ಜ್ಞಾನವಾಪಿಯ ಸಮೀಕ್ಷೆಗೆ ಹೋಗುವಾಗ ಸಾವಿರಾರು ಮುಸಲ್ಮಾನರು ನಮ್ಮ ಕಾರಿಗೆ ಮುತ್ತಿಗೆ ಹಾಕಿದ್ದರು 

ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂ ಪಕ್ಷದ ನ್ಯಾಯವಾದಿ ವಿಷ್ಣು ಶಂಕರ ಜೈನ ಇವರು ಹೇಳಿದ ನೆನಪುಗಳು

ಪೂ.(ನ್ಯಾಯವಾದಿ) ಹರಿಶಂಕರ ಜೈನ
ನ್ಯಾಯವಾದಿ ವಿಷ್ಣುಶಂಕರ ಜೈನ

ವಾರಣಾಸಿ – ‘ನ್ಯಾಯಾಲಯದ ಆದೇಶದಂತೆ ವಿವಾದಿತ ಜ್ಞಾನವಾಪಿಯ ಸಮೀಕ್ಷೆಗೆ ಹೋಗುವಾಗ, ನಾನು ಮತ್ತು ನನ್ನ ತಂದೆಯವರಾದ, ಸರ್ವೋಚ್ಚ ನ್ಯಾಯಾಲಯದ ಹಿರಿಯ (ನ್ಯಾಯವಾದಿ) ಪೂ. ಹರಿ ಶಂಕರ ಜೈನ ಇವರು ೨೦೨೨ ರಲ್ಲಿ ಅನೇಕ ಸವಾಲು ಗಳನ್ನು ಎದುರಿಸಬೇಕಾಯಿತು. ಜ್ಞಾನವಾಪಿ ಸಮೀಕ್ಷೆಯನ್ನು ವಿರೋಧಿಸಿ ೫೦ ರಿಂದ ೬೦ ಸಾವಿರ ಮುಸಲ್ಮಾನರು ತಂದೆಯವರ ಕಾರಿಗೆ ಮುತ್ತಿಗೆ ಹಾಕಿದ್ದರು ಮತ್ತು ಆಗ ನಾನು ಅಸಹಾಯಕನಾಗಿದ್ದೆ’ ಎಂದು ನ್ಯಾಯವಾದಿ ವಿಷ್ಣು ಶಂಕರ್‌ ಜೈನ್‌ ಇವರು ಜ್ಞಾನವಾಪಿ ವಿಚಾರಣೆಗೆ ಹೋದಾಗಿನ ಘಟನೆ ನೆನಪಿಸಿಕೊಳ್ಳುತ್ತಾ ಹೇಳಿದರು.

ಜ್ಞಾನವಾಪಿ ವಿಚಾರಣೆಯ ಸಂದರ್ಭದಲ್ಲಿ ನ್ಯಾಯವಾದಿ ವಿಷ್ಣು ಶಂಕರ್‌ ಜೈನ್‌ ಅವರು ತಮಗಾದ ಕಹಿ ಅನುಭವಗಳನ್ನು ಇತಿಹಾಸಕಾರ ವಿಕ್ರಮ್‌ ಸಂಪತ್‌ ಅವರು ತಮ್ಮ ಮುಂಬರುವ ಕಾಶಿ ಕುರಿತಾದ ಮುಂಬರುವ ಪುಸ್ತಕದಲ್ಲಿ ವಿವರಿಸಲಿದ್ದಾರೆ. ಆನಂದ್‌ ರಂಗನಾಥನ್‌ ಅವರು ನವೆಂಬರ್‌ ೫ ರಂದು ‘ಘಿ’ (ಹಿಂದಿನ ಟ್ವಿಟರ್) ನಲ್ಲಿ ಸಂದರ್ಶನದ ಒಂದು ಭಾಗವನ್ನು ಪ್ರಸಾರ ಮಾಡಿದರು. ಕಾಶಿ ವಿಶ್ವನಾಥ ಮಂದಿರ-

ಜ್ಞಾನವಾಪಿ ಸಂಬಂಧಿತ ಖಟ್ಲೆಯ ನ್ಯಾಯವಾದಿ ವಿಷ್ಣು ಶಂಕರ್‌ ಜೈನ್‌ ಮತ್ತು ಅವರ ತಂದೆ ಸರ್ವೋಚ್ಚ ನ್ಯಾಯಾಲಯದ ಹಿರಿಯ (ನ್ಯಾಯವಾದಿ) ಪೂಜ್ಯ ಹರಿ ಶಂಕರ್‌ ಜೈನ್‌ ಇವರು ಹಿಂದೂ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ನ್ಯಾಯಾಲಯದ ಆದೇಶದಂತೆ ವಾರಣಾಸಿಯ ವಿವಾದಿತ ಜ್ಞಾನವಾಪಿ ಸಮೀಕ್ಷೆ ಮತ್ತು ಚಿತ್ರೀಕರಣವನ್ನು ನಡೆಸಿದ ದಿನದ ವಿವರವಾದ ಘಟನಾಕ್ರಮಗಳನ್ನು ವಿವರಿಸಿದ ನ್ಯಾಯವಾದಿ ವಿಷ್ಣು ಶಂಕರ್‌ ಜೈನ್, ”ಅದು ಮೇ ೫ ಅಥವಾ ೬, ೨೦೨೨ ಆಗಿತ್ತು. ಅಂದು ‘ಅಂಜುಮನ್‌ ಇಂತೇಜಾಮಿಯಾ ಮಸೀದಿ ಸಮಿತಿ’ಯ ಕಾರ್ಯದರ್ಶಿಯವರು ಜ್ಞಾನವಾಪಿ ಸಮೀಕ್ಷೆ ಹಾಗೂ ಚಿತ್ರೀಕರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು. ಅವರು ನೀಡಿದ ಕರೆಯಿಂದ ೫೦- ೬೦ ಸಾವಿರ ಮುಸಲ್ಮಾನರು ಬೀದಿಗಿಳಿದು ವಾರಣಾಸಿಯ ಶ್ರೀ ಕಾಶಿ ವಿಶ್ವನಾಥ ದೇವಾಲಯದ ಪ್ರವೇಶ ಸಂಖ್ಯೆ ೪ ರ ವರೆಗಿನ ಎಲ್ಲಾ ರಸ್ತೆಗಳನ್ನು ತಡೆದರು. ಅವರು ಸ್ಕಲ್‌ ಕ್ಯಾಪ್‌ಗಳನ್ನು ಧರಿಸಿದ್ದರು ಮತ್ತು ವಿಶಿಷ್ಟ ರೀತಿಯಲ್ಲಿ ವಸ್ತ್ರ ಗಳನ್ನು ಧರಿಸಿದ್ದರು. ಒಂದು ಕ್ಷಣ ನಮಗೆ, ‘ನಾವು ಎಂದಿಗೂ ಜ್ಞಾನವಾಪಿಯನ್ನು ತಲುಪುವುದಿಲ್ಲ. ನಮ್ಮ ಮೇಲೆ ದಾಳಿ ನಡೆಯುವುದು’ ಎಂದು ಅನಿಸಿತು. ಆಗ ನಾನು ಅಸಹಾಯಕತೆಯಿಂದ ನನ್ನ ತಂದೆಯತ್ತ ನೋಡಿದೆ. ಅವರು ನನಗೆ ಬಹಳ ಶಾಂತವಾಗಿ ‘ಸತ್ತೋ ಅಥವಾ ಬದುಕಿದ್ದೋ ನಮ್ಮ ಮಹಾದೇವನನ್ನು ಭೇಟಿಯಾಗಲಿದ್ದೇವೆ. ಆದ್ದರಿಂದ ಮುಂದುವರಿಯೋಣ’ ಎಂದರು.

ಮುಸಲ್ಮಾನರು ಜ್ಞಾನವಾಪಿ ಸಮೀಕ್ಷಾ ತಂಡವನ್ನು ಒಳಗೆ ಪ್ರವೇಶಿಸದಂತೆ ತಡೆದ ಕಾರಣ ನ್ಯಾಯಾಲಯವು ಜ್ಞಾನವಾಪಿ ಸಮೀಕ್ಷೆಯನ್ನು ನಿಲ್ಲಿಸಲು ಆದೇಶಿಸಿತು. ವಾರಣಾಸಿಯಲ್ಲಿ ಒಂದು ದಿನಕ್ಕಾಗಿ ಸಮೀಕ್ಷೆಯನ್ನು ಸ್ಥಗಿತಗೊಳಿಸಿದ ನಂತರ, ಸಮೀಕ್ಷಾ ತಂಡದೊಂದಿಗೆ ಬಂದಿದ್ದ ಒಬ್ಬ ವಿಡಿಯೊಗ್ರಾಫರ್‌ ಸ್ವಸ್ತಿಕ, ನಂದಿ ಮತ್ತು ಕಮಲದ ಚಿತ್ರಗಳಿರುವ ಹಿಂದೂ ದೇವತೆಗಳ ಚಿತ್ರಗಳನ್ನು ಬಹಿರಂಗಪಡಿಸಿದರು. ಬಳಿಕ ಮೇ ೧೬ ರಂದು ಸರ್ವೆ ನಡೆಸಲಾಯಿತು. ಮೇ ೧೬ ರಂದು ಜ್ಞಾನವಾಪಿ ವಾಸ್ತುವಿನಲ್ಲಿ ಶಿವಲಿಂಗ ಕಂಡುಬಂದ ನಂತರ ಸರ್ವೋಚ್ಚ ನ್ಯಾಯಾಲಯವು ವಾರಣಾಸಿಯ ಜಿಲ್ಲಾ ದಂಡಾಧಿಕಾರಿಗಳಿಗೆ ಪವಿತ್ರ ವಾಸ್ತುವನ್ನು ಸಂರಕ್ಷಿಸುವಂತೆ ನಿರ್ದೇಶನ ನೀಡಿತು. ಅಲಹಾಬಾದ್‌ ಉಚ್ಚ ನ್ಯಾಯಾಲಯವು ೩ ಆಗಸ್ಟ್ ೨೦೨೩ ರಂದು ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆಯ ಮಾಡುತ್ತಿದ್ದ ಜ್ಞಾನವಾಪಿಯ ಸಮೀಕ್ಷೆಗೆ ಸವಾಲೊಡ್ಡುವ ‘ಅಂಜುಮನ್‌ ಇಂತೇಜಾಮಿಯಾ ಮಸೀದಿ ಸಮಿತಿ’ಯ ಅರ್ಜಿ ವಜಾಗೊಳಿಸಿ ಭಾರತೀಯ ಪುರಾತತ್ವ ಸಮೀಕ್ಷೆಗೆ ಅನುಮತಿಸಿತು