Senthilkumar : ಸಂಸತ್ತಿನಲ್ಲಿ ಉತ್ತರ ಭಾರತದ ರಾಜ್ಯಗಳನ್ನು ‘ಗೋಮೂತ್ರ ರಾಜ್ಯ’ ಎಂದು ಕರೆದಿದ್ದಕ್ಕೆ ಡಿಎಂಕೆ ಸಂಸದನಿಂದ ಕ್ಷಮೆಯಾಚನೆ !

ಬಿಜೆಪಿ ಸಂಸದರಿಂದ ಲೋಕಸಭೆಯಲ್ಲಿ ಪ್ರತಿಭಟನೆ !

ಡಿಎಂಕೆ ಸಂಸದ ಸೆಂಥಿಲ್‌ ಕುಮಾರ್

ನವ ದೆಹಲಿ – ಡಿಸೆಂಬರ್ 6 ರಂದು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸನಾತನ ಸಂಪ್ರದಾಯವನ್ನು ಅವಮಾನಿಸಿದ್ದಕ್ಕಾಗಿ ಡಿಎಂಕೆ ಸಂಸದ ಸೆಂಥಿಲ್‌ ಕುಮಾರ್ ಕ್ಷಮೆಯಾಚಿಸಿದ್ದಾರೆ. 2 ದಿನಗಳ ಹಿಂದೆ ಸಂಸತ್ತಿನಲ್ಲಿ ‘ಉತ್ತರ ಭಾರತದ ರಾಜ್ಯಗಳನ್ನು ‘ಗೋಮೂತ್ರ ರಾಜ್ಯಗಳು’ ಎಂದು ಕರೆದಿದ್ದರು. ಲೋಕಸಭೆಯಲ್ಲಿ ಬಿಜೆಪಿ ನಾಯಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆ ನಂತರ ಸೆಂಥಿಲ್‌ ಕುಮಾರ್ ಕ್ಷಮೆಯಾಚಿಸಿದ್ದು, ನಾನು ಯಾರಿಗೆ ನೋಯಿಸಲು ಇಂತಹ ಹೇಳಿಕೆ ನೀಡಿಲ್ಲ. ಇದು ಯಾವುದೇ ಸದಸ್ಯ ಅಥವಾ ವರ್ಗದ ಭಾವನೆಗಳಿಗೆ ಧಕ್ಕೆ ತಂದಿದ್ದರೆ, ನಾನು ನನ್ನ ಹೇಳಿಕೆಯನ್ನು ಹಿಂಪಡೆಯುತ್ತೇನೆ. ನಾನು ಇದಕ್ಕೆ ವಿಷಾದಿಸುತ್ತೇನೆ. ಸೆಂಥಿಲ್‌ ಕುಮಾರ್ ಅವರ ಈ ಹೇಳಿಕೆಯನ್ನು ಲೋಕಸಭೆಯ ಕಲಾಪದಿಂದ ತೆಗೆದುಹಾಕಲಾಗಿದೆ. ಅಲ್ಲದೇ ತಮ್ಮ ಹೇಳಿಕೆಗೆ ‘ಎಕ್ಸ್’ ಕ್ಷಮೆ ಯಾಚಿಸಿದ್ದಾರೆ.

ಸೆಂಥಿಲ್‌ ಕುಮಾರ್ ಹೇಳಿಕೆ ಕುರಿತು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರು, ಸನಾತನ ಸಂಪ್ರದಾಯವನ್ನು ಅಗೌರವಿಸಿದ್ದಾರೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಯಾರೂ ಹಿಂದೂ ಧರ್ಮ ಮತ್ತು ಹಿಂದೂಗಳ ಶ್ರದ್ಧಾಸ್ಥಾನಗಳನ್ನು ಅವಮಾನಿಸಬಾರದು, ಹಿಂದೂಗಳು ಅಂತಹ ಸಂಘಟನೆಯನ್ನು ನಿರ್ಮಾಣ ಮಾಡಬೇಕು !