‘ಅಮೇರಿಕಾ ಭಾರತವನ್ನು ನಿಷೇಧಿಸಬೇಕಂತೆ !’ – ಅಮೇರಿಕೆಯ ಸರಕಾರಿ ಸಂಸ್ಥೆಯಿಂದ ಬೇಡಿಕೆ

  • ಅಮೇರಿಕೆಯ ಸರಕಾರಿ ಸಂಸ್ಥೆಯಿಂದ ಸತತ ಮೂರನೇ ವರ್ಷ ಬೇಡಿಕೆ!

  • ಭಾರತದಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ದಾಳಿಯ ವಿರುದ್ಧದ ಧ್ವನಿ

ವಾಷಿಂಗ್ಟನ್ (ಅಮೇರಿಕಾ) – ‘ಯುಎಸ್ ಕಮಿಷನ್ ಆನ್ ಇಂಟರ್‌ನ್ಯಾಷನಲ್ ರಿಲಿಜಿಯಸ್ ಫ್ರೀಡಂ’ ಹೆಸರಿನ ಅಮೇರಿಕೆಯ ಸರಕಾರಿ ಸಂಸ್ಥೆಯು ‘ಭಾರತದಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನಿರಂತರ ದಾಳಿ ನಡೆಯುತ್ತಿದೆ’ ಎಂದು ಹೇಳುತ್ತಾ, ಸತತ ಮೂರನೇ ವರ್ಷವೂ ಭಾರತದ ಮೇಲೆ ನಿರ್ಬಂಧಗಳನ್ನು ಹೇರಬೇಕೆಂದು ಒತ್ತಾಯಿಸಿದೆ. ಈ ಸಂಸ್ಥೆಯಿಂದ ನಿರಂತರವಾಗಿ ಭಾರತ ವಿರೋಧಿ ಶಿಫಾರಸ್ಸಿನ ಬಳಿಕವೂ ಜೋ ಬೈಡನ್ ಸರಕಾರವು ಭಾರತದ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಭಾರತದಲ್ಲಿನ ಅಮೇರಿಕೆಯ ರಾಯಭಾರ ಕಚೇರಿಯು ಈ ಶಿಫಾರಸ್ಸಿನ ಮೇಲೆ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಅದರೊಂದಿಗೆ ಭಾರತವು ಈ ಆರೋಪಗಳನ್ನು ನಿರಂತರವಾಗಿ ವಿರೋಧಿಸುತ್ತಿದೆ.

1. ಈ ಸಂಸ್ಥೆಯ ಹೇಳಿಕೆಯ ಅನುಸಾರ, ಭಾರತ ಸರಕಾರ ವಿದೇಶದಲ್ಲಿ ವಾಸಿಸುತ್ತಿರುವ ಭಾರತೀಯ ವಂಶದ ಅಲ್ಪಸಂಖ್ಯಾತರನ್ನು ಗುರಿಯಾಗಿಸುತ್ತದೆ. ಇದರಿಂದಾಗಿ ‘ವಿಶೇಷ ಚಿಂತೆಯಿರುವ ದೇಶ’ಗಳ ಪಟ್ಟಿಯಲ್ಲಿ ಭಾರತವನ್ನು ಸೇರಿಸಲು ಸಂಸ್ಥೆ ಶಿಫಾರಸು ಮಾಡಿದೆ.

2. ಈ ಸಂಸ್ಥೆಯ ಆಯುಕ್ತ ಸ್ಟೀಫನ ಶ್ನೇಕ ಇವರು ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ನಿಜ್ಜರನ ಹತ್ಯೆ ಮತ್ತು ಗುರುಪತವಂತ ಸಿಂಹ ಪನ್ನು ಮೇಲೆ ದಾಳಿ ನಡೆಸುವ ಪ್ರಯತ್ನಗಳನ್ನು ತಿಳಿಸುತ್ತಾ, ‘ಇದು ಅತ್ಯಂತ ಚಿಂತೆಯ ವಿಷಯವಾಗಿದೆ ‘ ಎಂದು ಸಂಘಟನೆಯ ಕಮಿಷನರ್ ಸ್ಟೀಫನ್ ಶ್ನೆಕ್ ಹೇಳಿದ್ದಾರೆ.