ಪರಾರಿಯಾಗಿದ್ದ ಆರೋಪಿ ಲಲಿತ್ ಝಾ ಶರಣಾಗತಿ !

ಲೋಕಸಭೆಯಲ್ಲಿ ನುಸುಳಿದ ಪ್ರಕರಣ

ಲಲಿತನು ನಾಲ್ವರು ಆರೋಪಿಗಳ ಮೊಬೈಲ್ ಸುಟ್ಟು ಸಾಕ್ಷ್ಯ ನಾಶ !

ನವ ದೆಹಲಿ – ಲೋಕಸಭೆಗೆ ನುಗ್ಗಿದ ಪ್ರಕರಣದ ಪರಾರಿಯಾಗಿದ್ದ ಆರೋಪಿ ಲಲಿತ್ ಝಾ ಪೊಲೀಸರ ಮುಂದೆ ಶರಣಾಗಿದ್ದಾನೆ. ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನ್ಯಾಯಾಲಯವು 1 ವಾರ ಪೊಲೀಸ್ ಕಸ್ಟಡಿಯಲ್ಲಿ ಇಡಲು ಆದೇಶಿಸಿದೆ. ಘಟನೆಯ ವೇಳೆ ಲಲಿತ್ ಝಾ ಸಂಸತ್ತಿನ ಆವರಣದ ಹೊರಗೆ ಇದ್ದನು. ಉಳಿದ 4 ಆರೋಪಿಗಳ ಸೆಲ್ ಫೋನ್ ಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ಹಾಗೂ ಘಟನೆಯ ಬಳಿಕ ಈ ಎಲ್ಲಾ ಸೆಲ್ ಫೋನ್ ಗಳ ಸಹಿತ ಪರಾರಿಯಾಗಿದ್ದ. ಪೊಲೀಸರು ಆತನ ಜಾಡು ಹಿಡಿದಿದ್ದರು. ಪರಾರಿಯಾದ ನಂತರ, ಲಲಿತ್ ಈ ಎಲ್ಲಾ ಮೊಬೈಲ್ ಗಳನ್ನು ಸುಟ್ಟು ಸಾಕ್ಷಿ ನಾಶಪಡಿಸಿದ್ದಾನೆ. ಈ ಘಟನೆಯ ತನಿಖೆಯ ಅಡಿಯಲ್ಲಿ ಈ ಘಟನೆಯು ನಿಜವಾಗಿ ಹೇಗೆ ಸಂಭವಿಸಿತು ಎಂಬ ದೃಶ್ಯವನ್ನು ರಚಿಸಲು ದೆಹಲಿ ಪೊಲೀಸರು ಆರೋಪಿಯನ್ನು 1-2 ದಿನಗಳಲ್ಲಿ ಸಂಸತ್ ಭವನಕ್ಕೆ ಕರೆದೊಯ್ಯುತ್ತಾರೆ.

ಬಂಧಿತನಾಗಿರುವ ಆರೋಪಿ ವಿಶಾಲ್ ಶರ್ಮಾ ವಿಚಾರಣೆಯ ಸಮುದಲ್ಲಿ, ತನಗೆ ಯಾವುದೇ ಭಯೋತ್ಪಾದಕ ಸಂಘಟನೆಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾನೆ. ಒಂದೂವರೆ ವರ್ಷಗಳಿಂದ ಸಂಸತ್ತಿನೊಳಗೆ ನುಸುಳಲು ಸಂಚು ರೂಪಿಸಲಾಗಿತ್ತು. ಲಲಿತ್ ಘಟನೆಯ ದೃಶ್ಯಾವಳಿಗಳನ್ನು ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ಮಾಡುವವನಿದ್ದ. ಆರೋಪಿಗಳ ಬಳಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಕರಪತ್ರಗಳನ್ನು ಇತ್ತು ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಲೋಕಸಭೆಗೆ ನುಸುಳಲು 2 ಯೋಜನೆ ರೂಪಿಸಲಾಗಿತ್ತು !

ಆರೋಪಿಗಳು ಲೋಕಸಭೆಗೆ ನುಸುಳಲು 2 ಪ್ಲಾನ್ ಮಾಡಿದ್ದರು. ಮೊದಲ ಯೋಜನೆಯು ಯೋಜಿತ ರೀತಿಯಲ್ಲಿ ಯಶಸ್ವಿಯಾಗದಿದ್ದರೆ, ಪರ್ಯಾಯ ಯೋಜನೆಯನ್ನು ಜಾರಿಗೆ ತರಲು ಅವರು ಸಿದ್ದರಿದ್ದರು ಎಂದು ಲಲಿತ್ ಝಾ ಪೊಲೀಸರ ವಿಚಾರಣೆಯಲ್ಲಿ ತಿಳಿಸಿದ. ನೀಲಂ ಮತ್ತು ಅಮೋಲ್ ಅವರು ಯೋಜಿಸಿದಂತೆ ಸಂಸತ್ತಿಗೆ ತಲುಪಲು ಸಾಧ್ಯವಾಗದಿದ್ದರೆ, ನಾವು ಮಹೇಶ್ ಮತ್ತು ಕೈಲಾಶ್ ಅವರನ್ನು ಸಂಸತ್ತಿನ ಆವರಣಕ್ಕೆ ಇನ್ನೊಂದು ಬದಿಯಿಂದ ಕಳುಹಿಸಿದ್ದೇವೆ ಎಂದು ಲಲಿತ್ ಝಾ ಪೊಲೀಸರಿಗೆ ತಿಳಿಸಿದ. ಅಲ್ಲಿ ಅವರು ‘ಬಣ್ಣದ ಹೊಗೆ ಕೊಳವೆಗಳನ್ನು’ ಒಡೆದು ಮಾಧ್ಯಮಗಳ ಮುಂದೆ ಘೋಷಣೆಗಳನ್ನು ಕೂಗುವವರಿದ್ದರು, ಆದರೆ ಮಹೇಶ್ ಮತ್ತು ಕೈಲಾಶ್ ಗುರುಗ್ರಾಮದಲ್ಲಿರುವ ವಿಕ್ಕಿಯ ಮನೆಗೆ ತಲುಪಲು ಸಾಧ್ಯವಾಗಲಿಲ್ಲ. ಹಾಗಾಗಿ ಮೊದಲ ಯೋಜನೆಯಂತೆ ಅಮೋಲ್ ಮತ್ತು ನೀಲಂ ಅವರನ್ನು ಸಂಸತ್ ಆವರಣಕ್ಕೆ ಕಳುಹಿಸಲು ನಿರ್ಧರಿಸಿದೆವು. ಇಬ್ಬರಿಗೂ ನಿಯೋಜಿತ ಕೆಲಸವನ್ನು ಯಾವುದೇ ಸಂದರ್ಭದಲ್ಲೂ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿತ್ತು.

(ಸೌಜನ್ಯ : WION)

ಸಂಪಾದಕರ ನಿಲುವು

*ಸರಕಾರ ಇವರೆಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅವರ ಮಾಲೀಕರು ಯಾರು ಎಂದು ತನಿಖೆ ನಡೆಸಿ ಸತ್ಯವನ್ನು ಸಾರ್ವಜನಿಕರಿಗೆ ತಿಳಿಸಬೇಕು ?