ನೌಕಾಪಡೆ ದಿನ ನಿಮಿತ್ತ ಪ್ರಧಾನಿ ನರೇಂದ್ರ ಮೋದಿಯವರಿಂದ ಶುಭಾಶಯಗಳು !
ನವ ದೆಹಲಿ – ನೌಕಾಪಡೆ ದಿನ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 4 ರ ಬೆಳಿಗ್ಗೆ ಭಾರತೀಯ ನೌಕಾಪಡೆಯ ಎಲ್ಲಾ ಸೈನಿಕರಿಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ. ನಮ್ಮ ‘ಎಕ್ಸ್’ನಲ್ಲಿ ನೀಡಿದ ಶುಬಾಷಯದಲ್ಲಿ, ನಮಗೆ ಸಮುದ್ರವನ್ನು ರಕ್ಷಿಸಲು ಭಾರತೀಯ ನೌಕಾಪಡೆಯ ಸೈನಿಕರ ಬದ್ಧತೆ, ಅವರ ಕರ್ತವ್ಯ ಮತ್ತು ದೇಶ ಪ್ರೇಮದ ಬಗ್ಗೆ ಅವರ ಅಚಲ ಮತ್ತು ಸಮರ್ಪಣಾ ಮನೋಭಾವವು ಸಾಕ್ಷಿಯಾಗಿದೆ. ಪ್ರತಿಯೊಂದು ಪರಿಸ್ಥಿತಿಯಲ್ಲಿ ಅವರ ಭಾವನೆ ಮತ್ತು ಸಂಕಲ್ಪ ಅಚಲವಾಗಿ ಉಳಿಯುತ್ತದೆ. ಅವರ ಸೇವೆ ಮತ್ತು ತ್ಯಾಗಕ್ಕೆ ನಾವು ಸದಾ ಚಿರಋಣಿ ಎಂದು ಹೇಳಿದ್ದಾರೆ.
On Navy Day, best wishes to all the personnel of the Indian Navy. Their commitment to safeguarding our seas is a testament to their unwavering dedication to duty and love for our nation. In every circumstance, their spirit and resolve remain unshakable. We are forever grateful…
— Narendra Modi (@narendramodi) December 4, 2023
ಮೋದಿ ತಮ್ಮ ಮಾತನ್ನು ಮುಂದುವರೆಸುತ್ತಾ, ಇಂದು ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ ನೌಕಾಪಡೆ ದಿನ ನಿಮಿತ್ತದ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ. ಈ ಸ್ಥಳವು ಛತ್ರಪತಿ ಶಿವಾಜಿ ಮಹಾರಾಜರೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಬಲಿಷ್ಠ ನೌಕಾಪಡೆ ಕಟ್ಟಲು ಮಹಾರಾಜರ ಶ್ರಮ ಎಲ್ಲರಿಗೂ ಗೊತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್’ನಿಂದ ಸಿಂಧುದುರ್ಗ ಜಿಲ್ಲೆಯಲ್ಲಿ ನಡೆದ ಮುಖ್ಯ ಕಾರ್ಯಕ್ರಮಕ್ಕೆ 3 ಗಂಟೆಗಳ ಮೊದಲು ಎಲ್ಲರಿಗೂ ಶುಭಾಶಯ ಕೋರಿದರು.