‘ಜೈ ಶ್ರೀ ರಾಮ್’ ಎಂದು ಬರೆದ ವಿದ್ಯಾರ್ಥಿಯ ಮುಖದ ಮೇಲೆ ಥಿನರ್ ಎಸೆದ ಮಹಿಳಾ ಶಿಕ್ಷಕಿ !

  • ಘಾಜಿಯಾಬಾದ್ (ಉತ್ತರ ಪ್ರದೇಶ) ಹೋಲಿ ಟ್ರಿನಿಟಿ ಚರ್ಚ್ ಶಾಲೆಯಲ್ಲಿ ಘಟನೆ !

  • ಪೋಷಕರು ಮತ್ತು ಬಜರಂಗದಳದ ವಿರೋಧದ ನಂತರ ಶಿಕ್ಷಕಿ ವಜಾ


ಘಾಜಿಯಾಬಾದ್ (ಉತ್ತರ ಪ್ರದೇಶ) – ಇಲ್ಲಿನ ಗೋವಿಂದಪುರಂನಲ್ಲಿರುವ ಹೋಲಿ ಟ್ರಿನಿಟಿ ಚರ್ಚ್ ಶಾಲೆಯಲ್ಲಿ ಒಬ್ಬ ವಿಧ್ಯಾರ್ಥಿಯು ಬೋರ್ಡ್ ಮೇಲೆ ‘ಜೈ ಶ್ರೀ ರಾಮ್’ ಎಂದು ಬರೆದಿದ್ದರಿಂದ ಶಿಕ್ಷಕಿ ಮನಿಷಾ ಸೆಸಿ ಅವರು ವಿದ್ಯಾರ್ಥಿಯ ಮುಖದ ಮೇಲೆ ಥಿನರ ಸುರಿದಿದ್ದಾರೆ. ಇದರಿಂದ ಮನೆಗೆ ತೆರಳಿದ ವಿದ್ಯಾರ್ಥಿ 45 ನಿಮಿಷಗಳ ಕಾಲ ಕೊಠಡಿಯಲ್ಲಿ ಒಂಟಿಯಾಗಿ ಅಳುತ್ತಿದ್ದ. ಪಾಲಕರಿಗೆ ಈ ವಿಷಯ ತಿಳಿದ ಕೂಡಲೇ ಅವರು ಹಾಗೂ ಬಜರಂಗದಳ ಕಾರ್ಯಕರ್ತರು ಶಾಲೆಗೆ ಆಗಮಿಸಿ ಶಿಕ್ಷಕಿಯನ್ನು ತೆಗೆದುಹಾಕುವಂತೆ ಪ್ರಾಂಶುಪಾಲರಿಗೆ ಒತ್ತಾಯಿಸಿದರು. ಈ ವಿವಾದದ ನಂತರ ಮುಖ್ಯೋಪಾಧ್ಯಾಯಿನಿ ಮಧುಲಿಕಾ ಜೋಸೆಫ್ ಅವರು ಶಿಕ್ಷಕಿ ಮನಿಷಾ ಮೆಸಿಯನ್ನು ಕೆಲಸದಿಂದ ವಜಾ ಮಾಡಿದ್ದಾರೆ.

1. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕಿ ಮನಿಷಾ ಮೇಸಿ ಕ್ಷಮಾಪಣೆ ಪತ್ರ ಬರೆದು ಪ್ರಾಂಶುಪಾಲರಿಗೆ ನೀಡಿದ್ದಾರೆ. ಅದರಲ್ಲಿ, ನಾನು ನನ್ನ ಕೃತ್ಯಕ್ಕಾಗಿ ಕ್ಷಮೆಯಾಚಿಸಲು ಬಯಸುತ್ತೇನೆ. ವಿದ್ಯಾರ್ಥಿ ನನ್ನೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ; ಹಾಗಾಗಿ ನಾನು ದ್ರವವನ್ನು ಸುರಿದೆ. ಭವಿಷ್ಯದಲ್ಲಿ ನಾನು ಹೀಗೆ ಮಾಡುವುದಿಲ್ಲ ಎಂದು ನಿಮಗೆ ಭರವಸೆ ನೀಡುತ್ತೇನೆ’ ಎಂದು ಹೇಳಿದ್ದಾರೆ.

2. ಭಜರಂಗದಳದ ಮಹಾನಗರ ಸಂಚಾಲಕ ಗೌರವ ಕುಮಾರ ಸಿಂಗ್ ಅವರು, ‘ಜೈ ಶ್ರೀ ರಾಮ’ ಎಂದು ಹೇಳುವುದು ಅಥವಾ ಬರೆಯುವುದು ಯಾವಾಗಿನಿಂದ ಅಪರಾಧವಾಗಿದೆ ? ಯಾವುದೇ ಶಾಲೆಯಲ್ಲಿ ಇಂತಹ ಮನಸ್ಥಿತಿಯ ಶಿಕ್ಷಕರು ಇದ್ದರೆ ಅದು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಚರ್ಚ್ ನ ಶಾಲೆಯಲ್ಲಿ ಇದೇನು ಹೊಸತೇನಿಲ್ಲ. ಅದಕ್ಕಾಗಿಯೇ ಈಗ ಹಿಂದೂಗಳು ಹಿಂದೂಗಳಿಗೆ ಹಿಂದೂ ಧರ್ಮಕ್ಕನುಸಾರ ಶಿಕ್ಷಣವನ್ನು ನೀಡುವ ಶಾಲೆಗಳನ್ನು ಪ್ರಾರಂಭಿಸಬೇಕಾಗಿದೆ ! ಹಿಂದೂ ರಾಷ್ಟ್ರದಲ್ಲಿ ಇಂತಹ ಶಾಲೆಗಳು ಇರುತ್ತವೆ !