ಹಿಂದೂ ರಾಷ್ಟ್ರಕ್ಕಾಗಿ ಎಚ್ಚೆತ್ತುಕೊಳ್ಳದಿದ್ದರೆ, ನಾಳೆ ಇಸ್ಲಾಮಿಕ್ ರಾಷ್ಟ್ರದಲ್ಲಿ ಬದುಕಬೇಕಾಗುತ್ತದೆ ! – ಡಾ. ನೀಲ ಮಾಧವ ದಾಸ, ಸಂಸ್ಥಾಪಕ, ತರುಣ ಹಿಂದೂ

ಧನಬಾದನಲ್ಲಿ 2 ದಿನಗಳ ಹಿಂದೂ ರಾಷ್ಟ್ರ ಅಧಿವೇಶನದ ಉದ್ಘಾಟನೆ !

ಎಡದಿಂದ ‘ತರುಣ ಹಿಂದೂ’ ಸಂಘಟನೆಯ ಡಾ. ನೀಲ ಮಾಧವ ದಾಸ, ದೀಪವನ್ನು ಬೆಳಗಿಸುತ್ತಿರುವಾಗ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಪೂ. ಪ್ರದೀಪ ಖೇಮಕಾ, `ಇಸ್ಕಾನ’ ನ ಶ್ರೀ. ದಾಮೋದರ ಪ್ರಭು, ಕಥಾಕಾರ ಲೋಚನ ಮಹಾರಾಜ ಮಿಶ್ರಾ, ಅಂತರರಾಷ್ಟ್ರೀಯ ವೇದಾಂತ ಸೊಸಾಯಟಿಯ ಸ್ವಾಮಿ ನಿರ್ಗುಣಾನಂದ ಪುರಿ ಮತ್ತು ದೇವಘರನ ರಾಮಕೃಷ್ಣ ವಿವೇಕಾನಂದ ಸೇವಾ ಆಶ್ರಮದ ಸ್ವಾಮಿ ರಾಧಾಕಾಂತಾನಂದ ಮಹಾರಾಜ

ಧನಬಾದ (ಜಾರ್ಖಂಡ್),  – ಹಿಂದೂ ರಾಷ್ಟ್ರಕ್ಕಾಗಿ ಪ್ರತಿಯೊಂದು ಹಳ್ಳಿಗೆ ತೆರಳಿ ಹಿಂದೂಗಳನ್ನು ಒಗ್ಗೂಡಿಸಿ ಅವರಿಗೆ ಅರಿವು ಮೂಡಿಸಬೇಕಾಗಿದೆ. ಒಂದು ವೇಳೆ ನಾವು ಈಗಲೇ ಹಿಂದೂ ರಾಷ್ಟ್ರಕ್ಕಾಗಿ ಎಚ್ಚೆತ್ತುಕೊಳ್ಳದಿದ್ದರೆ ನಾಳೆ ನಮಗೆ ಮುಸ್ಲಿಂ ರಾಷ್ಟ್ರದಲ್ಲಿ ಬದುಕಬೇಕಾಗುತ್ತದೆ ಎಂದು ‘ತರುಣ ಹಿಂದೂ ಸಂಘಟನೆ’ಯ ಸಂಸ್ಥಾಪಕ ಡಾ. ನೀಲ ಮಾಧವ ದಾಸ ಹೇಳಿದ್ದಾರೆ. ‘ಭಾರತವನ್ನು ಹಿಂದೂ ರಾಷ್ಟ್ರವೆಂದು ಹೇಗೆ ಘೋಷಿಸಬಹುದು’ ಎನ್ನುವ ವಿಚಾರಮಂಥನ ಮತ್ತು ರೂಪುರೇಷೆಗಳನ್ನು ಸಿದ್ಧಗೊಳಿಸುವ ಉದ್ದೇಶದಿಂದ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಡಿಸೆಂಬರ್ 2 ಮತ್ತು 3 ರಂದು 2 ದಿನಗಳ ‘ಹಿಂದೂ ರಾಷ್ಟ್ರ ಅಧಿವೇಶನ’ವನ್ನು ಆಯೋಜಿಸಿದೆ ಮತ್ತು ಈ ಅಧಿವೇಶನದ ಉದ್ಘಾಟನೆಯ ಸಮಾರಂಭದಲ್ಲಿ ಡಾ. ದಾಸ ಮಾತನಾಡುತ್ತಿದ್ದರು. ಈ ಅಧಿವೇಶನದ ಪ್ರಾರಂಭದಲ್ಲಿ ಶಂಖನಾದ, ದೀಪ ಪ್ರಜ್ವಲನ ಹಾಗೂ ವೇದ ಮಂತ್ರ ಪಠಣದೊಂದಿಗೆ ಆರಂಭವಾಯಿತು.

ಈ ಸಮಯದಲ್ಲಿ, ಹಿಂದೂ ಜನಜಾಗೃತಿ ಸಮಿತಿಯ ಪ್ರೇರಣಾಸ್ರೋತವಾಗಿರುವ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಶುಭ ಸಂದೇಶವನ್ನು ಓದಲಾಯಿತು. ಈ ಸಮ್ಮೇಳನದಲ್ಲಿ ಬಿಹಾರ, ಝಾರಖಂಡ, ಬಂಗಾಳ, ಒಡಿಶಾ ಮತ್ತು ಇತರ ರಾಜ್ಯಗಳ ಹಿಂದುತ್ವನಿಷ್ಠರು ಭಾಗವಹಿಸಿದ್ದಾರೆ.