ಕುರಿ ಬಲಿ ಪದ್ಧತಿಯನ್ನು ನಿಷೇಧಿಸಲು ಕೋಲಕಾತಾ ಉಚ್ಚ ನ್ಯಾಯಾಲಯದಿಂದ ನಿರಾಕರಣೆ !

ಕೋಲಕಾತಾ – ಬಂಗಾಳದ ದಿನಾಜಪುರದಲ್ಲಿ 10 ಸಾವಿರ ಕುರಿಗಳನ್ನು ಬಲಿ ನೀಡಲಾಗುತ್ತದೆ. ಇದನ್ನು ನಿಷೇಧಿಸಲು ಕೋಲಕಾತಾ ಉಚ್ಚ ನ್ಯಾಯಾಲಯವು ನಿರಾಕರಿಸಿದೆ; ಆದರೆ ‘ನ್ಯಾಯಾಲಯವು ಪೂಜಾ ಸಮಿತಿಗೆ ಕಾನೂನು ಪ್ರಕಾರ ವ್ಯವಸ್ಥೆ ಮಾಡುವಂತೆ ಹೇಳಬಹುದು’ ಎಂದು ವಿಭಾಗೀಯ ಪೀಠ ಹೇಳಿದೆ.

1. ದಕ್ಷಿಣ ದಿನಾಜಪುರದಲ್ಲಿ ರಾಸಪೂರ್ಣಿಮೆಯ ಬಳಿಕ ಬೊಲ್ಲಾ ಗ್ರಾಮದಲ್ಲಿ ಕಾಳಿ ಪೂಜೆ ನಡೆಯುತ್ತದೆ. ಆ ಪೂಜೆಯಲ್ಲಿ 10 ಸಾವಿರ ಕುರಿಗಳನ್ನು ಬಲಿ ನೀಡಲಾಗುತ್ತದೆ. ಇದನ್ನು ನಿಷೇಧಿಸುವಂತೆ ಕೋರಿ, ಸ್ವಯಂಸೇವಕ ಸಂಘಟನೆಯೊಂದು ಕೋಲಕಾತಾ ಉಚ್ಚನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತ್ತು.

2. ಅರ್ಜಿದಾರರು, ‘ಅನುಮತಿ ಇಲ್ಲದೆ ಎಲ್ಲಿಯೂ ಪ್ರಾಣಿಗಳನ್ನು ಬಲಿ ನೀಡಲು ಬರುವುದಿಲ್ಲ. ಪ್ರಾಣಿಗಳ ಮೇಲಿನ ದೌರ್ಜನ್ಯ ನಿಲ್ಲಬೇಕು.’ ಎಂದು ಹೇಳಿದ್ದರು. (ಹಿಂದೂ ಸಂಪ್ರದಾಯಗಳನ್ನು ಅಗೌರವಿಸುವುದರಲ್ಲಿ ಸಂತೋಷಪಡುವ ಈ ಸ್ವಯಂಸೇವಕ ಸಂಘಟನೆಯು ಈದ್ ಸಮಯದಲ್ಲಿ ಮೇಕೆಗಳ ಕುರ್ಬಾನಿ(ಬಲಿ)ಯನ್ನು ಎಂದಾದರೂ ವಿರೋಧಿಸಿದೆಯೇ ? – ಸಂಪಾದಕರು)

3. ಈ ಪ್ರಕರಣದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಶಿವಜ್ಞಾನಮ್ ಅವರ ವಿಭಾಗೀಯ ಪೀಠವು, ಉತ್ಸವ ಆರಂಭವಾಗಿರುವುದರಿಂದ ಇಂತಹ ಪರಿಸ್ಥಿತಿಯಲ್ಲಿ ಬಲಿ ಪದ್ಧತಿಯನ್ನು ನಿಲ್ಲಿಸಲು ಸಾಧ್ಯವಿಲ್ಲವೆಂದು ಹೇಳಿದರು.