‘ಮನೆಯಲ್ಲಿಯೆ ಮಾಡಬಹುದಾದ ‘ಹೋಮಿಯೋಪಥಿ’ ಉಪಚಾರ ! (ಲೇಖನ ೧೨)
ಪ್ರಸ್ತುತ ಒತ್ತಡಮಯ ಜೀವನಶೈಲಿಯಲ್ಲಿ ಯಾರು ಕೂಡ ಸೋಂಕಿನ ಕಾಯಿಲೆ ಅಥವಾ ಇತರ ಯಾವುದೇ ವಿಕಾರಗಳಿಗೆ ಬಲಿಯಾಗುವ ಸಾಧ್ಯತೆಯಿದೆ. ಹೀಗಿರುವಾಗ ತಕ್ಷಣ ತಜ್ಞ ವೈದ್ಯಕೀಯ ಸಲಹೆ ಸಿಗಬಹುದೆಂದು ಊಹಿಸಲು ಸಾಧ್ಯವಿಲ್ಲ. ನೆಗಡಿ, ಕೆಮ್ಮು, ಜ್ವರ, ವಾಂತಿ, ಬೇದಿ, ಮಲಬದ್ಧತೆ, ಪಿತ್ತವಿಕಾರದಂತಹ ವಿವಿಧ ಕಾಯಿಲೆಗಳಿಗೆ ಮನೆಯಲ್ಲಿಯೆ ಉಪಚಾರ ಮಾಡಲು ಸಾಧ್ಯವಾಗುವ ಹೋಮಿಯೋಪಥಿ ಚಿಕಿತ್ಸಾಪದ್ಧತಿ ಸಾಮಾನ್ಯ ಜನರಿಗೆ ಅತ್ಯಂತ ಉಪಯೋಗಿಯಾಗಿದೆ. ಈ ಉಪಚಾರ ಪದ್ಧತಿಯನ್ನು ಮನೆಯಲ್ಲಿಯೆ ಹೇಗೆ ಅವಲಂಬಿಸಬಹುದು ? ಹೋಮಿಯೋಪಥಿ ಔಷಧಗಳನ್ನು ಹೇಗೆ ಸಿದ್ಧಪಡಿಸಬೇಕು? ಅವುಗಳನ್ನು ಸಂಗ್ರಹಿಸಿ ಇಡುವುದು ಹೇಗೆ ? ಇತ್ಯಾದಿ ಅನೇಕ ವಿಷಯಗಳ ಮಾಹಿತಿಯನ್ನು ಈ ಲೇಖನದ ಮೂಲಕ ವಿವರಿಸಲಾಗಿದೆ. ಸಪ್ಟೆಂಬರ ೨೯ ರಿಂದ ನಾವು ಪ್ರತ್ಯಕ್ಷ ಕಾಯಿಲೆಗಳ ಉಪಚಾರವನ್ನು ತಿಳಿದುಕೊಳ್ಳುತ್ತಿದ್ದೇವೆ. ಅದಕ್ಕನುಸಾರ ೨೫/೧೨ ನೇ ಸಂಚಿಕೆಯಲ್ಲಿ ನಾವು ‘ಮಲಬದ್ಧತೆ’ಗಾಗಿ ನಾವು ವಹಿಸಬೇಕಾದ ಕಾಳಜಿ ಮತ್ತು ಅದರ ಔಷಧಗಳು’, ಈ ವಿಷಯವನ್ನು ಓದಿದೆವು. ‘ಕಾಯಿಲೆಗೆ ಪ್ರತ್ಯಕ್ಷ ಉಪಚಾರ ಆರಂಭಿಸುವ ಮೊದಲು ೨೫ ಅಗಸ್ಟ್, ೧ ಮತ್ತು ೮ ಸಪ್ಟೆಂಬರ ೨೦೨೩ ರಂದು ದೈನಿಕ ‘ಸನಾತನ ಪ್ರಭಾತ’ದಲ್ಲಿ ಪ್ರಸಿದ್ಧವಾದ ಲೇಖನಗಳಲ್ಲಿನ ‘ಹೋಮಿಯೋಪಥಿ ಸ್ವಉಪಚಾರಗಳ ವಿಷಯವನ್ನು ಓದಿ ತಿಳಿದುಕೊಳ್ಳಬೇಕು ಹಾಗೂ ಅದಕ್ಕನುಸಾರ ಪ್ರತ್ಯಕ್ಷ ಔಷಧಗಳನ್ನು ಆಯ್ದುಕೊಳ್ಳಬೇಕೆಂದು ವಿನಂತಿ !
ವಿವಿಧ ಕಾರಣಗಳಿಂದ ಹೊಟ್ಟೆಯಲ್ಲಿ ಸೌಮ್ಯ ಹಾಗೂ ತೀವ್ರ ವೇದನೆಗಳು ಆಗುತ್ತವೆ. ಪ್ರತಿ ಯೊಂದು ಕಾರಣಕ್ಕನುಸಾರ ಅದಕ್ಕೆ ವಿಶಿಷ್ಟ ಉಪಚಾರವನ್ನು ಮಾಡುವುದು ಆವಶ್ಯಕವಾಗಿರುತ್ತದೆ; ಆದರೆ ಹೊಟ್ಟೆ ನೋವು ಬರುವುದರ ನಿರ್ದಿಷ್ಟ ಕಾರಣವು ತಿಳಿಯುವವರೆಗೆ ನಾವು ಈ ಮುಂದೆ ನೀಡಿರುವ ಹೋಮಿಯೋಪತಿ ಔಷಧೋಪಚಾರವನ್ನು ಆರಂಭಿಸಬಹುದು. ಹೊಟ್ಟೆನೋವಿನ ಲಕ್ಷಣದ ಹೊರತು ಬೇರೆ ಯಾವುದಾದರೂ ವೈಶಿಷ್ಟ್ಯಪೂರ್ಣ ಲಕ್ಷಣವಿದ್ದರೆ, ಆ ಔಷಧವನ್ನು ಸೇವಿಸಬೇಕು, ಅವುಗಳನ್ನು ಔಷಧಗಳ ಹೆಸರಿನ ಮುಂದೆ ಕೊಡಲಾಗಿದೆ.
೧. ಮ್ಯಾಗ್ನೇಶಿಯಮ್ ಫಾಸ್ಫೋರಿಕಮ್ (Magnesium Phosphoricum)
ಹೊಟ್ಟೆ ನೋವಾದಾಗ ತಕ್ಷಣ ನೋವು ಕಡಿಮೆ ಆಗಬೇಕೆಂದು ನೋವು ಆರಂಭವಾದ ತಕ್ಷಣ ಈ ಔಷಧದ ೪ ಗುಳಿಗೆಗಳನ್ನು ಅರ್ಧ ಕಪ್ ಉಗುರುಬಿಸಿ ನೀರಿನಲ್ಲಿ ಕರಗಿಸಿ ಪ್ರತಿ ೧೫ ನಿಮಿಷಕ್ಕೊಮ್ಮೆ ಒಂದು ಚಮಚ ನೀರನ್ನು ನೋವು ಕಡಿಮೆ ಆಗುವವರೆಗೆ ಸೇವಿಸಬೇಕು.
೨. ಕೊಲೋಸಿಂಥಿಸ (Colocynthis)
೨ ಅ. ಕೋಪ ಮತ್ತು ಅಪಚನ ದಿಂದ ಹೊಟ್ಟೆ ನೋವಾಗುವುದು
೨ ಆ. ನೋವಿನಿಂದ ರೋಗಿ ಅಸ್ವಸ್ಥವಾಗುವುದು
೨ ಇ. ರೋಗಿ ನೋವಿನಿಂದಾಗಿ ತುಂಬಾ ನರಳುವುದು
೨ ಈ. ಅನ್ನ ಅಥವಾ ದ್ರವಪದಾರ್ಥವನ್ನು ಸೇವಿಸಿದಾಗ ನೋವು ಹೆಚ್ಚಾಗುವುದು
೨ ಉ. ಹೊಟ್ಟೆಯನ್ನು ಕೈಗಳಿಂದ ಒತ್ತಿಹಿಡಿದು ಮುಂದೆ ಬಗ್ಗಿದಾಗ ರೋಗಿಗೆ ಆರಾಮ ಅನಿಸುವುದು
೩. ಡಯೋಸ್ಕೋರಿಯಾ ವಿಲ್ಲೋಸಾ (Dioscorea Villosa)
೩ ಅ. ಹೊಟ್ಟೆಯಲ್ಲಿ ಕತ್ತರಿಸಿದಂತೆ, ಹಿಂಡಿದಂತೆ ಅಸಹನೀಯ ವೇದನೆಗಳಾಗುವುದು ಹಾಗೂ ಅವು ಶರೀರದ ಕೈ, ಕಾಲು ಇತ್ಯಾದಿ ವಿವಿಧ ಭಾಗಗಳಿಗೆ ಹೋಗುವುದು
೩ ಆ. ಮುಂದೆ ಬಗ್ಗಿದಾಗ ಹಾಗೂ ಮಲಗಿದಾಗ ವೇದನೆಗಳು ಹೆಚ್ಚಾಗುವುದು
೩ ಇ. ಹಿಂದಿನ ಬದಿಗೆ ಬಗ್ಗಿದಾಗ, ನೆಟ್ಟಗೆ ನಿಂತಾಗ ಆರಾಮ ಅನಿಸುವುದು
೪. ಚೈನಾ ಆಫಿಸಿನ್ಯಾಲಿಸ (China Officinalis)
೪ ಅ. ಪ್ರತಿದಿನ ನಿರ್ದಿಷ್ಟ ಸಮಯಕ್ಕೆ ಹೊಟ್ಟೆ ನೋವು ಬರುವುದು
೪ ಆ. ಹೊಟ್ಟೆಯಲ್ಲಿ ತುಂಬಾ ವಾಯು (gases) ತುಂಬಿಕೊಂಡು ಹೊಟ್ಟೆ ಉಬ್ಬುವುದು
೪ ಇ. ದೊಡ್ಡ ಧ್ವನಿಯೊಂದಿಗೆ ತೇಗುಗಳು ಬರುವುದು; ಆದರೆ ಅದರಿಂದ ವೇದನೆಗಳು ಕಡಿಮೆಯಾಗದಿರುವುದು
೫. ಕ್ಯಾಲ್ಕೇರಿಯಾ ಕಾರ್ಬೋನಿಕಾ (Calcarea Carbonica)
೫ ಅ. ಹೊಟ್ಟೆಯಲ್ಲಿ ತುಂಬಿಕೊಂಡಿರುವ ವಾಯುವಿನಿಂದಾಗಿ (gases) ಹೊಟ್ಟೆನೋವು ಆರಂಭವಾಗುವುದು
೫ ಆ. ಹೊಟ್ಟೆಯಲ್ಲಿ ತಂಪು ಅರಿವಾಗಿ ಹೊಟ್ಟೆ ಉಬ್ಬುವುದು ಹಾಗೂ ಹೊಟ್ಟೆ ಉಲ್ಟಾ ಇಟ್ಟಿರುವ ಬಶಿಯ ಹಾಗೆ ಕಾಣಿಸುವುದು
೫ ಇ. ಹೊಟ್ಟೆಯ ಸುತ್ತಲೂ ಬಟ್ಟೆಗಳ ಒತ್ತಡ ಸಹನೆ ಯಾಗದಿರುವುದು
೬. ಎನಾಕಾರ್ಡಿಯಮ್ ಓರಿಯೆಂಟಲ್ (Anacardium Orientale)
ಹೊಟ್ಟೆ ಖಾಲಿ ಇರುವಾಗ ಹೊಟ್ಟೆ ನೋವಾಗುವುದು, ಊಟ ಮಾಡಿದಾಗ ಹೊಟ್ಟೆ ನೋವು ತಾತ್ಕಾಲಿಕವಾಗಿ ಕಡಿಮೆಯಾಗುವುದು
೭. ಎಬೀಸ ನಾಯಗ್ರಾ (Abies Nigra)
ಏನಾದರು ತಿಂದ ಮೇಲೆ ಹೊಟ್ಟೆ ನೋವಾಗುವುದು
೮. ಸಾಯಕ್ಲಮೆನ (Cyclamen)
೮ ಅ. ರಾತ್ರಿಯ ಸಮಯದಲ್ಲಿ ಹೊಟ್ಟೆಯಲ್ಲಿ ವಾಯು (gases) ಆಗಿ ಹೊಟ್ಟೆ ನೋವು ಆರಂಭವಾಗುವುದು
೮ ಆ. ಎದ್ದು ನಿಂತಾಗ ಹಾಗೂ ನಡೆದಾಡಿದಾಗ ಆರಾಮ ಅನಿಸುವುದು
‘ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪತಿ’ ಉಪಾಯ !’ ಈ ಮುಂಬರುವ ಗ್ರಂಥದಲ್ಲಿನ ಆಯ್ದ ಭಾಗಗಳನ್ನು ಪ್ರತಿ ವಾರದ ಸಂಚಿಕೆಯಲ್ಲಿ ಲೇಖನಗಳ ಸ್ವರೂಪದಲ್ಲಿ ಪ್ರಕಟಿಸಲಾಗುತ್ತಿದೆ. ಆದರೂ ಸ್ವಉಪಾಯದ ದೃಷ್ಟಿಯಿಂದ ಸಾಧಕರು, ವಾಚಕರು, ರಾಷ್ಟ್ರ-ಧರ್ಮಪ್ರೇಮಿಗಳು, ಹಿತಚಿಂತಕರು, ಅರ್ಪಣೆದಾರರು ಈ ಲೇಖನಗಳನ್ನು ಆಪತ್ಕಾಲದ ದೃಷ್ಟಿಯಿಂದ ಸಂಗ್ರಹಿಸಿ ಇಡಬೇಕು. ಆಪತ್ಕಾಲದಲ್ಲಿ ಡಾಕ್ಟರರು, ವೈದ್ಯರು ದೊರಕದಿದ್ದರೆ, ಅಂತಹ ಸಮಯದಲ್ಲಿ ಈ ಲೇಖನಗಳನ್ನು ಓದಿ ತಮ್ಮ ಮೇಲೆ ಉಪಾಯ ಮಾಡಿಕೊಳ್ಳಬಹುದು. |