Denmark Quran : ಡೆನ್ಮಾರ್ಕ್‌ನಲ್ಲಿ ಕುರಾನ್ ಸುಡುವುದರ ಮೇಲೆ ನಿಷೇಧ : ಕಾನೂನು ಜಾರಿ !

ಕಳೆದ 5 ತಿಂಗಳಲ್ಲಿ 500 ಕುರಾನ್ ಮತ್ತು ಇಸ್ಲಾಮಿಕ್ ಧ್ವಜ ಸುಟ್ಟಿದ ಘಟನೆ !

ಕುರಾನ್ ಅನ್ನು ಸುಡುವುದು ರಾಷ್ಟ್ರೀಯ ಭದ್ರತೆಗೆ ಅಪಾಯ ಎಂದು ಸರಕಾರದ ಅಭಿಪ್ರಾಯ !

ಕೋಪನಹೆಗನ್ (ಡೆನ್ಮಾರ್ಕ್) – ಯುರೋಪಿಯನ್ ರಾಷ್ಟ್ರವಾದ ಡೆನ್ಮಾರ್ಕ್ ನಲ್ಲಿ ಸಾರ್ವಜನಿಕವಾಗಿ ಕುರಾನ್ ಅನ್ನು ಸುಡುವ ಕೃತ್ಯವನ್ನು ನಿಷೇಧಿಸಲಾಗಿದೆ. “ರಾಯ್ಟರ್ಸ್” ಸುದ್ದಿ ಸಂಸ್ಥೆಯ ಪ್ರಕಾರ, ಮುಸ್ಲಿಂ ರಾಷ್ಟ್ರಗಳೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಡೆನ್ಮಾರ್ಕ್ ಸಂಸತ್ತು ಈ ಕಾನೂನನ್ನು ಅಂಗೀಕರಿಸಿದೆ. ಜುಲೈ 2023 ರಿಂದ, ಕುರಾನ್ ಅಥವಾ ಇಸ್ಲಾಮಿಕ್ ಧ್ವಜವನ್ನು ಸುಟ್ಟುಹಾಕಿದ 500 ಕ್ಕೂ ಹೆಚ್ಚು ಪ್ರತಿಭಟನೆಗಳು ನಡೆದಿವೆ ಎಂದು ಕಾನೂನು ಸಚಿವ ಪೀಟರ್ ಹಮಲಗಾರ್ಡ್ ಹೇಳಿದ್ದಾರೆ. ಈ ಕ್ರಮಗಳು ಇತರ ದೇಶಗಳೊಂದಿಗೆ ಡೆನ್ಮಾರ್ಕ್‌ನ ಸಂಬಂಧಗಳು, ಹಿತಾಸಕ್ತಿಗಳು ಮತ್ತು ರಕ್ಷಣೆಗಳ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, ಈ ಕಾನೂನು ಮಾಡಲಾಗಿದೆ.

179 ಸಂಸದರಲ್ಲಿ 94 ಮಂದಿ ಕಾನೂನಿಗೆ ಬೆಂಬಲ !

ಡೆನ್ಮಾರ್ಕ್ ಸಂಸತ್ತಿನಲ್ಲಿ 5 ಗಂಟೆಗಳ ಚರ್ಚೆಯ ನಂತರ, 179 ಸಂಸದರಲ್ಲಿ 94, ಅಂದರೆ ಶೇಕಡಾ 52, ಕಾನೂನಿನ ಪರವಾಗಿ ಮತ ಚಲಾಯಿಸಿದರೆ, 77 ಸಂಸದರು ವಿರುದ್ಧವಾಗಿ ಮತ ಚಲಾಯಿಸಿದರು. ಹೊಸ ಕಾನೂನಿನ ಪ್ರಕಾರ, ಸಾರ್ವಜನಿಕವಾಗಿ ಕುರಾನ್ ಅಥವಾ ಯಾವುದೇ ಧಾರ್ಮಿಕ ಪುಸ್ತಕವನ್ನು ಹರಿದು ಹಾಕುವುದು, ಸುಡುವುದು, ಅಪವಿತ್ರಗೊಳಿಸುವುದು ಅಥವಾ ಅಂತಹ ಕೃತ್ಯದ ವಿಡಿಯೋ ಮಾಡಿ ಅದನ್ನು ಪ್ರಸಾರ ಮಾಡುವುದನ್ನು ನಿಷೇಧಿಸಲಾಗುವುದು ಎಂದು ಸರಕಾರ ಹೇಳಿದೆ.
ಜುಲೈ 2023 ರಲ್ಲಿ, ಡೆನ್ಮಾರ್ಕ್‌ನಲ್ಲಿ ಕುರಾನ್ ಸುಟ್ಟಿದ ಘಟನೆಯ ನಂತರ ಇರಾಕ್‌ನಲ್ಲಿರುವ ಡೆನ್ಮಾರ್ಕ್ ರಾಯಭಾರ ಕಚೇರಿಯ ಮೇಲೆ ದಾಳಿ ಮಾಡಲು ಪ್ರಯತ್ನಿಸಲಾಯಿತು. ಇದು ಡೆನ್ಮಾರ್ಕ್ ತನ್ನ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಲು ಕಾರಣವಾಯಿತು. ಇದರೊಂದಿಗೆ ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಟರ್ಕಿ, ಪಾಕಿಸ್ತಾನ ಸೇರಿದಂತೆ ಹಲವು ಮುಸ್ಲಿಂ ರಾಷ್ಟ್ರಗಳು ಡೆನ್ಮಾರ್ಕ್ ಅನ್ನು ಟೀಕಿಸಿದ್ದವು ಎಂದು ಹೇಳಿದರು.

ಇಂತಹ ಕಾನೂನನ್ನು ಮಾಡಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಕಡಿವಾಣ ! – ವಿರೋಧ ಪಕ್ಷದ ಸಂಸದರ ಅಭಿಪ್ರಾಯ

ಇಂತಹ ಕಾನೂನು ಜಾರಿಯಾದರೆ ಡೆನ್ಮಾರ್ಕ್ ಇತಿಹಾಸದಲ್ಲಿ ಖಂಡನೆಗೆ ಗುರಿಯಾಗಲಿದೆ ಎಂದು ‘ಡೆನ್ಮಾರ್ಕ್ ಡೆಮಾಕ್ರಟ್ಸ್ ಪಾರ್ಟಿ’ ನಾಯಕ ಇಂಗರ್ ಸ್ಟೋಜಬರ್ಗ್ ಹೇಳಿದ್ದಾರೆ. ಪ್ರಶ್ನೆಯೆಂದರೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ನಿಷೇಧವನ್ನು ನಾವು ನಿರ್ಧರಿಸಿದ್ದೇವೆಯೇ ಅಥವಾ ಹೊರಗಿನ ಶಕ್ತಿಗಳು ಹಾಗೆ ಮಾಡಲು ನಮ್ಮನ್ನು ಒತ್ತಾಯಿಸಿದೆಯೇ ? ಈ ಕಾನೂನನ್ನು ಉಲ್ಲಂಘಿಸುವವರು ಆರ್ಥಿಕ ದಂಡದ ಜೊತೆಗೆ 2 ವರ್ಷಗಳ ಜೈಲು ಶಿಕ್ಷೆಯನ್ನು ತೆರಬೇಕಾಗುತ್ತದೆ. ನೆರೆಯ ಸ್ವೀಡನ್‌ನಲ್ಲಿ ಇಂತಹ ಕಾನೂನು ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.