ಪಾಕಿಸ್ತಾನ ವಿರುದ್ಧ ದಾರಾ ಶಿಕೋಹ ಫೌಂಡೇಶನ ಸಂಸ್ಥೆಯ ವತಿಯಿಂದ ವಿಶ್ವಸಂಸ್ಥೆಗೆ ದೂರು !
ಅಲಿಗಢ (ಉತ್ತರ ಪ್ರದೇಶ) – ಇಲ್ಲಿಯ ‘ದಾರಾ ಶಿಕೋಹ ಫೌಂಡೇಶನ ಹೆಸರಿನ ಇಸ್ಲಾಮಿಕ್ ಸಂಸ್ಥೆಯು ಪಾಕಿಸ್ತಾನ ಸರಕಾರದ ವಿರುದ್ಧ ವಿಶ್ವಸಂಸ್ಥೆಗೆ ದೂರು ಸಲ್ಲಿಸಿದೆ. ಸಂಸ್ಥೆಯು ಯುನೆಸ್ಕೊ ಅಂದರೆ ವಿಶ್ವಸಂಸ್ಥೆಯು ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘಟನೆಗೆ ಬರೆದಿರುವ ಪತ್ರದಲ್ಲಿ ಪಾಕಿಸ್ತಾನ ಆಕ್ರಮಿಸಿರುವ ಕಾಶ್ಮೀರದಲ್ಲಿರುವ ಹಿಂದೂ ದೇವಸ್ಥಾನಗಳನ್ನು ಧ್ವಂಸಗೊಳಿಸುವುದಕ್ಕೆ ತನ್ನ ವಿರೋಧ ವ್ಯಕ್ತಪಡಿಸಿದೆ. ಹಾಗೆಯೇ ಈ ದೇವಸ್ಥಾನಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಪಾಕಿಸ್ತಾನ ಸರಕಾರದಿಂದ ಹಿಂಪಡೆದುಕೊಳ್ಳಬೇಕು ಎಂದು ಸಂಸ್ಥೆಯು ಆಗ್ರಹಿಸಿದೆ. ಫೌಂಡೇಶನ ಅಧ್ಯಕ್ಷ ಮಹಮ್ಮದ ಅಮೀರ ರಶೀದ ಅವರು ಈ ಪತ್ರ ಬರೆದಿದ್ದು, ಅದರಲ್ಲಿ 26/11 ರಂದು ಭಾರತೀಯರ ಮತ್ತು ಮುಖ್ಯವಾಗಿ ಹಿಂದೂಗಳ ಭಾವನೆಗಳನ್ನು ನೋಯಿಸಲು ಪಾಕಿಸ್ಥಾನ ಸರಕಾರವು ಶಾರದಾ ಪೀಠದ ಗೋಡೆಯನ್ನು ನ್ಯಾಯಾಲಯದ ಯಾವುದೇ ಆದೇಶವಿಲ್ಲದಿರುವಾಗಲೂ ಕೆಡವಿತು ಎಂದು ಹೇಳಿದೆ.
‘ದಾರಾ ಶಿಕೋಹ ಫೌಂಡೇಶನ’ ತನ್ನ ಪತ್ರದಲ್ಲಿ….
1. ಪಾಕಿಸ್ತಾನ ಸರಕಾರ ಉದ್ದೇಶಪೂರ್ವಕವಾಗಿ ಹಿಂದೂ ದೇವಸ್ಥಾನಗಳನ್ನು ಗುರಿ ಮಾಡುತ್ತಿವೆ. ಪಾಕಿಸ್ತಾನಿ ಸೈನಿಕರಿಗಾಗಿ ಅಲ್ಲಿ ಕಾಫಿ ಹೌಸ್ ನಿರ್ಮಿಸಬೇಕೆಂದು ಅವರು ಹಿಂದೆ ಮುಂದೆ ಆಲೋಚನೆ ಮಾಡದೆ ಶಾರದಾ ಪೀಠದ ಗೋಡೆಯನ್ನು ಕೆಡವಿದರು.
2. ಪಾಕಿಸ್ತಾನದ ನೀಲಂ ಕಣಿವೆಯಲ್ಲಿರುವ ಶಾರದಾ ಪೀಠದಲ್ಲಿ ಹಿಂದೂ ದೇವಸ್ಥಾನದ ಬಾಕಿ ಉಳಿದಿರುವ ಅವಶೇಷಗಳಿವೆ. ಹಾಗೆಯೇ ಇದು ಪ್ರಾಚೀನ ಶಿಕ್ಷಣ ಕೇಂದ್ರವಾಗಿದೆ.
3. ಯುನೆಸ್ಕೋದ ಮಹಾನಿರ್ದೇಶಕರು ಪಾಕಿಸ್ತಾನ ಸರಕಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
4. ಯುನೆಸ್ಕೋ ಮುಖಂಡತ್ವದಲ್ಲಿ ಶಾರದಾ ಪೀಠದ ಪುನಶ್ವೇತನ ಮತ್ತು ಪುನರುದ್ಧಾರವಾಗಬೇಕು.
5. ಅದೇ ರೀತಿ ಪಾಕಿಸ್ತಾನ ಸರಕಾರ ಆಕ್ರಮಿಸಿರುವ ಕಾಶ್ಮೀರದಲ್ಲಿರುವ ಹಿಂಗಲಾಜಮಾತಾ ದೇವಸ್ಥಾನವನ್ನೂ ಕೆಡವಿದೆ. ಕಳೆದ 3-4 ವಾರಗಳಲ್ಲಿ ಸರಕಾರಿ ಆದೇಶದ ಅಡಿಯಲ್ಲಿ ಈ ರೀತಿ ಅನೇಕ ದೇವಸ್ಥಾನಗಳನ್ನು ಕೆಡವಲಾಗಿದೆ.
6. ಇದು ಪಾಕಿಸ್ತಾನ ಸರಕಾರದ ಅಸಹಿಷ್ಣುತೆಯ ಒಂದು ಉದಾಹರಣೆಯಾಗಿದೆಯಷ್ಟೆ ಎಂದು ಹೇಳಿದ್ದಾರೆ.