೆ ಸಲಹೆ ನೀಡಲಾಗಿದೆ. ಜನರು ಜನಜಂಗುಳಿ ಇರುವ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಬೇಕು.
ಎಲ್ಲಾ ರಾಜ್ಯಗಳಲ್ಲಿ ಜನರು ಜಾಗರೂಕರಾಗಿರುವುದು ಆವಶ್ಯಕ ! – ಡಾ. ಅಜಿತ್ ಜೈನ
ದೆಹಲಿಯ ರಾಜೀವ ಗಾಂಧಿ ಆಸ್ಪತ್ರೆಯಲ್ಲಿನ ಹಿರಿಯ ಕೋವಿಡ ಅಧಿಕಾರಿಯಾಗಿರುವ ಡಾ. ಅಜಿತ ಜೈನ ಇವರು, ‘ಕೊರೊನಾದ ಹೊಸ ತಳಿಯನ್ನು ಹಗುರವಾಗಿ ಪರಿಗಣಿಸಬಾರದು. ಈಗ ಇದು ‘ವೇರಿಯಂಟ್’ ಲಕ್ಷಣಗಳು ಸೌಮ್ಯವಾಗಿದ್ದರೂ ಪ್ರಕರಣಗಳು ಯಾವ ರೀತಿ ಹೆಚ್ಚುತ್ತಿದೆ, ಇದನ್ನು ಗಮನಿಸಿದರೆ ಜಾಗರೂಕರಾಗಿರುವುದು ಅವಶ್ಯಕವಾಗಿದೆ. ವಿಶೇಷವಾಗಿ ವಯೋವೃದ್ಧ ರೋಗಿಗಳು ಮತ್ತು ಯಾರಿಗೆ ಮೊದಲೇ ಗಂಭೀರವಾದ ಕಾಯಿಲೆ ಇದೆ ಅಂತಹವರು ವಿಶೇಷ ಕಾಳಜಿ ವಹಿಸಬೇಕು. ಈ ‘ವೇರಿಯಂಟ್’ ಸಮಾಜದಲ್ಲಿ ಉದ್ಭವಿಸಿದೇ ಅಥವಾ ಇಲ್ಲ ಇದನ್ನು ಕೂಡ ಗಮನಿಸಬೇಕು. ಹಾಗೆ ಏನಾದರೂ ಇದ್ದರೆ ಬರುವ ವಾರದಲ್ಲಿ ಕೊರೋನಾದ ಸಂದರ್ಭದಲ್ಲಿ ಜಾಗರೂಕತೆ ಹೆಚ್ಚಿಸಬೇಕಾಗುತ್ತದೆ, ಎಂದು ಹೇಳಿದ್ದಾರೆ.