‘ದೇವಸ್ಥಾನದ ಉತ್ತಮ ನಿರ್ವಹಣೆ’ ವಿಚಾರ ಸಂಕಿರಣದಲ್ಲಿ ಟ್ರಸ್ಟ್ ಗಳ ಭಾವನೆ !
ದೇವಸ್ಥಾನಗಳ ಟ್ರಸ್ಟಿಗಳು ‘ಟ್ರಸ್ಟಿ’ ಎಂಬ ಬಿರುದನ್ನು ಬಿಟ್ಟು ಸಾಮಾನ್ಯ ಭಕ್ತರಂತೆ ದೇವರ ಸೇವೆ ಮಾಡಬೇಕು. ನೀವು ‘ಭಕ್ತ’ರಾಗಿ ದೇವಸ್ಥಾನದ ನಿರ್ವಹಣೆಯನ್ನು ನೋಡಿದರೆ ದೇವಸ್ಥಾನದ ಕೀರ್ತಿ ದೂರದೂರಕ್ಕೆ ಹಬ್ಬುತ್ತದೆ. ‘ದೇವಾಲಯಗಳ ಉತ್ತಮ ನಿರ್ವಹಣೆ’ ಎಂಬ ವಿಚಾರ ಸಂಕಿರಣದಲ್ಲಿ ಧರ್ಮ, ಭಕ್ತರ, ದೇವರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ದೇವಸ್ಥಾನಗಳ ನಿರ್ವಹಣೆಗೆ ಮುಂದಾಗಬೇಕು ಎಂದು ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಮಹಾರಾಷ್ಟ್ರ ದೇವಸ್ಥಾನ-ನ್ಯಾಸ ಪರಿಷತ್ತಿನಲ್ಲಿ ಡಿಸೆಂಬರ 2 ರಂದು ಆಯೋಜಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಮಾಜಿ ದತ್ತಿ ಆಯುಕ್ತರಾದ ಶ್ರೀ. ದಿಲೀಪ ದೇಶಮುಖ, ಅಮಲ್ನೇರ್ ನ ಶ್ರೀ ಮಂಗಳಗ್ರಹ ಮಂದಿರದ ಟ್ರಸ್ಟಿ ಶ್ರೀ. ದಿಗಂಬರ ಮಹಾಲೆ, ಒಝರನ ವಿಘ್ನಹರ ಗಣಪತಿ ದೇವಸ್ಥಾನದ ವ್ಯವಸ್ಥಾಪಕ ಶ್ರೀ. ಅಶೋಕ್ ಘೇಗಡೆ, ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸದ್ಗುರು ನಂದಕುಮಾರ್ ಜಾಧವ್ ಭಾಗವಹಿಸಿದ್ದರು. ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕ ಶ್ರೀ. ಆನಂದ ಜಖೋಟಿಯಾ ಈ ಸಂವಾದವನ್ನು ಸೂತ್ರಸಂಚಾಲನೆ ಮಾಡಿದರು.
ಈ ಸಮಯದಲ್ಲಿ ಶ್ರೀ. ದಿಗಂಬರ ಮಹಾಲೆ ಅವರು, “ಪುರೋಹಿತರು, ಭಕ್ತರು ದೇವಾಲಯದ ಆತ್ಮಗಳಾಗಿದ್ದಾರೆ. ಪುರೋಹಿತರ ಧಾರ್ಮಿಕ ಮನೋಭಾವದಿಂದಾಗಿ ಭಕ್ತರು ದೈವತ್ವದ ಅನುಭೂತಿ ಪಡೆಯಬಹುದು ಎಂದು ಹೇಳಿದರು. ಅರ್ಚಕರು ಎಷ್ಟು ತನ್ಮಯದಿಂದ ನಡೆದುಕೊಳ್ಳುತ್ತಾರೆ, ವಿವರಿಸುತ್ತಾರೆ ಆಗ ಬರುವ ಭಕ್ತರಿಗೆ ದಿವ್ಯ ಅನುಭೂತಿ ಬರುತ್ತದೆ. ಇದಕ್ಕೆ ಪುರೋಹಿತರ ಪಾತ್ರ ಮಹತ್ವದ್ದು. ಟ್ರಸ್ಟಿಗಳು ತಮ್ಮ ಅಹಂಕಾರವನ್ನು ಬದಿಗಿಟ್ಟು ಕೆಲಸ ಮಾಡಬೇಕು. ಅರ್ಚಕರು ಮತ್ತು ಟ್ರಸ್ಟಿಗಳು ತಮ್ಮ ನಡುವಿನ ವಿವಾದಗಳನ್ನು ತಪ್ಪಿಸಬೇಕು. ಸ್ಥಾನಮಾನದ ಗೌರವವನ್ನು ಬದಿಗಿಟ್ಟು ನಿಷ್ಠಾವಂತರು ಭಕ್ತರನ್ನು ವಿನಯದಿಂದ ಕಾಣಬೇಕು. ಟ್ರಸ್ಟಿಗಳು ಸ್ವಚ್ಛತೆ, ನಮ್ರತೆ ಮತ್ತು ಪಾರದರ್ಶಕತೆ ಈ ಮೂರು ಅಂಶವನ್ನು ಅನುಸರಿಸಬೇಕು. ಇದರಿಂದಾಗಿ ಭಕ್ತರು ದೇವಸ್ಥಾನಕ್ಕೆ ಬಂದ ನಂತರ ಆತ್ಮಾನುಭೂತಿ ಅನುಭವಿಸಬಹುದು.
ದೇವಸ್ಥಾನಕ್ಕೆ ಬರುವ ಭಕ್ತರು ಸಂತೃಪ್ತರಾಗಬೇಕು ! – ಸದ್ಗುರು ನಂದಕುಮಾರ ಜಾಧವ್, ಧರ್ಮಪ್ರಚಾರಕ, ಸನಾತನ ಸಂಸ್ಥೆ
ಸದ್ಗುರು ನಂದಕುಮಾರ್ ಜಾಧವ್ ಇವರು, “ಭಕ್ತರು ದೇವಸ್ಥಾನದಲ್ಲಿ ಆತ್ಮಾನುಭೂತಿ ಅನುಭವಿಸಲು ದೇವಸ್ಥಾನಕ್ಕೆ ಬರುತ್ತಾರೆ. ಟ್ರಸ್ಟಿಗಳು ಭಕ್ತರ ಬಗ್ಗೆ ಹೆಚ್ಚು ಯೋಚಿಸಬೇಕು. ಬೇಸಿಗೆಯಲ್ಲಿ ಭಕ್ತಾದಿಗಳ ಕಾಲುಗಳು ಸುಡದಂತೆ ಎಚ್ಚರ ವಹಿಸಬೇಕು. ದೇವಸ್ಥಾನಕ್ಕೆ ಬರುವ ಭಕ್ತರು ಸಂತೃಪ್ತರಾಗಬೇಕು ಎಂದು ಹೇಳಿದರು.
ದೇವಸ್ಥಾನದ ನಿರ್ವಹಣೆಯ ಬಗ್ಗೆ ಭಕ್ತರ ಅಭಿಪ್ರಾಯವನ್ನು ಟ್ರಸ್ಟಿಗಳು ಅರ್ಥಮಾಡಿಕೊಳ್ಳಬೇಕು ! – ಶ್ರೀ. ಅಶೋಕ ಘೇಗಡೆ, ವಿಘ್ನಹರ ಗಣಪತಿ ದೇವಸ್ಥಾನದ ಟ್ರಸ್ಟಿ
ಶ್ರೀ. ಅಶೋಕ್ ಘೇಗಡೆ ಇವರು ಮಾತನಾಡಿ, ”ಟ್ರಸ್ಟಿಗಳು ಸಾಮಾನ್ಯ ಭಕ್ತರೊಂದಿಗೆ ಬೆರೆತು ದೇವಸ್ಥಾನದ ನಿರ್ವಹಣೆಯ ಬಗ್ಗೆ ಭಕ್ತರ ಅಭಿಪ್ರಾಯವನ್ನು ಅರ್ಥಮಾಡಿಕೊಳ್ಳಬೇಕು. ಇದರಿಂದ ‘ಟ್ರಸ್ಟಿಗಳ ಕೆಲಸ ಹೇಗೆ ನಡಟಯುತ್ತಿದೆ ?’ ಎಂದು ಅರ್ಥ ಮಾಡಿಕೊಳ್ಳುತ್ತಾರೆ. ದೇವಸ್ಥಾನದ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸದೆ, ದೇವಸ್ಥಾನದ ಆವರಣವನ್ನು ಸ್ವಚ್ಛವಾಗಿಡಲು ಬಳಸಬೇಕು.” ಎಂದು ಹೇಳಿದರು.
ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಲ್ಲುವ ವೃದ್ಧರು, ಗರ್ಭಿಣಿಯರಿಗೆ ನೇರ ದರ್ಶನಕ್ಕೆ ವ್ಯವಸ್ಥೆ ಮಾಡಬೇಕು ! – ದಿಲೀಪ ದೇಶಮುಖ, ಮಾಜಿ ದತ್ತಿ ಆಯುಕ್ತ
ಟ್ರಸ್ಟಿಗಳು ಭಕ್ತರಂತೆ ಸರತಿ ಸಾಲಿನಲ್ಲಿ ನಿಂತು ಒಮ್ಮೆಯಾದರೂ ದೇವರ ದರ್ಶನ ಪಡೆಯಬೇಕು. ಇದರಿಂದ ಭಕ್ತರಿಗೆ ಆಗುವ ತೊಂದರೆಯನ್ನು ಗಮನಕ್ಕೆ ಬರುತ್ತದೆ. ಸರತಿ ಸಾಲಿನಲ್ಲಿ ವೃದ್ಧರು, ಗರ್ಭಿಣಿಯರು, ನವವಿವಾಹಿತರು ಇದ್ದರೆ ನೇರ ದರ್ಶನಕ್ಕೆ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.