ಜ್ಞಾನವಾಪಿ ಸಮೀಕ್ಷೆಯ ಮೊಹರು ವರದಿಯನ್ನು ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಕೆ !

ವರದಿಯನ್ನು ಬಹಿರಂಗ ಪಡಿಸಲು ಹಿಂದೂ ಪಕ್ಷದ ಆಗ್ರಹವಿದ್ದರೆ, ಮುಸ್ಲಿಂ ಪಕ್ಷದ ವಿರೋಧ !

ವಾರಾಣಸಿ (ಉತ್ತರ ಪ್ರದೇಶ) – ಭಾರತೀಯ ಪುರಾತತ್ವ ಇಲಾಖೆಯು ವಾರಾಣಸಿಯ ಜಿಲ್ಲಾ ನ್ಯಾಯಾಲಯದಲ್ಲಿ ಜ್ಞಾನವಾಪಿಯಲ್ಲಿ ನಡೆಸಿದ ಸಮೀಕ್ಷೆಯ ಮೊಹರು ವರದಿಯನ್ನು ಸಲ್ಲಿಸಿದೆ. ವರದಿ ಸಲ್ಲಿಸುವಾಗ ಹಿಂದೂ ಪಕ್ಷದ ಪರ ವಕೀಲ ವಿಷ್ಣು ಶಂಕರ್ ಜೈನ್ ಸೇರಿದಂತೆ ಎಲ್ಲ ಕಕ್ಷಿದಾರರು ನ್ಯಾಯಾಲಯದಲ್ಲಿ ಹಾಜರಾಗಿದ್ದರು. ಈ ವರದಿಯನ್ನು ಬಹಿರಂಗಗೊಳಿಸಬಾರದು ಎಂದು ಮುಸ್ಲಿಂ ಪಕ್ಷ ಆಗ್ರಹಿಸಿದೆ. ಅದಕ್ಕೆ ಹಿಂದೂ ಪಕ್ಷದಿಂದ ಆಕ್ಷೇಪ ವ್ಯಕ್ತವಾಗಿತ್ತು. ಈ ವರದಿಯು ಸುಮಾರು 1 ಸಾವಿರದ 500 ಪುಟಗಳಷ್ಟಿದೆ ಎಂದು ಹೇಳಲಾಗುತ್ತಿದೆ. ‘ಈ ವರದಿಯನ್ನು ಮೊಹರು ಮಾಡಿ ಸಲ್ಲಿಸಬೇಕು’ ಎಂಬ ಬೇಡಿಕೆಯ ಅರ್ಜಿಯನ್ನು ಈಗಾಗಲೇ ಮುಸ್ಲಿಂ ಪಕ್ಷದ ಪರವಾಗಿ ನ್ಯಾಯಾಲಯದಲ್ಲಿ ದಾಖಲಿಸಲಾಗಿತ್ತು.

(ಸೌಜನ್ಯ – News 18 Uttarakhand)

ನವಂಬರ 30 ರಂದು ಜ್ಞಾನವಾಪಿ ಸಮೀಕ್ಷೆ ವರದಿಯನ್ನು ಸಲ್ಲಿಸಲು ಪುರಾತತ್ವ ಇಲಾಖೆ 3 ವಾರಗಳ ಕಾಲಾವಕಾಶ ಕೇಳಿತ್ತು. ಇದಕ್ಕಾಗಿ ನ್ಯಾಯಾಲಯ 10 ದಿನಗಳ ಕಾಲಾವಕಾಶ ನೀಡಿತ್ತು. ಇದಾದ ಬಳಿಕ ಮತ್ತೆ ಸಮಯವನ್ನು ಹೆಚ್ಚಿಸಲಾಯಿತು. ಅಂತಿಮವಾಗಿ ಈ ವರದಿಯನ್ನು ಡಿಸೆಂಬರ್ 18 ರಂದು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು.
ನ್ಯಾಯಾಲಯದ ಆದೇಶದ ನಂತರ 100 ದಿನಗಳ ಕಾಲ ಜ್ಞಾನವಾಪಿ ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷೆ ವೇಳೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಎರಡೂ ಪಕ್ಷಗಳ ಪ್ರತಿನಿಧಿಗಳು ಹಾಜರಿದ್ದರು. ಸಮೀಕ್ಷೆಯನ್ನು ಚಿತ್ರೀಕರಿಸಲಾಗಿದೆ.