ದೇವಾಲಯದ ಭೂಮಿಯಲ್ಲಿನ ಅತಿಕ್ರಮಣಗಳ ತನಿಖೆ! – ಆಂಧ್ರಪ್ರದೇಶ ಸಾಧು ಪರಿಷತ್

ಶ್ರೀಕಾಕುಳಂ (ಆಂಧ್ರಪ್ರದೇಶ) – ಹಿಂದೂ ದೇವಸ್ಥಾನಗಳ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಬಳಿಸಿರುವ ಕುರಿತು ತನಿಖೆ ನಡೆಸುವಂತೆ ‘ಆಂಧ್ರ ಪ್ರದೇಶ ಸಾಧು ಪರಿಷತ್’ ಆಗ್ರಹ ಮಾಡಿದೆ. ಇದಕ್ಕಾಗಿ ಕಂದಾಯ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಮಿತಿಯನ್ನು ನೇಮಿಸಬೇಕು ಎಂದು ‘ಆಂಧ್ರಪ್ರದೇಶ ಸಾಧು ಪರಿಷತ್’ ಅಧ್ಯಕ್ಷ ಸ್ವಾಮಿ ಶ್ರೀನಿವಾಸಾನಂದ ಕೋರಿದರು. ಹಿಂದೂ ದೇವಸ್ಥಾನಗಳ ಭೂಮಿಗಳ ಒತ್ತುವರಿ ವಿರುದ್ಧ ಧ್ವನಿ ಎತ್ತಲು ಪರಿಷತ್ತು ಪೊಂಡೂರಿನಲ್ಲಿ ‘ಹಿಂದೂ ಧಾರ್ಮಿಕ ಸಭೆ’ ಆಯೋಜಿಸಿತ್ತು.

ದೇವಸ್ಥಾನಗಳ ಭೂಮಿಯನ್ನು ಸರಕಾರ, ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರು ಕಬಳಿಸುತ್ತಿದ್ದಾರೆ!

ಈ ಸಂದರ್ಭದಲ್ಲಿ ಸ್ವಾಮಿ ಶ್ರೀನಿವಾಸಾನಂದರು ಮಾತನಾಡಿ, ‘‘ದೇವಸ್ಥಾನಗಳ ಭೂಮಿಯನ್ನು ಕೇವಲ ಸರಕಾರಿ ಸಂಸ್ಥೆಗಳು ಅಥವಾ ರಾಜಕಾರಣಿಗಳು ನುಂಗುತ್ತಿಲ್ಲ(ಕಬಳಿಸುತ್ತಿಲ್ಲ), ಮುಸ್ಲಿಂ, ಕ್ರೈಸ್ತ ಸಮುದಾಯದ ಜನರೂ ಕಬಳಿಸಿದ್ದಾರೆ. ರಾಜ್ಯದ ಸಿಂಹಾಚಲಂ, ಅಣ್ಣಾವರಂ, ಶ್ರೀ ಕಾಳಹಸ್ತಿ ಮತ್ತಿತರ ದೇವಸ್ಥಾನಗಳ ಒಡೆತನದ ಸುಮಾರು 25 ಸಾವಿರ ಎಕರೆ ಭೂಮಿಯನ್ನು ಕಬಳಿಸಿದ್ದಾರೆ. ಹಿಂದೂ ಸಂಘಟನೆಗಳು ತಿರುಪತಿ ನಗರದ ಅಭಿವೃದ್ಧಿಗೆ ತಿರುಪತಿ ದೇವಸ್ಥಾನದ ಹಣವನ್ನು ಹೊರಳಿಸಲು ಅವಕಾಶ ನೀಡುವುದಿಲ್ಲ. ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಸ್ಥಳಗಳಲ್ಲಿ ಹಿಂದೂ ಧರ್ಮದ ಅನುಯಾಯಿಗಳ ಮೇಲೆ ಆಗುವ ಆಕ್ರಮಣದ ವಿಷಯದಲ್ಲಿ ಅನೇಕ ಧರ್ಮಗುರುಗಳು ಚಿಂತೆಯನ್ನು ವ್ಯಕ್ತಪಡಿಸಿದರು.

ದೇವಸ್ಥಾನಗಳ ಸರಕಾರದ ವಿರುದ್ಧ ಸಾಧುಗಳ ಪ್ರತಿಭಟನೆ!

ಆಂಧ್ರಪ್ರದೇಶ ಸಾಧು ಪರಿಷತ್ ಮತ್ತು ಇತರ ಹಿಂದೂ ಸಂಘಟನೆಗಳು ಸರಕಾರದ ನಿಯಂತ್ರಣದಿಂದ ಹಿಂದೂ ದೇವಸ್ಥಾನಗಳನ್ನು ಮುಕ್ತಗೊಳಿಸಲು ಆಂದೋಲನಗಳನ್ನು ಪ್ರಾರಂಭಿಸಿವೆ. `ಕೆಲವು ರಾಜಕೀಯ ಮುಖಂಡರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ದೇವಸ್ಥಾನಗಳ ಹಣವನ್ನು ಅಭಿವೃದ್ಧಿ ಹೆಸರಿನಲ್ಲಿ ದೋಚುತ್ತಿದ್ದಾರೆ’, ಎಂದು ಈ ಸಮಯದಲ್ಲಿ ಆರೋಪಿಸಲಾಗಿದೆ. (ಭಕ್ತರ ಅರ್ಪಣೆಯಿಂದ ಸಂಗ್ರಹಿಸಿದ ದೇವಸ್ಥಾನದ ಹಣವನ್ನು ಅಭಿವೃದ್ಧಿಗಾಗಿ ಉಪಯೋಗಿಸುವ ಆಡಳಿತಗಾರರು ಎಂದಾದರೂ ಚರ್ಚ್, ಮಸೀದಿಗಳ ಹಣವನ್ನು ಅಭಿವೃದ್ಧಿಗೆ ಬಳಸುವ ಧೈರ್ಯ ಮಾಡಿದ್ದಾರೆಯೇ? – ಸಂಪಾದಕರು)

ಸಂಪಾದಕರ ನಿಲುವು

* ಆಂಧ್ರಪ್ರದೇಶದಲ್ಲಿ ಹಿಂದೂ ದ್ವೇಷಿ ಜಗನಮೋಹನ ರೆಡ್ಡಿ ಸರಕಾರದ ಆಡಳಿತದಲ್ಲಿ ಇಂತಹ ತನಿಖೆ ಖಂಡಿತವಾಗಿಯೂ ನಡೆಯುವ ಸಾಧ್ಯತೆಯಿಲ್ಲ. ಆದುದರಿಂದ ಈಗ ಕೇಂದ್ರ ಸರಕಾರವೇ 100 ಕೋಟಿ ಹಿಂದೂಗಳ ಭಾವನೆಗಳನ್ನು ಗೌರವಿಸಿ ಈ ಪ್ರಕರಣದ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರನ್ನು ಜೀವಾವಧಿ ಶಿಕ್ಷೆಗೆ ಗುರಿ ಮಾಡಬೇಕು. !

* ದೇವಸ್ಥಾನಗಳ ಭೂಮಿಯನ್ನು ರಕ್ಷಿಸಲು ಸಾಧುಗಳು ಧ್ವನಿ ಎತ್ತಬೇಕಾಗಿರುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ! ಹಿಂದೂಗಳು ಈಗಲಾದರೂ ಒಗ್ಗಟ್ಟಿನಿಂದ ದೇವಸ್ಥಾನಗಳ ಭೂಮಿಯನ್ನು ರಕ್ಷಿಸಲು ಮುಂದಾಗಬೇಕು!

ಇದು ದೇವಸ್ಥಾನಗಳನ್ನು ಸರಕಾರೀಕರಣಗೊಳಿಸಿರುವುದರ ದುಷ್ಪರಿಣಾಮವಾಗಿದೆ. ಇದಕ್ಕಾಗಿ ದೇವಸ್ಥಾನಗಳು ಭಕ್ತರ ವಶದಲ್ಲಿಯೇ ಇರಬೇಕು!