ಹಿಂದೂ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ, ದೇಹವನ್ನು ತುಂಢರಿಸಿದರು !

2 ಮುಸ್ಲಿಂ ಯುವಕರು ವಶಕ್ಕೆ

ಇದು ಲವ್ ಜಿಹಾದ್ ಪ್ರಕರಣ ಎಂದು ಬಾಲಕಿಯ ತಂದೆಗೆ ಸಂದೇಹ

ರಾಂಚಿ (ಜಾರ್ಖಂಡ್) – ಗುಮ್ಲಾ ಠಾಣಾ ವ್ಯಾಪ್ತಿಯ ಫೋರಿ ಗ್ರಾಮದಲ್ಲಿ ‘ಲವ್ ಜಿಹಾದ್’ ನ ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಬುಡಕಟ್ಟು ಸಮುದಾಯದ ಹಿಂದೂ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಆಕೆಯನ್ನು ಕೊಲೆ ಮಾಡಿ ಆಕೆಯ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಲಾಯಿತು. ಫೋರಿ ಗ್ರಾಮದ 2 ವಿವಿಧ ಬಾವಿಗಳಿಂದ ಮೃತ ಬಾಲಕಿಯ ತಲೆ ಮತ್ತು ಮುಂಡವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಇಮಾನ್ ಮಿರ್ದಾಹ ಅಲಿಯಾಸ್ ಬಾದಲ್ ಮತ್ತು ಜಹೀರ್ ಮಿರ್ದಾಹಾ ಎಂಬ ಇಬ್ಬರು ಮುಸ್ಲಿಂ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ಬಾವಿಯಲ್ಲಿ ಪತ್ತೆಯಾದ ಬ್ಯಾಗ್ ನಲ್ಲಿ ಮೃತ ಬಾಲಕಿಯ ಆಧಾರ್ ಕಾರ್ಡ್ ಹಾಗೂ ಎಟಿಎಂ ಕಾರ್ಡ್ ಪೊಲೀಸರಿಗೆ ಸಿಕ್ಕಿದೆ. ಈ ಮಾಹಿತಿ ಆಧರಿಸಿ ಪೊಲೀಸರು ಬಾಲಕಿಯ ಕುಟುಂಬಸ್ಥರನ್ನು ಸಂಪರ್ಕಿಸಿದ್ದಾರೆ. ಮೃತ ಬಾಲಕಿಯ ತಂದೆ ಶವ ತನ್ನ ಮಗಳದೇ ಎಂದು ಗುರುತಿಸಿದ್ದಾರೆ. ಫೋರಿ ಗ್ರಾಮದ ಬಾದಲ್ ಎಂಬ ಮುಸ್ಲಿಂ ಯುವಕ ತನ್ನ ಮಗಳನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದ್ದಾನೆ ಎಂದು ಬಾಲಕಿಯ ತಂದೆ ಪೊಲೀಸರಿಗೆ ನೀಡಿರುವ ಲಿಖಿತ ದೂರಿನಲ್ಲಿ ಹೇಳಲಾಗಿದೆ. ಬಾದಲ್ ತನ್ನ ಇತರ ಸಹಚರರೊಂದಿಗೆ ಸೇರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಸಾಯಿಸಿ, ಸಾಕ್ಷ್ಯವನ್ನು ಮರೆಮಾಚಲು ಆಕೆಯ ತಲೆ ಮತ್ತು ಮುಂಡವನ್ನು ಬೇರೆ ಬೇರೆ ಬಾವಿಗಳಲ್ಲಿ ಎಸೆದಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಪೊಲೀಸರು ಇಮಾನ್ ಮಿರ್ದಾಹ ಅಲಿಯಾಸ್ ಬಾದಲ್ ಮತ್ತು ಜಹೀರ್ ಮಿರ್ದಾಹಾ ವಿರುದ್ಧ ಪ್ರಕರಣ ದಾಖಲಿಸಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕರ ನಿಲುವು

* ಮತಾಂಧರನ್ನು ಪ್ರೀತಿಸುವುದು ಅಂದರೆ ತಾನೇ ಸಾಯಲು ಸಿದ್ಧ ಆಗುವುದಾಗಿದೆ, ಹಿಂದೂ ಹುಡುಗಿಯರು ಇದನ್ನು ಅರ್ಥಮಾಡಿಕೊಳ್ಳುವುದೇ ಸುದಿನ !