ಇಸ್ಲಾಂನಲ್ಲಿ ಮಹಿಳೆಗೆ ಗೌರವವಿಲ್ಲ ಎಂದು ಹೇಳುತ್ತಾ ಮುಸ್ಲಿಂ ಶಿಕ್ಷಕಿಯ ‘ಘರವಾಪಸಿ’ !

ಬರೇಲಿ (ಉತ್ತರ ಪ್ರದೇಶ) – ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ನೇಹಾ ಅಸ್ಮತ್ ಎಂಬ 33 ವರ್ಷದ ಮಹಿಳೆ ಇಸ್ಲಾಂ ಧರ್ಮದಲ್ಲಿ ಮಹಿಳೆಯರಿಗೆ ಗೌರವ ನೀಡುತ್ತಿಲ್ಲ ಎಂದು ಹೇಳಿ ಹಿಂದೂ ಧರ್ಮ ಸ್ವೀಕರಿಸಿದ್ದಾರೆ. ಉಜ್ಜಯಿನಿಯಲ್ಲಿ ಮಹಾಕಾಲನ ಆಶೀರ್ವಾದ ಪಡೆದ ನಂತರ ಅವರು ಹಿಂದೂ ಧರ್ಮ ಸ್ವೀಕರಿಸಿದ್ದಾರೆಂದು ಘೋಷಿಸಿದರು. ನೇಹಾ ಅಸ್ಮತ್ ಇವರು ನೇಹಾ ಸಿಂಗ್ ಎಂಬ ಹೆಸರನ್ನು ಇಟ್ಟುಕೊಂಡಿದ್ದಾರೆ.

1. ಶಿಕ್ಷಕಿಯ ಕುಟುಂಬವು ಬಾರಾದರಿ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ ದೂರಿನಲ್ಲಿ, ನೇಹಾ ಅವರನ್ನು ಆಕೆಯ ಸಹ ಶಿಕ್ಷಕ ಮೋಹಿತ್ ಸಿಂಗ್ ಅಪಹರಿಸಿದ್ದಾರೆ ಎಂದು ಶಂಕಿಸಿದ್ದರು.

2. ‘ನನಗೆ ಮತ್ತು ನನ್ನ ಸ್ನೇಹಿತ ಮೋಹಿತ್ ಸಿಂಗ್ ಅವರ ಜೀವಕ್ಕೆ ಅಪಾಯವಿದೆ’ ಎಂದು ನೇಹಾ ಸಿಂಗ್ ಅವರು ಬರೇಲಿ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

3. ಈ ಪತ್ರದಲ್ಲಿ ನೇಹಾ ಸಿಂಗ್ ಇವರು, ‘ನನ್ನ ಕುಟುಂಬದವರು ನನ್ನನ್ನು ವಿವಾಹಿತ ಮುಸ್ಲಿಂನೊಂದಿಗೆ ಮದುವೆಯಾಗಲು ಸಂಚು ರೂಪಿಸಿದ್ದರು. ನಾನು ಇದನ್ನು ಒಪ್ಪಲಿಲ್ಲ. ನನ್ನ ಮನೆಯವರು ನನ್ನ ಮೇಲೆ ಒತ್ತಡ ಹೇರಿದಾಗ ನಾನು ಮನೆ ಬಿಟ್ಟೆ. ಮೋಹಿತ್ ಸಿಂಗ್ ವಿರುದ್ಧ ನನ್ನ ಕುಟುಂಬದವರು ಮಾಡಿರುವ ಆರೋಪ ಸುಳ್ಳಾಗಿದೆ. ಯಾವುದೇ ಒತ್ತಡವಿಲ್ಲದೆ ಸ್ವಂತ ಇಚ್ಛೆಯಿಂದ ಮನೆ ತೊರೆದು ಸನಾತನ ಧರ್ಮ ಸ್ವೀಕರಿಸಿದ್ದೇನೆ’ ಎಂದರು.

(ಸೌಜನ್ಯ: India Daily)