|
ಕರ್ಣಾವತಿ (ಗುಜರಾತ್) – ಜನರ ಅನುಕೂಲಕ್ಕಾಗಿ ಮೂಕ ಪ್ರಾಣಿಗಳನ್ನು ಬಲಿ ಕೊಡಲಾಗುವುದಿಲ್ಲ. ಈ ಕೃತ್ಯವನ್ನು ದೇವರು ಕೂಡ ಕ್ಷಮಿಸುವುದಿಲ್ಲ. ಈ ಪ್ರಕರಣವು ತುಂಬಾ ಆತಂಕ ಉಂಟುಮಾಡುವ ಸಂಗತಿಯಾಗಿದೆ ಎಂದು ರಾಜ್ಯದಲ್ಲಿ ಗೋಹತ್ಯೆ ಪ್ರಕರಣವೊಂದರ ವಿಚಾರಣೆ ವೇಳೆ ಗುಜರಾತ್ ಹೈಕೋರ್ಟ್ ಹೇಳಿದೆ. ಗುಜರಾತ್‌ನ ನಡಿಯಾದ ಜಿಲ್ಲೆಯಲ್ಲಿ ಆಗಿರುವ 30 ಹಸುಗಳ ಹತ್ಯೆಯ ಬಗ್ಗೆ ಅರ್ಜಿ ಸಲ್ಲಿಸಲಾಗಿದೆ. ಹತ್ಯೆ ಮಾಡಿದ ಗೋವುಗಳ ಅಸ್ಥಿಪಂಜರಗಳು ಇಲ್ಲಿ ಕಂಡು ಬಂದಿವೆ. ಅವುಗಳ ಛಾಯಾಚಿತ್ರಗಳನ್ನೂ ಪ್ರಸಾರ ಮಾಡಲಾಗಿದೆ. ಈ ಪ್ರಕರಣದಲ್ಲಿ ನಡಿಯಾದ ನಿವಾಸಿ ಮೌಲಿಕ್ ಶ್ರೀಮಾಲಿ ಅವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆ ವೇಳೆ ನ್ಯಾಯಾಲಯ ಈ ವಿಷಯ ತಿಳಿಸಿದೆ. ಈ ಪ್ರಕರಣದಲ್ಲಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ನ್ಯಾಯಾಲಯವು ಸೂಚಿಸಿದೆ.
ರಸ್ತೆಬದಿ ಇರುವ ಪ್ರಾಣಿಗಳ ಸಮಸ್ಯೆಯನ್ನು ಪರಿಹರಿಸಲು, ರಾಜ್ಯ ಸರಕಾರವು ಹಸುಗಳನ್ನು ಪಂಜರಪೋಲಾದಲ್ಲಿ ಇರಿಸಿತ್ತು. ಅದರಲ್ಲಿ 30 ಹಸುಗಳು ಹತ್ಯೆಯಾಗಿವೆ. ಹತ್ಯೆಗೈದ ಗೋವುಗಳ ಅಸ್ಥಿಪಂಜರಗಳನ್ನು ನಿರ್ಜನ ಪ್ರದೇಶದಲ್ಲಿ ಎಸೆಯಲಾಗಿತ್ತು.
ಸಂಪಾದಕೀಯ ನಿಲುವುಕೆಲವು ರಾಜ್ಯಗಳಲ್ಲಿ ಗೋಹತ್ಯೆ ನಿಷೇಧಿಸಿದಾಗಲೂ ಇಂತಹ ಘಟನೆಗಳು ನಡೆಯುತ್ತಿರುವುದು ಅಲ್ಲಿನ ಸರಕಾರಿ ವ್ಯವಸ್ಥೆಗಳಿಗೆ ನಾಚಿಕೆಗೇಡು. ಇದಕ್ಕೆ ಸಂಬಂಧಪಟ್ಟವರನ್ನು ಹೊಣೆಗಾರರನ್ನಾಗಿ ಮಾಡಿ ಶಿಕ್ಷಿಸಲೇಬೇಕು ಆಗ ಮಾತ್ರ ಗಂಭೀರ್ಯತೆ ನಿರ್ಮಾಣವಾಗುತ್ತದೆ ! |