PMO Officer Arrest : ಪ್ರಧಾನಮಂತ್ರಿ ಕಚೇರಿಯ ಅಧಿಕಾರಿ ಎಂದು ಹೇಳಿಕೊಂಡಿದ್ದ ಸೈಯದ್ ಬುಖಾರಿಯ ಬಂಧನ !

  • ಡಾಕ್ಟರ್ ಎಂದು ಹೇಳಿಕೊಂಡು 6-7 ಯುವತಿಯರೊಂದಿಗೆ ವಿವಾಹ!

  • ಪಾಕಿಸ್ತಾನಿ ಗೂಢಚಾರಿಯಾಗಿರಬಹುದೆಂದು ಸಂಶಯ!

ಭುವನೇಶ್ವರ (ಒಡಿಶಾ) – ಒಡಿಶಾ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಜಾಜ್‌ಪುರ ಜಿಲ್ಲೆಯಿಂದ ಸೈಯದ ಇಶಾನ ಬುಖಾರಿ ಹೆಸರಿನ ಓರ್ಬ ಕಾಶ್ಮೀರಿ ಮುಸಲ್ಮಾನನ್ನು ಬಂಧಿಸಿದ್ದಾರೆ. ಅವನು ಕೆಲವೊಮ್ಮೆ ತನ್ನನ್ನು ಪ್ರಧಾನಮಂತ್ರಿ ಕಚೇರಿಯ ಅಧಿಕಾರಿ, ಕೆಲವೊಮ್ಮೆ ಭಾರತೀಯ ಸೇನೆಯ ವೈದ್ಯಕೀಯ ಅಧಿಕಾರಿ, ಕೆಲವೊಮ್ಮೆ ‘ನ್ಯೂರೋ ಸರ್ಜನ್’, ಮತ್ತು ಕೆಲವೊಮ್ಮೆ ರಾಷ್ಟ್ರೀಯ ತನಿಖಾದಳದ ಅಧಿಕಾರಿಯ ನಿಕಟವರ್ತಿಯೆಂದು ಹೇಳಿ ಜನರನ್ನು ವಂಚಿಸುತ್ತಿದ್ದನು. ಆತನು ಪಾಕಿಸ್ತಾನದ ಹಲವು ಅನುಮಾನಾಸ್ಪದ ಜನರೊಂದಿಗೆ ಸಂಪರ್ಕ ಹೊಂದಿರುವುದರಿಂದಾಗಿ, ಆತ ಪಾಕಿಸ್ತಾನಿ ಗೂಢಚಾರಿಯಾಗಿರಬಹುದು ಎಂಬ ಸಂಶಯವಿದೆ. ಅವನ ವಿರುದ್ಧ ಹಲವು ಸಾಕ್ಷ್ಯಗಳು ದೊರಕಿವೆ.

1. ಸೈಯದ ಇಶಾನ ಬುಖಾರಿ ಉರ್ಫ ಇಶಾನ್ ಬುಖಾರಿ ಉರ್ಫ ಡಾ.ಇಶಾನ್ ಬುಖಾರಿ ಇವು ಆ ಯುವಕನ ಹೆಸರುಗಳಾಗಿವೆ. ಅವನು ಕಾಶ್ಮೀರದ ಕುಪವಾಡಾ ನಿವಾಸಿಯಾಗಿದ್ದು, 2018 ರಿಂದ ಒಡಿಶಾದಲ್ಲಿ ವಾಸಿಸುತ್ತಿದ್ದಾನೆ.

2. ಸೈಯದ ತನ್ನ ಗುರುತನ್ನು ಮರೆಮಾಚಿ , ಕಾಶ್ಮೀರ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಒಡಿಶಾ ಸೇರಿದಂತೆ ಭಾರತದ ಅನೇಕ ರಾಜ್ಯಗಳಲ್ಲಿ ಅಂದಾಜು 6-7 ಯುವತಿಯರನ್ನು ಮದುವೆಯಾಗಿದ್ದಾನೆ. ಈತನು ಅನೇಕ ಯುವತಿಯರೊಂದಿಗೆ ಸಂಬಂಧವನ್ನು ಇಟ್ಟುಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

3. ಈ ಯುವಕನು ಅನೇಕ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳಿಂದ ವೈದ್ಯಕೀಯ ಪದವಿಗಳನ್ನು ಪಡೆದಿದ್ದಾನೆ. ಓಡಿಸ್ಸಾದ ಪೊಲೀಸ ಮಹಾ ನಿರೀಕ್ಷಕರಾಗಿರುವ ಜಯ ನಾರಾಯಣ ಪಂಕಜ ಇವರು ಮಾತನಾಡಿ, ಸಯ್ಯದ ಅಮೇರಿಕೆಯ ಕಾರ್ನೆಲ್ ವಿಶ್ವವಿದ್ಯಾಲಯ, ಕೆನಡಾದ ಆರೋಗ್ಯ ಸೇವಾ ಸಂಸ್ಥೆ ಮತ್ತು ಇತರ ವಿಶ್ವವಿದ್ಯಾಲಯಗಳು ನೀಡಿರುವ ವೈದ್ಯಕೀಯ ಪದವಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

4. ಇದಲ್ಲದೇ, 4 ಮೊಬೈಲಗಳು, ಹಲವಾರು ಗುರುತು ಪತ್ರಗಳು ಮತ್ತು ಖಾಲಿ ಡಿ.ಡಿ. ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಂಪಾದಕೀಯ ನಿಲುವು

ಇಷ್ಟು ವರ್ಷಗಳಿಂದ ಜನರನ್ನು ಮೋಸಗೊಳಿಸುತ್ತಿದ್ದರೂ, ಇಂತಹ ಜನರು ಕಾನೂನಿನ ಇಕ್ಕಳದಲ್ಲಿ ಸಿಲುಕದೇ ಇರುವುದನ್ನು ನೋಡಿದರೆ, ಕಾನೂನು- ಸುವ್ಯವಸ್ಥೆ ಮತ್ತಷ್ಟು ಕಠಿಣಗೊಳಿಸುವ ಆವಶ್ಯಕತೆಯಿದೆಯೆನ್ನುವುದು ಗಮನಕ್ಕೆ ಬರುತ್ತದೆ.

ಭಾರತದಲ್ಲಿ ಅಲ್ಪಸಂಖ್ಯಾತರಾಗಿರುವವರು ಅಪರಾಧದಲ್ಲಿ ಮಾತ್ರ ಬಹುಸಂಖ್ಯಾತರಾಗಿದ್ದಾರೆ.