ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ
‘ಜ್ವರ ಬಂದಾಗ ಸಾಧ್ಯವಿದ್ದರೆ, ಒಂದು ಹೊತ್ತು ಏನು ತಿನ್ನದೇ ಉಪವಾಸ ಮಾಡಬೇಕು. ಉಪವಾಸ ಮಾಡಲು ಸಾಧ್ಯವಾಗದಿದ್ದರೆ ಒಂದು ಪಾತ್ರೆಯಲ್ಲಿ ಸ್ವಲ್ಪ ಅಕ್ಕಿಯನ್ನು ಎಂದಿಗಿಂತ ಸ್ವಲ್ಪ ಹೆಚ್ಚು ನೀರು ಹಾಕಿ ಬೇಯಿಸಬೇಕು ಮತ್ತು ಅದು ಚೆನ್ನಾಗಿ ಬೆಂದ ನಂತರ ಉಳಿದಿರುವ ನೀರನ್ನು ಸೋಸಿ ಅದರಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುಡಿಯಬೇಕು. ಈ ನೀರಿಗೆ ‘ಗಂಜಿ’ ಎನ್ನುತ್ತಾರೆ. ಗಂಜಿ ಕುಡಿದ ನಂತರ ತಕ್ಷಣ ಉತ್ಸಾಹವೆನಿಸುತ್ತದೆ. ೧-೨ ಬಾರಿ ಗಂಜಿ ಕುಡಿಯುವುದರಿಂದ ದಣಿವು ದೂರವಾಗುತ್ತದೆ ಮತ್ತು ಜ್ವರ ಬೇಗ ವಾಸಿಯಾಗುತ್ತದೆ. ಅನಂತರ ಹಸಿವಾದರೆ ತೊವ್ವೆ ಅನ್ನ, ರವೆ ಉಪ್ಪಿಟ್ಟು ಅಥವಾ ಶೀರಾ, ಅಕ್ಕಿಯನ್ನು ಹುದಗಿಸದೇ ಮಾಡಿದ ದೋಸೆ, ಭತ್ತದ ಅಥವಾ ಜೋಳದ ಅರಳು, ಹೆಸರುಬೇಳೆಯನ್ನು ಬೇಯಿಸಿ ಅದರಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲವನ್ನು ಹಾಕಿ ಮಾಡಿದ ‘ತೊವ್ವೆ’ ಇಂತಹ ಜೀರ್ಣಕ್ಕೆ ಹಗುರವಿರುವ ಪದಾರ್ಥಗಳನ್ನು ಸ್ವಲ್ಪ ಹಸಿವು ಇಟ್ಟು ತಿನ್ನಬೇಕು.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೮.೧೦.೨೦೨೩)