Assam Action On Madarssas : 1 ಸಾವಿರದ 281 ಮದರಸಾಗಳನ್ನು ಮುಚ್ಚಿ ಆಂಗ್ಲ ಶಾಲೆಗಳನ್ನು ತೆರೆದ ಅಸ್ಸಾಂ ಸರ್ಕಾರ !

ಗೌಹಾಟಿ (ಅಸ್ಸಾಂ) – ಅಸ್ಸಾಂ ಸರ್ಕಾರದ ಅನುದಾನದಿಂದ ನಡೆಸುತ್ತಿದ್ದ 1 ಸಾವಿರದ 281 ಮದರಸಾಗಳನ್ನು ಮುಚ್ಚಲಾಗಿದೆ ಮತ್ತು ಅಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲಾಗಿದೆ. ಇಲ್ಲಿ, ಇಸ್ಲಾಂ ಬದಲಿಗೆ ನಿತ್ಯದಂತೆ ಎಲ್ಲರಿಗೂ ಎಲ್ಲಾ ವಿಷಯಗಳನ್ನು ಕಲಿಸಲಾಗುತ್ತದೆ. `ಎಲ್ಲಾ ಸರ್ಕಾರಿ ಮತ್ತು ಪ್ರಾಂತೀಯ ಮದರಸಾಗಳನ್ನು ಈಗ ಮಾಧ್ಯಮಿಕ ಶಿಕ್ಷಣ ಶಾಲೆಗಳಾಗಿ ಪರಿವರ್ತಿಸಲಾಗಿದೆ’ ಎಂದು ರಾಜ್ಯ ಶಿಕ್ಷಣ ಸಚಿವ ರನೀಜ್ ಪೆಗು ಟ್ವೀಟ್ ಮಾಡಿದ್ದಾರೆ.

1. ಹೀಗೆ ಮುಚ್ಚಿರುವ ಮದರಸಾಗಳು ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಧುಬರಿ ಜಿಲ್ಲೆಯಲ್ಲಿ ಹೆಚ್ಚು ಇದೆ. ಇದಲ್ಲದೇ ಬಾರ್ಪೇಟಾ, ನೊಗಾಂವ್, ಗೋಲ್ಪಾಡಾ ಮೊದಲಾದ ಜಿಲ್ಲೆಗಳಲ್ಲಿಯೂ ಮದರಸಾಗಳನ್ನು ಮುಚ್ಚಲಾಗಿದೆ. ಬಾಂಗ್ಲಾದೇಶದಿಂದ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಈ ಜಿಲ್ಲೆಗಳಿಗೆ ನುಸುಳಿ ಬರುತ್ತಾರೆ.

2. ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ರಾಜ್ಯದ ಎಲ್ಲಾ ಮದರಸಾಗಳನ್ನು ಮುಚ್ಚಲು ಬಯಸುತ್ತಾರೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ; ಏಕೆಂದರೆ ಭಾರತಕ್ಕೆ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಅವಶ್ಯಕತೆ ಇದೆ. ಇಂಜಿನಿಯರ್, ಡಾಕ್ಟರ್ ಮೊದಲಾದವರು ಇದರಿಂದ ಸೃಷ್ಟಿಯಾಗಲಿದ್ದಾರೆ. ಮದರಸಾಗಳಿಂದ ಅವರುಗಳ ನಿರ್ಮಾಣ ಆಗುವುದಿಲ್ಲ ಎಂದಿದ್ದಾರೆ.

ಸಂಪಾದಕೀಯ ನಿಲುವು

  • ಅಸ್ಸಾಂನ ಬಿಜೆಪಿ ಸರ್ಕಾರ ಇದನ್ನು ಮಾಡಬಹುದಾದರೆ, ದೇಶದ ಇತರ ಸರ್ಕಾರಗಳಿಗೆ ಇದನ್ನು ಏಕೆ ಮಾಡಲಾಗುವುದಿಲ್ಲ?
  • ಆಡಳಿತಗಾರರಿಗೆ ಇಚ್ಛಾಶಕ್ತಿಯಿದ್ದರೆ, ಅವರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಇಂತಹ ಕಠೋರ ನಿರ್ಧಾರಗಳನ್ನು ತೆಗೆದುಕೊಂಡು ಅದರಂತೆ ಕ್ರಮಕೈಗೊಳ್ಳಬಹುದು ಎಂದು ಇದರಿಂದ ಗಮನಕ್ಕೆ ಬರುವುದು!