ರಾಷ್ಟ್ರ ಸೇವೆಯನ್ನು ಯೋಗಿಯಾಗಿ ಮಾಡಬೇಕು, ಭೋಗಿಯಾಗಿ ಅಲ್ಲ ! – ಪ. ಪೂ. ಪ್ರೇಮಾನಂದ ಮಹಾರಾಜ

  • ಅಧೊಗತಿಯತ್ತ ಹೋಗುತ್ತಿರುವ ಭಾರತೀಯ ಸಮಾಜಕ್ಕೆ ಅಧ್ಯಾತ್ಮ ಕಲಿಸುವ ಬಗ್ಗೆ ಕೂಡ ಹೇಳಿದರು !

  • ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ. ಪೂ. ಸರಸಂಘಚಾಲಕ ಡಾ. ಮೋಹನ ಜಿ ಭಾಗವತ ಇವರು ದರ್ಶನ ಪಡೆದರು !

ವೃಂದಾವನ (ಉತ್ತರಪ್ರದೇಶ) – ನಮ್ಮ ರಾಷ್ಟ್ರಧ್ವಜ ಮತ್ತು ನಮ್ಮ ರಾಷ್ಟ್ರ ಇದು ನಮಗಾಗಿ ದೇವರಾಗಿದ್ದಾರೆ. ನೀವು ತಪಸ್ಸಿನ ಮಾಧ್ಯಮದಿಂದ ಭಜನೆಯ ಮೂಲಕ (ನಾಮಜಪದ ಮೂಲಕ) ಲಕ್ಷಾಂತರ ಜನರ ಬುದ್ಧಿ ಶಬ್ದಗೊಳಿಸಬಹುದು. ಒಂದು ಭಜನೆ ಲಕ್ಷಾಂತರ ಜನರ ಉದ್ಧಾರ ಮಾಡಬಹುದು. ನೀವು ಭಜನೆ ಮಾಡಿರಿ, ಇಂದ್ರಿಯಗಳ ಮೇಲೆ ವಿಜಯ ಪಡೆಯಿರಿ ಮತ್ತು ರಾಷ್ಟ್ರಸೇವೆಗಾಗಿ ಜೀವ ಮುಡಿಪಾಗಿಡಿ. ರಾಷ್ಟ್ರಸೇವೆಗಾಗಿ ಜಿತೇಂದ್ರಿಯರಾಗಿ ಎಂದರೆ ಯೋಗಿಯಾಗಿ ಮಾಡಲು ಮಹತ್ವ ನೀಡಿ. ಭೋಗಿಯಾಗಿ ಅಲ್ಲ ಎಂದು ಪ.ಪೂ. ಪ್ರೇಮಾನಂದಜಿ ಮಹಾರಾಜರು ಅಮೂಲ್ಯ ಮಾರ್ಗದರ್ಶನ ಮಾಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಮತ್ತು ಸಂಘದ ಇತರ ಪದಾಧಿಕಾರಿಗಳು ಪ. ಪೂ. ಮಹಾರಾಜರ ದರ್ಶನ ಪಡೆಯುವುದಕ್ಕಾಗಿ ಇತ್ತೀಚಿಗೆ ಅವರ ಆಶ್ರಮಕ್ಕೆ ಬಂದಿದ್ದರು. ಆ ಸಮಯದಲ್ಲಿ ಪ. ಪೂ. ಮಹಾರಾಜರು ಅಧ್ಯಾತ್ಮ ಮತ್ತು ಸಾಧನೆಯ ಮಹತ್ವವನ್ನು ತಿಳಿಸಿದರು. ಪ. ಪೂ. ಮಹಾರಾಜರ ಮಾರ್ಗದರ್ಶನದ ಈ ವಿಡಿಯೋ ಒಂದೇ ದಿನದಲ್ಲಿ ಲಕ್ಷಾಂತರ ಜನರು ನೋಡಿದ್ದಾರೆ.

(ಸೌಜನ್ಯ – Amar Ujala)

ಶ್ರದ್ಧೆ ದೃಢವಾಗಿದ್ದರೆ, ಎಲ್ಲವೂ ಪರಮಮಂಗಲವೇ ಆಗುವುದು !

ಈ ಸಮಯದಲ್ಲಿ ಪ. ಪೂ. ಸರಸಂಘಚಾಲಕರು ಮಾತನಾಡಿ, ನೀವು ಪ್ರವಚನದಲ್ಲಿ ಏನು ಹೇಳುತ್ತೀರಿ, ಅದನ್ನೇ ನಾವು ಸಮಾಜದ ಎದುರು ಮಂಡಿಸುತ್ತೇವೆ. ನಾವು ಎಂದು ನಿರಾಶವಾಗುವುದಿಲ್ಲ; ಆದರೆ ಮುಂದೆ ಹೇಗೆ ಆಗುವುದು ಎಂದು ಆತಂಕ ಆಗುತ್ತದೆ ? ನಮ್ಮ ಎಲ್ಲರ ಮನಸ್ಸಿನಲ್ಲಿ (ಹಿಂದೂ ಸಮಾಜದ ಹೇಗೆ ಆಗುವುದು ?) ಈ ಭಯ ಇದೆ ಎಂದು ಹೇಳಿದರು.
ಇದರ ಬಗ್ಗೆ ಪ. ಪೂ. ಪ್ರೇಮಾನಂದ ಮಹಾರಾಜ ಇವರು, ಇದರ ಉತ್ತರ ಬಹಳ ಸುಲಭವಾಗಿದೆ. ನೀವು ಭಗವಾನ್ ಶ್ರೀಕೃಷ್ಣನ ಮೇಲೆ ಶ್ರದ್ಧೆ ಇಡುವುದಿಲ್ಲ. ಏನೇ ಆದರೂ ಭಗವಂತ ಶ್ರೀಕೃಷ್ಣನ ಮೇಲಿನ ಶ್ರದ್ಧೆ ಕಡಿಮೆಯಾಗದಂತೆ ಇರುವುದು, ಮುಖ್ಯ ವಿಷಯ ಗಮನದಲ್ಲಿಡಬೇಕು, ನಮ್ಮ ಶ್ರದ್ದೆ ದೃಢವಾಗಿದ್ದರೆ, ಎಲ್ಲವೂ ಪರಮಮಂಗಲವಾಗುವುದು. ನಮಗೆ ನಮ್ಮ ಅಧ್ಯಾತ್ಮಿಕ ಬಲ ತಿಳಿಯಬೇಕು. ನಾವು ನಮ್ಮ ಸ್ವರುಪ ಗುರುತಿಸುತ್ತೇವೆ, ಆದ್ದರಿಂದ ಭಯ ಏಕೆ ? ಭಗವಂತ ಮೂರು ರೀತಿಯ ಲೀಲೆ ಮಾಡುತ್ತಾನೆ, ಅವು ಎಂದರೆ ಉತ್ಪತ್ತಿ, ಸ್ಥಿತಿ ಮತ್ತು ಲಯ. ಯಾವಾಗ ಯಾವ ಆದೇಶ ಇರುವುದು ಹಾಗೆ ನಾವು ಮಾಡಬೇಕು; ಕಾರಣ ನಾವು ಅವನ ದಾಸನಾಗಿದ್ದೇವೆ, ಯಾವುದು ಮಂಗಲ ರಚನೆಯಾಗಿದೆ ಅದೇ ಆಗುವುದು. ಅದು ಶ್ರೀ ಕೃಷ್ಣನೇ ರಚಿಸಿದ್ದಾನೆ. ಎಂದಿಗೂ ಅನುಮಾನ ಪಡಬೇಡಿ. ಯಾವ ರೀತಿ ಶ್ರೀ ಕೃಷ್ಣನು ನೀವೆಲ್ಲರನ್ನು ಸಿದ್ಧಗೊಳಿಸಿದ್ದಾನೆ ಹಾಗೆಯೇ ಇನ್ನೋರ್ವರನ್ನು ಅವನು ಸಿದ್ಧಗೊಳಿಸುವನು. ಅವನು ಎಲ್ಲವೂ ನಡೆಸುವನು. ನೀವು ಯಾವುದೇ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಜೊತೆಗೆ ಶ್ರೀ ಕೃಷ್ಣನಿದ್ದಾನೆ. ನಿರಾಸೆ ಮತ್ತು ಉದಾಸೀನತೆಗೆ ನಮ್ಮ ಜೀವನದ ಮೇಲೆ ಯಾವುದೇ ಅಧಿಕಾರವಿಲ್ಲ. ಯಾವುದೇ ರೀತಿಯ ಭಯವಿಲ್ಲ ಅಥವಾ ದುಃಖವಿಲ್ಲ. ನಾವು ಅವಿನಾಶೀ ಆಗಿದ್ದೇವೆ, ಯಾವ ಸೇವೆ ಸಿಗುವುದು, ಅದನ್ನು ಮಾಡುವುದು. ಎಲ್ಲಿಯವರೆಗೆ ಶ್ವಾಸ ಇದೆ ಅಲ್ಲಿಯವರೆಗೆ ಎಲ್ಲವೂ ಮಾಡುವುದು. ದೇಹ ತ್ಯಾಗದ ನಂತರ ಅವನಲ್ಲಿಯೇ (ಭಗವಂತನಲ್ಲಿ) ಲಿನವಾಗುವುದು.

‘ದೇಶವಾಸಿಯರ ವಿಚಾರ ಶುದ್ಧಗೊಳಿಸುವುದು’, ಇದೇ ನಮ್ಮ ಮುಖ್ಯ ಉದ್ದೇಶವಾಗಿರಬೇಕು ! ಪ. ಪೂ. ಪ್ರೇಮಾನಂದಜಿ ಮಹಾರಾಜ

ಪ. ಪೂ. ಮಹಾರಾಜರು ಮಾತು ಮುಂದುವರಿಸುತ್ತಾ, ನಮಗೆ ಪ್ರಭು ಶ್ರೀರಾಮ ಮತ್ತು ಭಗವಂತ ಶ್ರೀ ಕೃಷ್ಣ ಪ್ರಿಯವಾಗಿದ್ದಾರೆ, ಹಾಗೆಯೇ ನಮ್ಮ ದೇಶ ಪ್ರಿಯವಾಗಿದೆ; ಆದರೆ ನಮ್ಮ ಧರ್ಮದ ಸ್ವರೂಪ ನಾವು ಮರೆತಿದ್ದೇವೆ. ನನಗೆ ನಮ್ಮ ಜೀವನದ ಗುರಿ ತಿಳಿದಿದೆ ? ನಮಗೆ ದೇಶದ ಪ್ರತಿಯೊಬ್ಬ ವ್ಯಕ್ತಿ ಪ್ರಿಯನಾಗಿದ್ದಾನೆಯೇ; ಆದರೆ ಇಂದು ಯಾವ ಭಾವನೆಗಳು ನಿರ್ಮಾಣವಾಗುತ್ತಿದೆ, ಅವು ನಮ್ಮ ದೇಶ ಮತ್ತು ಧರ್ಮಕ್ಕಾಗಿ ಯೋಗ್ಯವಾಗಿಲ್ಲ. ಹಿಂಸೆಯ ಹೆಚ್ಚುತ್ತಿರುವ ಸ್ವರೂಪ ಅಪಾಯದ ಸೂಚನೆಯಾಗಿದೆ. ಆದ್ದರಿಂದ ನಾವು ಜನರಿಗೆ ಸುಖ ಸೌಲಭ್ಯ ನೀಡಿದರೂ ಜನರನ್ನು ಸುಖಿಯಾಗಿಸಲು ಸಾಧ್ಯವಿಲ್ಲ. ಇದರ ಕಾರಣ ಸುಖದ ಸ್ವರೂಪ ವಿಚಾರದಿಂದ ಇರುತ್ತದೆ. ನಮ್ಮ ವಿಚಾರವೇ ಅಯೋಗ್ಯವಾಗಿದ್ದರೆ, ಏನು ಉಪಯೋಗ? ನಮ್ಮ ಉದ್ದೇಶ ಇದು ‘ದೇಶವಾಸಿಯಾರ ವಿಚಾರ ಶುದ್ಧ ಮಾಡುವುದಾಗಿದೆ’.

೧. ನಾವು ನಮ್ಮ ಆಚರಣೆಯಿಂದ, ನಮ್ಮ ಸಂಕಲ್ಪದಿಂದ ಮತ್ತು ನಮ್ಮ ವಾಣಿಯಿಂದ ಸಮಾಜ ಮತ್ತು ರಾಷ್ಟ್ರ ಸೇವೆ ಮಾಡಬೇಕಿದೆ. ನಾನು, ನಿಮ್ಮಂತಹ ಸನ್ಮಾರ್ಗದಾಲ್ಲಿ ಪ್ರೇರಿತ ಗೊಳಿಸುವವರ ಆರೋಗ್ಯ ಒಳ್ಳೆಯದಾಗಿರಲಿ, ಭಗವಂತ ನಿಮ್ಮನ್ನು ಯಾವಾಗಲೂ ರಕ್ಷಿಸಲಿ ಮತ್ತು ನೀವು ಮುಂದೆ ಮುಂದೆ ಸಾಗಿರಿ ಎಂದು ಯಾವಾಗಲೂ ಪ್ರಾರ್ಥಿಸುತ್ತೇನೆ.

೨. ನಿಮಗೆ ಭಗವಂತನ ಯಾವ ಜನ್ಮ ನೀಡಿದ್ದಾನೆ, ಅದು ಕೇವಲ ವ್ಯಾವಹಾರಿಕ ಮತ್ತು ಆಧ್ಯಾತ್ಮಿಕ ಸೇವೆ ಮಾಡುವುದಕ್ಕಾಗಿ ನೀಡಿದ್ದಾನೆ. ನಾವು ನಮ್ಮ ದೇಶವಾಸಿಯರಿಗೆ ಸುಖೀಸುವುದಿದ್ದರೆ, ಅವರು ಕೇವಲ ಸುಖ ಸೌಲಭ್ಯ ಮತ್ತು ವಸ್ತುಗಳ ಮಾಧ್ಯಮದಿಂದ ನಾವು ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಅವರ ಬೌದ್ಧಿಕ ಮಟ್ಟದಲ್ಲಿ ಸುಧಾರಣೆ ಆಗುವುದು ಆವಶ್ಯಕವಾಗಿದೆ. ನಮ್ಮ ಸಮಾಜದ ಬೌದ್ಧಿಕ ಮಟ್ಟ ಕೇಳಗೆಜಾರುತ್ತಾ ಇದೆ. ಇದು ಚಿಂತೆಯ ವಿಷಯವಾಗಿದೆ. ನಾವು ಅವರಿಗೆ ಸೌಲಭ್ಯಗಳನ್ನು ನೀಡಿ ಬೊಗವಿಲಾಸದ ಮಾಧ್ಯಮಗಳು ಒದಗಿಸಿ ಕೊಡಬಹುದು, ಆದರೆ ಅವರ ಹೃದಯದಲ್ಲಿನ ಮಲಿನತೆಯದು ಏನು ? ಅವರಲ್ಲಿನ ಹಿಂಸಕ ಪ್ರವೃತ್ತಿ, ಅಪವಿತ್ರ ಬುದ್ಧಿ ಇದರಿಂದ ಏನು ಉಪಯೋಗವಾಗುವುದಿಲ್ಲ.

೩. ನಮ್ಮ ದೇಶ ಧರ್ಮ ಪ್ರಧಾನವಾಗಿದೆ. ನಮ್ಮ ಶಿಕ್ಷಣ ಪದ್ಧತಿಯಿಂದ ಕೇವಲ ಆಧುನಿಕ ರೂಪವೇ ಪಡೆದಿದೆ; ಹೊಸ ಪೀಳಿಗೆಯಲ್ಲಿನ ಹಿಂಸಕ ಪ್ರವೃತ್ತಿ ನೋಡಿದರೆ ಬಹಳ ದುಃಖವಾಗುತ್ತದೆ. ಆದ್ದರಿಂದ ನಾನು ಯಾವಾಗಲೂ ಎಷ್ಟು ಜನರು ನನ್ನ ಹತ್ತಿರ ಬರುತ್ತಾರೆ ಗಮನಿಸುತ್ತೇನೆ. ಅವರ ಬುದ್ಧಿ ಶುದ್ಧವಾಗಬೇಕು ಎಂದು ಹೇಳಿದರು.