ದೆಹಲಿ ಉಚ್ಚನ್ಯಾಯಾಲಯದಿಂದ ಸಮಾನ ನಾಗರಿಕ ಸಂಹಿತೆಯ ವಿಚಾರಣೆ ಸ್ಥಗಿತ !

ನವ ದೆಹಲಿ – ಸಮಾನ ನಾಗರಿಕ ಸಂಹಿತೆಯ ವಿಚಾರಣೆಯನ್ನು ದೆಹಲಿ ಉಚ್ಚನ್ಯಾಯಾಲಯ ಸ್ಥಗಿತಗೊಳಿಸಿದೆ. “ಭಾರತದ ಕಾನೂನು ಆಯೋಗವು ಈಗಾಗಲೇ ಅದರ ಮೇಲೆ ಕಾರ್ಯನಿರ್ವಹಿಸುತ್ತಿದೆ. ಆದುದರಿಂದ ನಾವು ಇದಕ್ಕಾಗಿ ಪ್ರತ್ಯೇಕ ಕಾನೂನು ರೂಪಿಸುವಂತೆ ಸಂಸತ್ತಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ,’ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಲಿಂಗ ಮತ್ತು ಧರ್ಮದ ತಟಸ್ಥ ಕಾನೂನಿಗಾಗಿ ನ್ಯಾಯವಾದಿ ಶ್ರೀ. ಅಶ್ವಿನಿ ಕುಮಾರ ಉಪಾಧ್ಯಾಯ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದವರಲ್ಲಿಯೂ ಉಪಾಧ್ಯಾಯ ಸೇರಿದ್ದಾರೆ. ದೆಹಲಿ ಉಚ್ಚ ನ್ಯಾಯಾಲಯ ನವೆಂಬರ್ 21 ರಂದು ಸರ್ವೋಚ್ಚ ನ್ಯಾಯಾಲಯ ಈಗಾಗಲೇ ಈ ಸೂತ್ರದ ಮೇಲೆ ತೀರ್ಪು ನೀಡಿದ್ದರೆ, ನಾವೂ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.

ವಿಚಾರಣೆ ವೇಳೆ ಕೇಂದ್ರ ಸರಕಾರವು ತನ್ನ ನಿಲುವನ್ನು ಮಂಡಿಸುವಾಗ ‘ಯಾವುದೇ ಕಾನೂನನ್ನು ಮಾಡುವುದು ಅಥವಾ ಮಾಡದಿರುವುದು ಶಾಸಕಾಂಗದ ಕೆಲಸವಾಗಿದೆ. ಇದನ್ನು ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ನಿರ್ಧರಿಸುತ್ತಾರೆ. ಈ ಸಂದರ್ಭದಲ್ಲಿ ನ್ಯಾಯಾಲಯ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ. ಅರ್ಜಿದಾರರ ಕೋರಿಕೆಯು ಕಾನೂನು ಮತ್ತು ವಸ್ತುಸ್ಥಿತಿಯ ಮೇಲೆ ನಿಲ್ಲಲಾರದು. ಆದುದರಿಂದ ಈ ಬೇಡಿಕೆಯನ್ನು ತಿರಸ್ಕರಿಸುವ ಸಾಧ್ಯತೆ ಇದೆ. ‘ಸಂತ್ರಸ್ತ ವ್ಯಕ್ತಿಯು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ’ ಎಂದು ತೋರಿಸಲು ಅರ್ಜಿಯಲ್ಲಿ ಏನೂ ಇಲ್ಲ.