ಪುಣೆಯ ನಾರಾಯಣಗಾಂವ್‌ನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳನ್ನು ಹಿಡಿದ ಉಗ್ರ ನಿಗ್ರಹ ದಳ !

ಪುಣೆ – ನಾರಾಯಣಗಾಂವ್ ಪ್ರದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ 8 ಬಾಂಗ್ಲಾದೇಶಿ ಪ್ರಜೆಗಳನ್ನು ರಾಜ್ಯ ಉಗ್ರ ನಿಗ್ರಹ ದಳ (‘ಎಟಿಎಸ್’) ಡಿಸೆಂಬರ್ 14 ರಂದು ಬಂಧಿಸಿದೆ. ಅಕ್ರಮ ವಾಸಕ್ಕಾಗಿ 8 ಬಾಂಗ್ಲಾದೇಶಿ ಪ್ರಜೆಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರನ್ನು ಎಟಿಎಸ್ ವಿಚಾರಣೆ ನಡೆಸುತ್ತಿದೆ. ಅವರ ಹೆಸರುಗಳು ಮೆಹಬುಲ್ ಶೇಖ್, ರಾಣಾ ಮಂಡಲ್, ಗಫೂರ್ ಶೇಖ್, ಆಲಂಗೀರ್ ಮಂಡಲ್, ಶಾಲೋಮ್ ಮಂಡಲ್, ಅಫ್ಜಲ್ ಖಾನ್, ಕಬೀರ್ ಮುಲ್ಲಾ ಮತ್ತು ಜಮಾತ್ ಅಲಿ ಮಂಡಲ್ ಎಂದಾಗಿದೆ. ಪ್ರಾಥಮಿಕ ತನಿಖೆಯಲ್ಲಿ, ಈ ಬಾಂಗ್ಲಾದೇಶಿ ಪ್ರಜೆಗಳು ನಕಲಿ ದಾಖಲೆಗಳ ಆಧಾರದ ಮೇಲೆ ಭಾರತವನ್ನು ಪ್ರವೇಶಿಸಿದ್ದಾರೆ ಎಂದು ಕಂಡುಬಂದಿದೆ. (ಬಾಂಗ್ಲಾದೇಶಿ ನುಸುಳುಕೋರರಿಗೆ ನಮ್ಮದೇ ಭ್ರಷ್ಟ ವ್ಯವಸ್ಥೆಯಿಂದ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇತ್ಯಾದಿ ದಾಖಲೆಗಳನ್ನು ಒದಗಿಸಲಾಗಿದೆ, ಇದು ಭದ್ರತಾ ದೃಷ್ಟಿಯಿಂದ ಗಂಭೀರವಾಗಿದೆ. ಇದರ ಜೊತೆಗೆ, ನುಸುಳುಕೋರರು ನಕಲಿ ದಾಖಲೆಗಳನ್ನು ಮಾಡುತ್ತಾರೆ, ಪೊಲೀಸರು ಅಥವಾ ಆಡಳಿತ ಗಮನಿಸಿಯೂ ಇಲ್ಲ, ಇದು ಪೊಲೀಸರ ಮತ್ತು ಆಡಳಿತ ವರ್ಗದ ಬೇಜವಾಬ್ದಾರಿತನವೇ ಆಗಿದೆ ! – ಸಂಪಾದಕ) ಈ ನುಸುಳುಕೋರರು ನಾರಾಯಣಗಾಂವ್ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಕಂಡುಬಂದಿದೆ.

ಹೆಚ್ಚುತ್ತಿರುವ ಬಾಂಗ್ಲಾದೇಶಿ ನುಸುಳುಕೋರರ ಸಂಖ್ಯೆ ಮತ್ತು ಭಯೋತ್ಪಾದಕರ ಚಟುವಟಿಕೆಗಳಿಂದಾಗಿ ಸಾಮಾನ್ಯ ನಾಗರಿಕರಿಗೆ ಅಸುರಕ್ಷಿತವಾಗಿರುವ ಪುಣೆ !

ಒಂದು ವಾರದ ಹಿಂದೆ, ಪುಣೆ ಮತ್ತು ಠಾಣೆ ಪ್ರದೇಶಗಳಲ್ಲಿ ಐಸಿಸ್‌ನ ಭಯೋತ್ಪಾದಕ ವಿಚಾರಗಳನ್ನು ಹರಡುತ್ತಿದ್ದ 15 ಜನರನ್ನು ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.) ಮತ್ತು ಎ.ಟಿ.ಎಸ್. ಬಂಧಿಸಿತ್ತು. ಈ ವೇಳೆ ಕೊಂಡ್ವಾ ಮೂಲದ ಇಬ್ಬರನ್ನು ವಿಚಾರಣೆಗೊಳಪಡಿಸಲಾಗಿತ್ತು. 3 ತಿಂಗಳ ಹಿಂದೆ ಪುಣೆ ಪೊಲೀಸರು ಪೇಠ್‌ನಲ್ಲಿರುವ ವೇಶ್ಯಾಗೃಹದಲ್ಲಿ ಕಾರ್ಯಾಚರಣೆ ನಡೆಸಿ ಬಾಂಗ್ಲಾದೇಶದ ಮಹಿಳೆಯರ ಸಹಿತ ಸಹಚರರನ್ನು ಬಂಧಿಸಿದ್ದರು. ಅವರ ವಿರುದ್ಧ ಅಕ್ರಮ ವಾಸಕ್ಕಾಗಿ ಪ್ರಕರಣಗಳು ದಾಖಲಾಗಿವೆ.

ಸಂಪಾದಕರ ನಿಲುವು

* ಭಾರತದಲ್ಲಿರುವ ಅಪರಾಧಿಗಳಲ್ಲಿ ಬಾಂಗ್ಲಾದೇಶಿ ನುಸುಳುಕೋರರ ಸಂಖ್ಯೆ ಲಕ್ಷಗಟ್ಟಲೆ ಇರರಬಹುದು ! ಸರಕಾರ ಅವರನ್ನು ಆದಷ್ಟು ಬೇಗ ದೇಶದಿಂದ ಹೊರಗಟ್ಟಬೇಕು !