ನಾವು ಹೇಳುತ್ತಿರುವುದೇ ಬೆಳಕಿಗೆ ಬಂದಿದೆ ! (ಅಂತೆ) – ಜಸ್ಟಿನ್ ಟ್ರುಡೋ

ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರಿಂದ ಮತ್ತೊಮ್ಮೆ ಭಾರತದ ಮೇಲೆ ಆಪಾದನೆ !

ಓಟಾವಾ (ಕೆನಡಾ) – ಅಮೇರಿಕಾ ಮಾಡಿರುವ ಆರೋಪದಿಂದ ನಾವು ಹಿಂದಿನಿಂದಲೇ ಏನು ಓತ್ತಾಯಿಸುತ್ತಿದ್ದೇವೆ ಅದೇ ನಿಜವಾಗಿದೆ. ಈ ಎಲ್ಲಾ ಪ್ರಕರಣಗಳು ಭಾರತ ಸರಕಾರವು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ, ಎಂದು ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಮತ್ತೊಮ್ಮೆ ಹೇಳಿಕೆ ನೀಡಿದ್ದಾರೆ. ಅಮೇರಿಕಾವು ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನು ಇವನ ಹತ್ಯೆಯ ಷಡ್ಯಂತ್ರ ರೂಪಿಸಿರುವ ಪ್ರಕಾರಣದಲ್ಲಿ ನಿಖಿಲ ಗುಪ್ತಾ ಎಂಬ ಭಾರತೀಯ ನಾಗರಿಕನನ್ನು ಬಂಧಿಸಿರುವ ಘಟನೆಯ ನಂತರ ಟ್ರುಡೋ ಈ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಟ್ರುಡೋ ಇವರು ಕೆನಡಾದಲ್ಲಿನ ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ನ ಹತ್ಯೆಯ ಬಗ್ಗೆ ಭಾರತದ ಮೇಲೆ ಆರೋಪ ಮಾಡಿದ್ದರು. ಆ ಸಮಯದಲ್ಲಿ ಭಾರತದಿಂದ ಈ ಆರೋಪ ತಳ್ಳಿಹಾಕಲಾಗಿತ್ತು. ಈ ಆರೋಪದಿಂದ ಎರಡು ದೇಶಗಳ ಸಂಬಂಧದ ಮೇಲೆ ಪರಿಣಾಮವಾಗಿದೆ.

ಸಂಪಾದಕೀಯ ನಿಲುವು

ಅಮೇರಿಕಾವು ಪನ್ನುನ ಹತ್ಯೆಯ ಷಡ್ಯಂತ್ರ ರೂಪಿಸಿರುವ ಆರೋಪದಲ್ಲಿ ಭಾರತೀಯ ನಾಗರೀಕನನ್ನು ಬಂದಿಸಲಾಗಿದ್ದರೂ ಈ ಆರೋಪ ಇಲ್ಲಿಯವರೆಗೆ ಸಾಬೀತು ಆಗಿಲ್ಲ. ಪಾಶ್ಚಿಮಾತ್ಯ ದೇಶಗಳಿಂದ ಇತರ ದೇಶಗಳ ಮೇಲೆ ಒತ್ತಡ ತರುವುದಕ್ಕಾಗಿ ಯಾವುದೇ ಸುಳ್ಳು ಆರೋಪ ಮಾಡಲು ಹಿಂಜರಿಯುವುದಿಲ್ಲ. ಇರಾಕ್ ನ ಸರ್ವಾಧಿಕಾರಿ ಸದ್ದಾಮ್ ಹುಸೇನ್ ಇವರ ಬಳಿ ರಾಸಾಯನಿಕ ಶಸ್ತ್ರಾಸ್ತ್ರಗಳಿರುವ ಸುಳ್ಳು ಆರೋಪ ಮಾಡುತ್ತಾ ಅವರ ದೇಶದ ಮೇಲೆ ದಾಳಿ ನಡೆಸಿ ಅವನನ್ನು ಗಲ್ಲಿಗೇರಿಸಿದರು; ಆದರೆ ಅವನ ಬಳಿ ರಾಸಾಯನಿಕ ಶಸ್ತ್ರಾಸ್ತ್ರಗಳು ದೊರೆಯಲಿಲ್ಲ. ಇಂತಹ ಅಮೇರಿಕಾದ ಮೇಲೆ ಮತ್ತು ಪಶ್ಚಿಮಾತ್ಯ ದೇಶಗಳ ಮೇಲೆ ವಿಶ್ವಾಸವಿಡಲು ಸಾಧ್ಯವಿಲ್ಲ !