‘ಹಾಮಾಸ್’ಗೆ ನಕ್ಸಲೀಯರ ಬೆಂಬಲ !

ಛತ್ತೀಸ್‌ಗಢ-ಮಹಾರಾಷ್ಟ್ರ ಗಡಿಯಲ್ಲಿರುವ ಪ್ರತಾಪುರ್ ಅರಣ್ಯದಲ್ಲಿ ಫಲಕ !

ಗಡ್ ಚಿರೋಲಿ – ಛತ್ತೀಸ್‌ಗಢ-ಮಹಾರಾಷ್ಟ್ರ ಗಡಿಯಲ್ಲಿರುವ ಪ್ರತಾಪುರ್ ಅರಣ್ಯದಲ್ಲಿ ನಕ್ಸಲೀಯರು ಭಯೋತ್ಪಾದಕ ಸಂಘಟನೆ ‘ಹಮಾಸ್’ ಅನ್ನು ಬೆಂಬಲಿಸಿ 2 ಕೆಂಪು ಫಲಕಗಳನ್ನು ಹಾಕಿದರು. ಈ ಫಲಕದ ಮೇಲೆ, ಹಮಾಸ್ ಭಯೋತ್ಪಾದಕರಲ್ಲ, ಪ್ಯಾಲೆಸ್ತೀನ್ ಜನರ ವಿಮೋಚನೆಗಾಗಿ ಹೋರಾಡುವ ಸಂಘಟನೆಯಾಗಿದೆ. ಆದ್ದರಿಂದ ನಕ್ಸಲೀಯರು ಪ್ಯಾಲೆಸ್ತೀನ್‌ಗೆ ಬೆಂಬಲ ನೀಡುವ ಮೂಲಕ ತಮ್ಮ ಕೈಗಳನ್ನು ಬಲಪಡಿಸಿ’, ಎಂದು ಬರೆದಿರುವ ಫಲಕಗಳನ್ನು ಹಾಕಿದ್ದಾರೆ.

ಛತ್ತೀಸ್‌ಗಢ ವಿಧಾನಸಭಾ ಚುನಾವಣೆ ವೇಳೆ ನಕ್ಸಲೀಯರು ಕೆಲವು ಬಿಜೆಪಿ ಬೆಂಬಲಿಗರನ್ನು ಹತ್ಯೆ ಮಾಡಿದ್ದರು. ಅದರ ನಂತರ, ಮಹಾರಾಷ್ಟ್ರದ ಗಡ್ ಚಿರೋಲಿ ಜಿಲ್ಲೆಯಲ್ಲಿ ಸತತವಾಗಿ ಮೂರು ಜನರ ಹತ್ಯೆ ಮಾಡಲಾಯಿತು. ಹೀಗಾಗಿ ಡಿಸೆಂಬರ್ 2 ರಿಂದ 8 ರವರೆಗೆ ಹಿಂಸಾತ್ಮಕ ಚಟುವಟಿಕೆ ನಡೆಸುತ್ತಿರುವ ಅವರ ‘ಪಿಎಲ್ ಜಿಎ’ ವಾರದ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಸಂಪಾದಕರ ನಿಲುವು

* ಭಯೋತ್ಪಾದಕರು ಮತ್ತು ನಕ್ಸಲೀಯರು ಒಳಗಿನಿಂದ ಹೇಗೆ ಒಂದಾಗಿದ್ದಾರೆ ಎಂಬುದಕ್ಕೆ ಇದು ಮತ್ತೊಂದು ಪುರಾವೆ ! ಸರಕಾರವು ನಕ್ಸಲೀಯರ ಸಂಪೂರ್ಣ ನಿರ್ಮೂಲನೆ ಮಾಡುವುದೇ ಇದಕ್ಕೆ ಉತ್ತರ !