|
ಬೆಂಗಳೂರು – ಕರ್ನಾಟಕ ಹೈಕೋರ್ಟ್‌ನಲ್ಲಿ ಆನ್‌ಲೈನ್ ಮೂಲಕ ಪ್ರಕರಣವೊಂದರ ಆಲಿಕೆಯ ಸಮಯದಲ್ಲಿ, ಅಶ್ಲೀಲ ವೀಡಿಯೊವೊಂದು ಇದ್ದಕ್ಕಿದ್ದಂತೆ ಪ್ರಾರಂಭವಾಯಿತು. ಇದರಿಂದ ನ್ಯಾಯಾಲಯದಲ್ಲಿ ಗೊಂದಲ ಸೃಷ್ಟಿಯಾಯಿತು. ಈ ಬಗ್ಗೆ ನ್ಯಾಯಾಲಯ ತನಿಖೆಗೆ ಆದೇಶಿಸಿದೆ. ‘ಜೂಮ್’ ಅಪ್ಲಿಕೇಶನ್ ಮೂಲಕ ಆನ್ ಲೈನ್ ಆಲಿಕೆ ನಡೆಯುತ್ತಿರುವಾಗ ಕೆಲವು ಹ್ಯಾಕರ್ಸ್ ಗಳು (ಕಂಪ್ಯೂಟರ್ ಸಿಸ್ಟಮ್‌ಗೆ ಅನಧಿಕೃತ ಪ್ರವೇಶವನ್ನು ಪಡೆಯುವವರು) ಈ ವೀಡಿಯೊವನ್ನು ಪ್ಲೇ ಮಾಡಿದ್ದಾರೆ. ಈ ಸಂಬಂಧ ಸೈಬರ್ ಕ್ರೈಂ ಬ್ರಾಂಚ್‌ನಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಸೈಬರ್ ಭದ್ರತೆಯನ್ನು ಪರಿಗಣಿಸಿ ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠಗಳ ಆನ್‌ಲೈನ್ ಸೌಲಭ್ಯಗಳನ್ನು ನ್ಯಾಯಾಲಯವು ತಾತ್ಕಾಲಿಕವಾಗಿ ಸ್ಥಗಿತಗೂಳಿಸಿತು. ಡಿಸೆಂಬರ್ 4 ರಂದು ಮಧ್ಯಾಹ್ನ ನ್ಯಾಯಾಲಯದ 6 ಕೊಠಡಿಗಳಲ್ಲಿ ಈ ವೀಡಿಯೊವನ್ನು ತೋರಿಸಲಾಗಿದೆ. ಮರುದಿನ, ಹ್ಯಾಕರ್‌ಗಳು ಇದೇ ರೀತಿಯ ವೀಡಿಯೊವನ್ನು ಚಲಾಯಿಸಲು ಪ್ರಯತ್ನಿಸಿದರು. ಆದ್ದರಿಂದ ನ್ಯಾಯಾಲಯವು ಆನ್‌ಲೈನ್ ಆಲಿಕೆಯನ್ನು ಸ್ಥಗಿತಗೊಳಿಸಲು ನಿರ್ಣಯ ಕೈಗೊಂಡಿತು.