264 ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿ, ಮಹಾರಾಷ್ಟ್ರದ 16 ಜಿಲ್ಲೆಗಳಲ್ಲಿ ‘ಜಿಲ್ಲಾ ಮಂದಿರ ಟ್ರಸ್ಟ್ ಅಧೀವೇಶನ’ ನಡೆಯಲಿದೆ !

‘ಮಹಾರಾಷ್ಟ್ರ ಮಂದಿರ ನ್ಯಾಸ ಪರಿಷತ್ತು’ನಲ್ಲಿ ಸಮಾನ ಕೃತಿ ಕಾರ್ಯಕ್ರಮಗಳ ನಿರ್ಧಾರ !

12 ದೇವಸ್ಥಾನಗಳಲ್ಲಿ ಧರ್ಮ ಶಿಕ್ಷಣ ಆರಂಭ !

ಓಝರ (ಜಿಲ್ಲೆ ಪುಣೆ),  – ಇಲ್ಲಿ ಆಯೋಜಿಸಲಾಗಿದ್ದ ‘ಮಹಾರಾಷ್ಟ್ರ ಮಂದಿರ ನ್ಯಾಸ ಪರಿಷತ್ತು’ ಡಿಸೆಂಬರ್ 3 ರಂದು ಮುಕ್ತಾಯಗೊಂಡಿತು. 2 ದಿನಗಳ ಕಾಲ ನಡೆದ ಈ ಪರಿಷತ್ತಿನಲ್ಲಿ ಉಪಸ್ಥಿತರಿದ್ದ ಧರ್ಮದರ್ಶಿಗಳು 264 ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಗೊಳಿಸುವುದಾಗಿ ಹೇಳಿದರು, ಹಾಗೂ 16 ಜಿಲ್ಲೆಗಳಲ್ಲಿ ‘ಜಿಲ್ಲಾ ಮಂದಿರ ಧರ್ಮದರ್ಶಿ ಪರಿಷತ್ತು’ ನಡೆಯಲಿದೆ. ಪರಿಷತ್ತಿನ ಸಮಾನ ಕೃತಿ ಕಾರ್ಯಕ್ರಮದಡಿಯಲ್ಲಿ ನಿಗದಿಪಡಿಸಲಾಗಿರುವ ಈ ಕಾರ್ಯಕ್ರಮಗಳ ಮಾಹಿತಿಯನ್ನು ಹಿಂದೂ ಜನಜಾಗೃತಿ ಸಮಿತಿಯ ಸೊಲ್ಲಾಪುರ ಜಿಲ್ಲಾ ಸಮನ್ವಯಕ ಶ್ರೀ. ರಾಜನ ಬುಣಗೆ ಇವರು ಪರಿಷತ್ತಿನ ಸಮಾರೋಪದ ಸಮಯದಲ್ಲಿ ಹೇಳಿದರು.

ಸಮಾನ ಕೃತಿ ಕಾರ್ಯಕ್ರಮದ ಅಡಿಯಲ್ಲಿ ಇತರ ಮಹತ್ವಪೂರ್ಣ ಅಂಶಗಳು !

12 ದೇವಸ್ಥಾನಗಳಲ್ಲಿ ಧರ್ಮ ಶಿಕ್ಷಣ ಆರಂಭ !

10 ದೇವಸ್ಥಾನಗಳಲ್ಲಿ ನಿಯಮಿತವಾಗಿ ಧಾರ್ಮಿಕ ಗ್ರಂಥಗಳ ಪ್ರದರ್ಶನದ ನಿರ್ಧಾರ !

ದೇವಸ್ಥಾನದಿಂದ 500 ಮೀಟರ್ ಅಂತರದಲ್ಲಿ ಮಾಂಸ, ಮದ್ಯ ಮಾರಾಟ ಮಾಡದಂತೆ 32 ಕಡೆ ಜಿಲ್ಲಾಧಿಕಾರಿಗೆ ಧರ್ಮದರ್ಶಿಗಳು ಮನವಿ ಸಲ್ಲಿಸಲಿದ್ದಾರೆ !

73 ದೇವಸ್ಥಾನಗಳಲ್ಲಿ ಧರ್ಮಕ ಶಿಕ್ಷಣ ಫಲಕ ಹಚ್ಚಲು ಧರ್ಮದರ್ಶಿಗಳ ಸಿದ್ಧತೆ !