ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನು ಇವನ ಹತ್ಯೆಯ ಷಡ್ಯಂತ್ರ ರೂಪಿಸಿರುವುದರ ಕುರಿತು ಭಾರತೀಯ ನಾಗರಿಕನ ಬಂಧನ ! 

ಅಮೇರಿಕಾದಿಂದ ಕಾರ್ಯಾಚರಣೆ !

ಪನ್ನು ಕೊಲೆಗಾಗಿ ಭಾರತೀಯ ಅಧಿಕಾರಿಯಿಂದ ಸುಪಾರಿ; ಅಮೇರಿಕಾದ ದಾವೆ

ನ್ಯೂಯಾರ್ಕ್ (ಅಮೇರಿಕಾ) – ‘ಸಿಖ್ ಫಾರ್ ಜಸ್ಟೀಸ್ ‘ ಈ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಅಮೆರಿಕದಲ್ಲಿ ವಾಸಿಸುವ ಮುಖ್ಯಸ್ಥ ಗುರುಪಥವಂತ ಸಿಂಹ ಪನ್ನುನ ಹತ್ಯೆಗೆ ಯತ್ನಿಸಿದ ಪ್ರಕರಣದಲ್ಲಿ ಅಮೆರಿಕಾದ ಪೊಲೀಸರು ಭಾರತೀಯ ನಾಗರಿಕ ನಿಖಿಲ ಗುಪ್ತಾನನ್ನು ಬಂಧಿಸಿದೆ. ಗುಪ್ತಾ ಇವನಿಗೆ ಹತ್ಯೆಗಾಗಿ ಭಾರತೀಯ ಅಧಿಕಾರಿ ಸುಪಾರಿ ನೀಡಿದ್ದರು ಎಂದು ಆರೋಪಿಸಲಾಗಿದೆ. ಈ ಅಧಿಕಾರಿಯ ಹೆಸರು ಇಲ್ಲಿಯವರೆಗೆ ಬೆಳಕಿಗೆ ಬಂದಿಲ್ಲ. ಕೆಲವು ದಿನಗಳ ಹಿಂದೆ ಅಮೇರಿಕಾದ ಸರಕಾರ ಪನ್ನು ಮೇಲೆ ನ್ಯೂಯಾರ್ಕ್ ನಲ್ಲಿ ಮಾರಣಾಂತಿಕ ದಾಳಿಯ ಷಡ್ಯಂತ್ರ ರೂಪಿಸಿರುವ ಆರೋಪ ಮಾಡಿತ್ತು. ಇದರಲ್ಲಿ ಭಾರತದ ಕೈವಾಡವಿದೆ. ಈ ಷಡ್ಯಂತ್ರ ವಿಫಲಗೊಳಿಸಲಾಗಿದೆ. ‘ಈ ದಾಳಿ ಯಾವ ದಿನ ನಡೆಯುವುದಿತ್ತು ? ಇದು ಹೇಳಿರಲಿಲ್ಲ. ಇದರ ಬಗ್ಗೆ ಭಾರತ ಕೂಡ ತನಿಖೆ ನಡೆಸಲು ಸಮ್ಮತಿಸಿತ್ತು. ಜೂನ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇವರು ಅಮೆರಿಕಾ ಪ್ರವಾಸದ ನಂತರ ಅಮೆರಿಕಾದ ಅಧಿಕಾರಿಗಳಿಂದ ಈ ಅಂಶ ಭಾರತದ ಎದುರು ಮಂಡಿಸಿತ್ತು.

೧. ನವೆಂಬರ್ ೨೯ ರಂದು ನ್ಯೂಯಾರ್ಕದಲ್ಲಿ ನಿಖಿಲ ಗುಪ್ತಾ ಇವನ ವಿರುದ್ಧ ದಾಖಲಿಸಿರುವ ಆರೋಪ ಪತ್ರ ಬೆಳಕಿಗೆ ಬಂದಿದೆ. ಇದರಲ್ಲಿ ಅವನ ಮೇಲೆ ಕೊಲೆ ಸಂಚು, ಹಣ ಪಡೆದು ಹತ್ಯೆಗೆ ಪ್ರಯತ್ನ, ಇಂತಹ ಗಂಭೀರ ಆರೋಪ ಮಾಡಲಾಗಿದೆ. ಈ ಆರೋಪ ಪತ್ರದಲ್ಲಿ 100 ಡಾಲರ್ ನ ಉಲ್ಲೇಖವೂ ಇದೆ. ಈ ಹಣ ಗುಪ್ತಾ ಇವನಿಗೆ ಮುಂಗಡವಾಗಿ ನೀಡಲಾಗಿತ್ತು. ಆರೋಪ ಪತ್ರದಲ್ಲಿ ಭಾರತೀಯ ಅಧಿಕಾರಿಗೆ ‘ಸಿಸಿ-೧’ ಎಂದು ಹೇಳಲಾಗಿದೆ. ಅದರ ಪ್ರಕಾರ ಸಿಸಿ-೧ ಇವನು ಭಾರತ ಸರಕಾರದ ಒಂದು ವ್ಯವಸ್ಥೆಯ ಸಿಬ್ಬಂದಿ ಆಗಿದ್ದಾನೆ. ಅವನು ಅನೇಕ ಬಾರಿ ತನ್ನನ್ನು ‘ಹಿರಿಯ ಕ್ಷೇತ್ರ ಅಧಿಕಾರಿ’ ಎಂದು ಹೇಳಿದ್ದಾನೆ. ‘ಈ ಅಧಿಕಾರಿ ಸುರಕ್ಷಾ ವ್ಯವಸ್ಥೆ ಮತ್ತು ಗೂಢಾಚಾರ ಇಲಾಖೆಯಲ್ಲಿ ಜವಾಬ್ದಾರ ಅಧಿಕಾರಿ ಆಗಿದ್ದಾನೆ’, ಎಂದು ಹೇಳಲಾಗುತ್ತಿದೆ.

೨. ೫೨ ವರ್ಷದ ನಿಖಿಲ ಗುಪ್ತಾ ಹಿಂದೆ ಮಾದಕ ವಸ್ತುಗಳು ಮತ್ತು ಶಸ್ತ್ರಾಸ್ತ್ರದ ಅಂತರಾಷ್ಟ್ರೀಯ ಕಳ್ಳ ಸಾಗಾಣಿಕೆ ಮಾಡುತ್ತಿದ್ದ. ಅಮೇರಿಕಾಗೆ ಷಡ್ಯಂತ್ರದ ಮಾಹಿತಿ ದೊರೆತನಂತರ ನಿಖಿಲ್ ಗೆ ಚೆಕ್ ರಿಪಬ್ಲಿಕ್ ಇಲ್ಲಿ ಅಧಿಕಾರಿಗಳಿಗೆ ಹೇಳಿ ಜೂನ್ ೩೦ ರಂದು ಬಂಧಿಸಲಾಯಿತು ಮತ್ತು ನಂತರ ಅವನನ್ನು ಅಮೇರಿಕಾಗೆ ಹಸ್ತಾಂತರಿಸಲಾಯಿತು. ನಿಖಿಲಗೆ ಈ ಪ್ರಕರಣದಲ್ಲಿ ೧೦ ವರ್ಷದ ಶಿಕ್ಷೆಯಾಗಬಹುದು.

೩. ನಿಖಿಲ ಗುಪ್ತಾನು ಹತ್ಯೆ ಮಾಡುವವನಿಗೆ ೧ ಲಕ್ಷ ಅಮೆರಿಕ ಡಾಲರ್ ನೀಡಲು ಒಪ್ಪಿಕೊಂಡಿದ್ದ. ಇದರಲ್ಲಿ ೧೫ ಸಾವಿರ ಡಾಲರ್ ನೀಡಿದ್ದಾನೆ. ಷಡ್ಯಂತ್ರ ಹೇಗೆ ಇತ್ತು ?ಓರ್ವ ಭಾರತೀಯ ಅಧಿಕಾರಿಯ ಆದೇಶದ ಮೇರೆಗೆ ನಿಖಿಲನು ಪನ್ನುಗೆ ಕೊಲ್ಲುವುದಕ್ಕಾಗಿ ಓರ್ವ ಅಪರಾಧಿಯನ್ನು ಸಂಪರ್ಕಿಸಿದ್ದರು; ಆದರೆ ಪ್ರತ್ಯಕ್ಷದಲ್ಲಿ ಅವನು ಅಪರಾಧಿ ಅಮೇರಿಕಾದ ದಲ್ಲಾಳಿ ಆಗಿದ್ದನು. ಈ ದಲ್ಲಾಳಿಯಿಂದ ನಿಖಿಲನ ಗುರುತು ಇನ್ನೋರ್ವ ಬೇಹುಗಾರಿಕೆಯ ಅಧಿಕಾರಿಯ ಜೊತೆಗೆ ಮಾಡಿಸಿಕೊಟ್ಟ ನಂತರ ಅವನು ಹತ್ಯೆ ಮಾಡಲು ಸಿದ್ದನಾದನು. ಅದಕ್ಕಾಗಿ ಅಂದಾಜು ೮೩ ಲಕ್ಷ ರೂಪಾಯ ವ್ಯವಹಾರ ಮಾಡಲಾಗಿತ್ತು. ಒಪ್ಪಂದದ ನಂತರ ‘ಸಿಸಿ-೧’ ಈ ಭಾರತೀಯ ಅಧಿಕಾರಿಯು ಗುಪ್ತಾಗೆ ಪನ್ನುನ ನ್ಯೂಯಾರ್ಕ್ ನಲ್ಲಿನ ಮನೆಯ ವಿಳಾಸ, ಮೊಬೈಲ್ ನಂಬರ್ ಮತ್ತು ದಿನಚರಿ ಕುರಿತು ಸಂಪೂರ್ಣ ಮಾಹಿತಿ ನೀಡಿದ. ನಿಖಿಲ ಗುಪ್ತಾ ಇವರು ಹತ್ಯೆ ಮಾಡುವವರಿಗೆ ಆದಷ್ಟು ಬೇಗ ಕೆಲಸ ಪೂರ್ಣಗೊಳಿಸಲು ಹೇಳಿದನು. ಆದರೂ ‘ಆ ದಿನಾಂಕದಂದು ಭಾರತ ಮತ್ತು ಅಮೆರಿಕಾದ ಅಧಿಕಾರಿಗಳ ಜೊತೆಗೆ ಉನ್ನತ ಮಟ್ಟದ ಸಭೆ ನಡೆಯುವುದಿತ್ತು, ಆ ದಿನಾಂಕಕ್ಕೆ ಹತ್ಯೆ ಮಾಡಬಾರದೆಂದು ಕೂಡ ಅವನಿಗೆ ಹೇಳಲಾಗಿತ್ತು. ಇದೇ ಸಮಯದಲ್ಲಿ ಪ್ರಧಾನ ಮಂತ್ರಿ ಮೋದಿ ಅಮೆರಿಕಾಗೆ ಹೋಗಿದ್ದರು.ಗುಪ್ತಾನು ಹತ್ಯೆ ಮಾಡುವವನಿಗೆ, ಹರದೀಪ ಸಿಂಗ ನಿಜ್ಜರ್ ಕೂಡ ಅವನ ಹಿಟ್ ಲೀಸ್ಟನಲ್ಲಿದ್ದನು. ಕೆನಡಾದಲ್ಲಿ ಅವನ ಹತ್ಯೆಯ ನಂತರ ಸಿಸಿ-೧ ಪನ್ನು ಗೆ ಸಂಬಂಧಿತ ಒಂದು ವಾರ್ತೆ ಗುಪ್ತಾಗೆ ಕಳುಹಿಸಿದ್ದ. ಇದರಲ್ಲಿ ಭಾರತೀಯ ಅಧಿಕಾರಿಯು ಅವನನ್ನು ಕೊಲ್ಲುವುದು ಈಗ ಆದ್ಯತೆ ಎಂದು ಹೇಳಿದ್ದ.

ಭಾರತದ ಸ್ಪಷ್ಟೀಕರಣ

ಈ ಪ್ರಕರಣದಲ್ಲಿ ಭಾರತವು ಸ್ಪಷ್ಟೀಕರಣ ನೀಡಿದೆ. ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗಚಿ ಇವರು ಪತ್ರಕರ್ತರ ಸಭೆಯಲ್ಲಿ, ಭಾರತ ಈ ಆರೋಪವನ್ನು ಗಂಭೀರವಾಗಿಯೇ ಪರಿಗಣಿಸಿದೆ. ಓರ್ವ ವ್ಯಕ್ತಿಯ ವಿರುದ್ಧ ಅಮೇರಿಕಾದ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ, ಅವನ ಸಂಬಂಧ ಭಾರತೀಯ ಅಧಿಕಾರಿಗಳ ಜೊತೆಗೆ ಜೋಡಿಸಲಾಗಿದೆ, ಇದು ಆತಂಕದ ವಿಷಯವಾಗಿದೆ. ಇದು ಭಾರತ ಸರಕಾರದ ನೀತಿಯ ವಿರುದ್ಧವಾಗಿದೆ. ಅಮೇರಿಕಾದ ಜೊತೆಗೆ ದ್ವಿಪಕ್ಷಿಯ ರಕ್ಷಣಾ ಸಹಕಾರ ಒಪ್ಪಂದದ ಪ್ರಕಾರ ಎರಡು ದೇಶಗಳು ಪರಸ್ಪರ ಮಾಹಿತಿ ನೀಡಿದ್ದಾರೆ. ನಾವು ಈ ಮಾಹಿತಿಯನ್ನು ಗಂಭೀರವಾಗಿಯೇ ಪರಿಗಣಿಸಿದ್ದೇವೆ. ಇದರಿಂದ ನಾವು ಉನ್ನತ ಮಟ್ಟದ ತನಿಖಾ ಸಮಿತಿ ಸ್ಥಾಪಿಸಿದ್ದೇವೆ ಎಂದು ಹೇಳಿದರು.

ಸಂಪಾದಕರ ನಿಲುವು

ಕಳೆದ ಕೆಲವು ವರ್ಷಗಳಿಂದ ಗುರುಪತವಂತ ಸಿಂಹ ಪನ್ನು ನಿರಂತರವಾಗಿ ಭಾರತ ವಿರೋಧಿ ಹೇಳಿಕೆ ನೀಡುತ್ತಿದ್ದಾನೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುವ ಬೆದರಿಕೆ ನೀಡುತ್ತಿದ್ದಾನೆ. ಇದು ಅಮೆರಿಕಾಗೆ ಕಾಣುವುದಿಲ್ಲವೇ ? ಅವನ ಮೇಲೆ ಅಮೆರಿಕ ಏಕೆ ಕ್ರಮ ಕೈಗೊಳ್ಳುವುದಿಲ್ಲ ? ಇದರಿಂದ ಅಮೇರಿಕಾದ ಭಾರತದ ಕುರಿತು ಇರುವ ಮಲತಾಯಿ ಧೋರಣೆ ಸ್ಪಷ್ಟವಾಗುತ್ತದೆ. ಇಂತಹ ಅಮೇರಿಕಾದ ಮೇಲೆ ಭಾರತ ವಿಶ್ವಾಸ ಇಡುವುದು ಎಂದರೆ ಆತ್ಮಹತ್ಯೆ ಮಾಡಿಕೊಳ್ಳುವ ಹಾಗೆ ಎಂಬುದು ತಿಳಿದುಕೊಳ್ಳಬೇಕು !