ವಿದೇಶಿ ಸಂಸ್ಥೆಗಳ ಸಮೀಕ್ಷೆಯ ಫಲಿತಾಂಶ
ವಾಷಿಂಗ್ಟನ್ (ಅಮೇರಿಕಾ) – ಅಮೇರಿಕನ್ ಸಂಸ್ಥೆ `ಗ್ಯಾಲಪ್’ ಮತ್ತು ಜಪಾನಿನ ಒಂದು ಖಾದ್ಯಪದಾರ್ಥ ತಯಾರಿಸುವ ಸಂಸ್ಥೆಯವರು ನಡೆಸಿದ ಸಮೀಕ್ಷೆಯಲ್ಲಿ ಯಾವ ಜನರು ಕುಟುಂಬದವರೊಂದಿಗೆ ಮತ್ತು ಸ್ನೇಹಿತರೊಂದಿಗೆ ನಿಯಮಿತವಾಗಿ ಅಡುಗೆಯನ್ನು ತಯಾರಿಸಿ ಅದನ್ನು ಸೇವಿಸುತ್ತಾರೆಯೋ, ಅವರ ಶರೀರ ಆರೋಗ್ಯಕರವಾಗಿರುತ್ತದೆ ಮತ್ತು ಅವರ ಆತ್ಮವೂ ತೃಪ್ತಿಯಿಂದಿರುತ್ತದೆ. ಆದುದರಿಂದ ಅವರ ದಿನಚರಿಯೂ ಚೆನ್ನಾಗಿರುತ್ತದೆಯೆಂದು ತೀರ್ಮಾನಕ್ಕೆ ಬರಲಾಗಿದೆ. 42 ದೇಶಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿತ್ತು.
1. ವರದಿಯ ಪ್ರಕಾರ, ಅಡುಗೆಯನ್ನು ತಯಾರಿಸುವ ಆನಂದ ಮತ್ತು ಉತ್ತಮ ಜೀವನದ ನಡುವೆ ಸಕಾರಾತ್ಮಕ ಸಂಬಂಧವಿದೆ. ಅಡುಗೆಯನ್ನು ತಯಾರಿಸುವಾಗ ಆನಂದದ ಅನುಭೂತಿಯನ್ನು ಪಡೆಯುವವರ ಆಯುಷ್ಯದಲ್ಲಿ ಯಶಸ್ವಿಯಾಗುವ ಸಾಧ್ಯತೆಯು ` ಅಡುಗೆಯನ್ನು ತಯಾರಿಸುವಾಗ ಸಿಗಲಿಲ್ಲ’ ಎನ್ನುವವರ ತುಲನೆಯಲ್ಲಿ ಒಂದೂವರೆ ಪಟ್ಟು ಅಧಿಕವಾಗಿದೆ. ಹಾಗೆಯೇ ಯಾವ ಜನರು ಯಾವಾಗಲೂ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆಯೋ, ಅವರ ಸಾಮಾಜಿಕ ಸಂಬಂಧಗಳು ಗಾಢವಾಗಿರುತ್ತದೆ ಮತ್ತು ಅವರ ಆರೋಗ್ಯವು ಉತ್ತಮವಾಗಿರುತ್ತದೆ.
2. ವರದಿಯಲ್ಲಿ ಅಧಿಕ ಉತ್ಪನ್ನವಿರುವ ದೇಶಗಳಲ್ಲಿ ಒಬ್ಬಂಟಿಯಾಗಿ ತಿನ್ನುವ ಪ್ರವೃತ್ತಿ ಹೆಚ್ಚುತ್ತಿದೆ. ಒಬ್ಬಂಟಿಯಾಗಿ ಊಟ ಮಾಡುವವರು, ತಮ್ಮ ಗುರುತಿನ ಜನರೊಂದಿಗೆ ಹೋಲಿಸಿದಾಗ ಕಡಿಮೆ ಸಾಮಾಜಿಕ ಸಂಪರ್ಕವನ್ನು ಹೊಂದಿರುತ್ತಾರೆ ಎಂದು ಹೇಳಲಾಗಿದೆ
3. ಜಗತ್ತಿನಾದ್ಯಂತದ ಜನರು ಒಲವನ್ನು(?) ನೋಡಿದಾಗ ಯಾವ ಜನರು ವಾರದಲ್ಲಿ 4 ಸಲ ಕುಟುಂಬದವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಊಟ ಮಾಡುತ್ತಾರೆಯೋ, ಅವರಲ್ಲಿ ಆನಂದ ಮತ್ತು ಗೌರವದ ಭಾವನೆಗಳ ಅರಿವು ಅಧಿಕವಿದೆ. ಅವರ ದಿನಚರಿಯಲ್ಲಿ ಚೆನ್ನಾಗಿ ವಿಶ್ರಾಂತಿ ಪಡೆಯುವುದು, ನಗುವುದು, ಏನನ್ನಾದರೂ ಕಲಿಯುವುದು ಅಥವಾ ಮನೋರಂಜನೆ ಮಾಡುವುದು ಇತ್ಯಾದಿ ವಿಷಯಗಳು ಸೇರಿರುತ್ತದೆ.
ಸಂಪಾದಕೀಯ ನಿಲುವುಹಿಂದೂ ಧರ್ಮದಲ್ಲಿ ಕುಟುಂಬ ವ್ಯವಸ್ಥೆಯಿದೆ ಮತ್ತು ಬಹಳ ಹಿಂದಿನ ಕಾಲದಿಂದಲೂ ಕುಟುಂಬದಲ್ಲಿ ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಆಹಾರವನ್ನು ಸ್ವೀಕರಿಸುವುದು, ಮುಂತಾದ ವಿಷಯಗಳು ಕೂಡು ಕುಟುಂಬದಲ್ಲಿ ನಡೆಯುತ್ತಿತ್ತು. ಈಗ ಪಾಶ್ಚಿಮಾತ್ಯರ ಅಂಧಾನುಕರಣೆಯಿಂದ ಇಂತಹ ವಿಷಯಗಳು ಅಪರೂಪವಾಗಿವೆ. ಹಿಂದೂಗಳು ಈ ಬಗ್ಗೆ ಯೋಚಿಸುವುದು ಆವಶ್ಯಕವಾಗಿದೆ! |