ಕಾಂಗ್ರೆಸ್ ನ ಹಿರಿಯ ನಾಯಕ ಪ್ರಮೋದ್ ಕೃಷ್ಣಂ ಇವರಿಂದ ಕಪಾಳಮೋಕ್ಷ !
ನವ ದೆಹಲಿ – ಭಾರತ ಭಾವನಾತ್ಮಕ ದೇಶವಾಗಿದೆ. ಸನಾತನ ಧರ್ಮದ ವಿರೋಧದಿಂದಲೇ ಕಾಂಗ್ರೆಸ್ ಪಕ್ಷ ಪತನಕ್ಕೆ ಕಾರಣವಾಯಿತು. ನಾವು ಸನಾತನ ಧರ್ಮವನ್ನು ವಿರೋಧಿಸಿರುವುದರಿಂದಲೇ ಸೋತಿದ್ದೇವೆ, ಇದು ಸತ್ಯವಾಗಿದೆಯೆಂದು ಕಾಂಗ್ರೆಸ್ಸಿನ ಹಿರಿಯ ಮುಖಂಡ ಪ್ರಮೋದ ಕೃಷ್ಣಂ ಇವರು 3 ರಾಜ್ಯಗಳಲ್ಲಿ ಕಾಂಗ್ರೆಸ್ಸಿನ ಪರಾಭವದ ಕುರಿತು ಪಕ್ಷಕ್ಕೆ ಕಪಾಳ ಮೋಕ್ಷ ಮಾಡಿದ್ದಾರೆ. ಅವರು ಎ.ಎನ್.ಐ. ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದ ಸಂದರ್ಭದಲ್ಲಿ ಮಾತನಾಡುತ್ತಿದ್ದರು.
ಪ್ರಮೋದ್ ಕೃಷ್ಣಂ ಇವರು ಮಂಡಿಸಿದ ಅಂಶಗಳು!
ಕೋಮುವಾದದ ರಾಜಕಾರಣವನ್ನು ಈ ದೇಶ ಎಂದಿಗೂ ಒಪ್ಪಿಕೊಂಡಿಲ್ಲ !
ಕೋಮುವಾದದ ರಾಜಕಾರಣವನ್ನು ಈ ದೇಶ ಎಂದಿಗೂ ಒಪ್ಪಿಕೊಂಡಿಲ್ಲ. ಸೆಪ್ಟೆಂಬರ್ 6, 1990 ರಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸಂಸತ್ತಿನಲ್ಲಿ ಭಾಷಣ ಮಾಡಿದರು. ಅದನ್ನು ಎಲ್ಲರೂ ಒಮ್ಮೆ ಕೇಳಲೇಬೇಕು. ಈ ದೇಶ ಕೋಮುವಾದಿಯಾಗಿದ್ದಿದ್ದರೆ ಮಾಜಿ ಪ್ರಧಾನಿ ವಿಶ್ವನಾಥ ಪ್ರತಾಪ ಸಿಂಗ್ ಅವರನ್ನು ಪ್ರತಿ ಮನೆಯಲ್ಲೂ ಪೂಜಿಸುತ್ತಿದ್ದರು. ಅವರು ಮಂಡಲ ಆಯೋಗದ ಮೇಲೆ ಕ್ರಮ ಕೈಗೊಂಡು ಜಾತಿ ರಾಜಕಾರಣ ಮಾಡಿದರು. ಅವರಿಗಿಂತ ದೊಡ್ಡ ಕೋಮುವಾದಿ ಬೇರೆಯವರು ಇಲ್ಲ; ಆದರೆ ಅವರ ಅವಸ್ಥೆ ಏನಾಯಿತು ? ಎನ್ನುವುದನ್ನು ಇಡೀ ದೇಶ ನೋಡಿದೆ ಎಂದು ಹೇಳಿದರು.
ಶೀಘ್ರದಲ್ಲೇ ಕಾಂಗ್ರೆಸ್ ನ ನಡೆ ಎಂ.ಐ.ಎಂ.ನಂತಹ ಪಕ್ಷದ ದಿಸೆಯಲ್ಲಿ ಸಾಗುತ್ತಿದೆ !
ಇದು ಕಾಂಗ್ರೆಸ್ ನ ಸೋಲಲ್ಲ, ಇದು ಎಡಪಂಥಿಯ ವಿಚಾರಸರಣಿಯ ಸೋಲಾಗಿದೆ. ಕಳೆದ ಕೆಲವು ದಿನಗಳಿಂದ ಎಡಪಂಥೀಯ ಜನರು ಕಾಂಗ್ರೆಸ್ಸಿನಲ್ಲಿ ಸೇರಿದ್ದಾರೆ. ಕಾಂಗ್ರೆಸ್‌ನ ಹಲವು ನಿರ್ಣಯಗಳ ಮೇಲೆ ಈ ಎಡಪಂಥೀಯ ನಾಯಕರು ಪ್ರಭಾವ ಬೀರಿದ್ದಾರೆ. ಈ ಕೆಲವು ಮುಖಂಡರು ಕಾಂಗ್ರೆಸನ್ನು ಮ. ಗಾಂಧಿಯವರ ಮಾರ್ಗದಿಂದ ಪಕ್ಕಕ್ಕೆ ಸರಿಸಿ ಕಮ್ಯುನಿಸ್ಟ್ ಮಾರ್ಗದತ್ತ ಮುನ್ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಮ. ಗಾಂಧೀಜಿಯವರು ಸಭೆಯ ಪ್ರಾರಂಭದಲ್ಲಿ `ರಘುಪತಿ ರಾಘವ ರಾಜಾರಾಮ, ಪತಿತ ಪಾವನ ಸೀತಾರಾಮ’ ಈ ಸಾಲುಗಳೊಂದಿಗೆ ಪ್ರಾರಂಭಿಸುತ್ತಿದ್ದರು. ಇಂದು ಕಾಂಗ್ರೆಸ್ಸನ್ನು ‘ಸನಾತನ ಧರ್ಮದ ವಿರೋಧಿ ಪಕ್ಷ’ ಎಂದು ಗುರುತಿಸಲಾಗುತ್ತಿದೆ. ಇದು ದುರದೃಷ್ಟಕರವಾಗಿದೆ. ಸಮಯವಿರುವಾಗಲೇ ಕಾಂಗ್ರೆಸ್ ಇಂತಹ ಕಮ್ಯುನಿಸ್ಟ್ ನಾಯಕರನ್ನು ಪಕ್ಕಕ್ಕೆ ಸರಿಸದೇ ಇದ್ದರೆ, ಕಾಂಗ್ರೆಸ್ಸಿನ ಪರಿಸ್ಥಿತಿ ಬಹುಬೇಗ ಎಂ.ಐ.ಎಂ. ಪಕ್ಷದಂತೆಯೇ ಆಗುವುದು ಎಂದು ಹೇಳಿದರು.
ಕಾಂಗ್ರೆಸ್ಸಿಗೆ ತಗಲಿದ ಸನಾತನದ ಶಾಪ !
ಕಾಂಗ್ರೆಸ್ ತನ್ನ ನಾಯಕತ್ವವನ್ನು ಗಂಭೀರವಾಗಿ ವಿಚಾರ ಮಾಡಬೇಕಾಗಿದೆ. ಕಾಂಗ್ರೆಸ್ಸಿಗೆ ಮ. ಗಾಂಧಿ, ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಕಾಂಗ್ರೆಸ್ ಉಳಿಸಬೇಕಾಗಿದೆ. ಕಾಂಗ್ರೆಸ್ಸನ್ನು ಮಾರ್ಕ್ಸ್ (ಸಾಮ್ಯವಾದದ ಜನಕ) ಇವರ ವಿಚಾರಗಳೆಡೆಗೆ ಒಯ್ಯಲು ಪ್ರಯತ್ನಿಸುತ್ತಿರುವ ನಾಯಕರನ್ನು ಬೇಗನೆ ಪಕ್ಕಕ್ಕೆ ಸರಿಸಬೇಕಾಗುತ್ತದೆ. ಒಂದು ವೇಳೆ ಅವರಲ್ಲಿ ಮರ್ಯಾದೆ ಉಳಿದಿದ್ದರೆ, ಯಾವ ರಾಜ್ಯಗಳಲ್ಲಿ ಕಾಂಗ್ರೆಸ್ ಸೋತಿದೆಯೋ ಆ ರಾಜ್ಯಗಳ ಜವಾಬ್ದಾರಿಯುತ ನಾಯಕರು ತಕ್ಷಣವೇ ರಾಜೀನಾಮೆ ನೀಡಬೇಕು. ಅವರು ತಾವಾಗಿಯೇ ಕೂಡಲೇ ರಾಜೀನಾಮೆ ನೀಡಬೇಕು. ಕಾಂಗ್ರೆಸ್‌ಗೆ ಸನಾತನ ಸಂಸ್ಥೆ ಶಾಪ ತಗುಲಿದೆ ಎಂದು ಹೇಳಿದರು
(ಸೌಜನ್ಯ : Republic World)