ಪ್ರಿಯತಮನಿಗೆ ತನ್ನ 7 ವರ್ಷದ ಮಗಳ ಮೇಲೆ ಬಲಾತ್ಕಾರ ಮಾಡಲು ಒಪ್ಪಿಗೆ ನೀಡಿದ್ದ ಮಹಿಳೆಗೆ 40 ವರ್ಷಗಳ ಜೈಲು ಶಿಕ್ಷೆ !

ಕೇರಳದ ಘಟನೆ !

ತಿರುವನಂತಪುರಂ (ಕೇರಳ) – ಇಲ್ಲಿಯ ತ್ವರಿತ ನ್ಯಾಯಾಲಯವು ಪ್ರಿಯತಮನಿಗೆ ತನ್ನ 7 ವರ್ಷದ ಮಗಳ ಮೇಲೆ ಬಲಾತ್ಕಾರ ನಡೆಸಲು ಅವಕಾಶ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆಗೆ 40 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದರೊಂದಿಗೆ 20 ಸಾವಿರ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಮಾರ್ಚ್ 2018 ರಿಂದ ಸೆಪ್ಟೆಂಬರ್ 2019 ರ ನಡುವೆ ಬಾಲಕಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು. ಈ ಮಹಿಳೆಯ ಪತಿ ಮಾನಸಿಕವಾಗಿ ಅಸ್ಥಿರವಾಗಿದ್ದಾನೆ. ಹಾಗಾಗಿ ಈ ಮಹಿಳೆ ತನ್ನ ಪತಿಯೊಂದಿಗೆ ವಾಸಿಸುತ್ತಿರಲಿಲ್ಲ. ಆ ಬಳಿಕ ಈ ಮಹಿಳೆಯು ಶಿಶುಪಾಲನ ಹೆಸರಿನ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು. ಈತನೇ ಈ ಮಹಿಳೆಯ ಮಗಳ ಮೇಲೆ ಬಲಾತ್ಕಾರ ಮಾಡಿದ್ದನು.

1. ನ್ಯಾಯಮೂರ್ತಿ ಅರ್. ರೇಖಾ ಇವರು ತೀರ್ಪು ನೀಡುವಾಗ, ಈ ಪ್ರಕರಣದಲ್ಲಿ ತಾಯಿಗೆ ಶಿಕ್ಷೆಯಾಗಿದೆ; ಏಕೆಂದರೆ ವಿಚಾರಣೆ ನಡೆಯುತ್ತಿರುವಾಗಲೇ ಪ್ರಮುಖ ಆರೋಪಿ ಅಂದರೆ ಈ ಮಹಿಳೆಯ ಪ್ರಿಯತಮ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂತ್ರಸ್ತೆ ಬಾಲಕಿಯ ಬಾಲ್ಯವನ್ನು ಅವಳ ತಾಯಿಯೇ ಹೊಸಕಿ ಹಾಕಿದ್ದಳು. ತನ್ನ ಪುಟ್ಟ ಹುಡುಗಿಯನ್ನು ರಕ್ಷಿಸುವ ಜವಾಬ್ದಾರಿ ಆಕೆಯ ತಾಯಿಯದಾಗಿತ್ತು; ಆದರೆ ಈ ತಾಯಿಯು ಪ್ರಿಯತಮೆಗೆ ತನ್ನ 7 ವರ್ಷದ ಮಗಳ ಮೇಲೆ ಬಲಾತ್ಕಾರ ಮಾಡಲು ಒಪ್ಪಿಗೆ ನೀಡಿದಳು.

2. ಪೊಲೀಸರು ನೀಡಿರುವ ಮಾಹಿತಿಯನುಸಾರ, ಸಂತ್ರಸ್ತೆಯ 11 ವರ್ಷದ ಮಲತಂಗಿ ಕೂಡ ಶೋಷಣೆಗೆ ಒಳಗಾಗಿದ್ದಾಳೆ. ಸಂತ್ರಸ್ತೆ ಮತ್ತು ಆಕೆಯ 11 ವರ್ಷದ ಸಹೋದರಿಗೆ ಶಾಂತವಾಗಿರುವಂತೆ ಬೆದರಿಕೆ ಹಾಕಲಾಗಿತ್ತು. ಈ ಇಬ್ಬರೂ ಬಾಲಕಿಯರು ಅಜ್ಜಿ ಮನೆಗೆ ಓಡಿ ಹೋದ ನಂತರ ಈ ಘಟನೆ ಬೆಳಕಿಗೆ ಬಂದಿದೆ.