ಸುಂದರಕಾಂಡ ಮತ್ತು ಹನುಮಾನ ಚಾಲಿಸಾ ಪಾರಾಯಣ ಮಾಡುವ ಉತ್ತರ ಪ್ರದೇಶದ ಕೈದಿಗಳು !

ಪ್ರತಿಯೊಂದು ಕೈದಿಗೂ ಈ ರೀತಿಯ ಧರ್ಮಗ್ರಂಥಗಳನ್ನು ಒದಗಿಸಲಿರುವ ಸರಕಾರ !

ಆಝಮಗಡ (ಉತ್ತರಪ್ರದೇಶ) – ಉತ್ತರಪ್ರದೇಶದ ಜೈಲಿನಲ್ಲಿರುವ ಕೈದಿಗಳು ರಾಮಾಯಣದ ಸುಂದರಕಾಂಡ ಮತ್ತು ಹನುಮಾನ ಚಾಲಿಸಾದ ಪಾರಾಯಣ ಮಾಡುತ್ತಿದ್ದಾರೆ,\ ಎಂದು ರಾಜ್ಯದ ಜೈಲು ಸಚಿವ ಧರ್ಮವೀರ ಪ್ರಜಾಪತಿ ಇವರು ಮಾಹಿತಿ ನೀಡಿದರು. ಅವರು ರಾಜ್ಯದಲ್ಲಿರುವ ಎಲ್ಲಾ ಜೈಲು ಅಧಿಕಾರಿಗಳಿಗೆ ಗ್ರಂಥಗಳ ಹೆಚ್ಚಿನ ಪ್ರತಿಗಳನ್ನು ಒದಗಿಸಿಕೊಡುವುದರ ಜೊತೆಗೆ ಇತರ ಸೌಲಭ್ಯಗಳನ್ನೂ ನೀಡುವಂತೆ ಆದೇಶಿಸಲಾಗಿದೆ ಎಂದರು. ಅದರೊಂದಿಗೆ ಯಾವುದೇ ಕೈದಿಗೆ ಇದು ಕಡ್ಡಾಯಗೊಳಿಸಲಾಗಿಲ್ಲ ಎಂದು ಕೂಡ ಸ್ಪಷ್ಟಪಡಿಸಿದರು. ಇಲ್ಲಿ ಜೈಲಿನಲ್ಲಿ ಅವರು ಕೈದಿಗಳ ಜೊತೆಗೆ ಮಾತನಾಡಿದ ನಂತರ ಪತ್ರಕರ್ತರ ಜೊತೆಗೆ ಮಾತನಾಡುತ್ತಿದ್ದರು.

(ಸೌಜನ್ಯ – Zee News)

೧. ಮಂತ್ರಿ ಧರ್ಮವೀರ ಪ್ರಜಾಪತಿಯವರು, ಕೈದಿಗಳ ವ್ಯಕ್ತಿತ್ವ ಸುಧಾರಿಸಲು ಈ ಪ್ರಯತ್ನ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ಧಾರ್ಮಿಕ ಉದ್ದೇಶವಿಲ್ಲ ಮತ್ತು ಅನಿವಾರ್ಯತೆ ಕೂಡ ಇಲ್ಲ. ವ್ಯಕ್ತಿತ್ವ ವಿಕಸನಕ್ಕಾಗಿ ಶ್ರೀ ಹನುಮಂತನಗಿಂತಲೂ ಒಳ್ಳೆಯ ಗುರು ಬೇರೆ ಯಾರು ಇರಲು ಸಾಧ್ಯವಿಲ್ಲ. ಆದ್ದರಿಂದ ಕೈದಿಗಳಿಗೆ ಹನುಮಾನ ಚಾಲಿಸಾ ಪಠಿಸಲು ಹೇಳಲಾಗಿದೆ. ಇದರ ಮೂಲಕ ಅವರು ಜೈಲಿನಿಂದ ಬಿಡುಗಡೆಯಾದ ನಂತರ ಸಮಾಜದಲ್ಲಿ ಒಳ್ಳೆಯ ಜೀವನ ನಡೆಸಲು ಕಲಿಯುವವರು. ಅದಕ್ಕಾಗಿ ನಾವು ಅವರಿಗೆ ಹನುಮಾನ ಚಾಲಿಸಾ ಒದಗಿಸಿಕೊಟ್ಟಿದ್ದೇವೆ .

೨. ಈ ಹಿಂದೆ ನಾನು ಅನೇಕ ಜೈಲುಗಳಿಗೆ ಹೋಗಿ ಬಂದಿದ್ದೇನೆ. ಮಥುರಾ ಮತ್ತು ಆಗ್ರಾದ ಜೈಲಿನಲ್ಲಿ ಹನುಮಾನ ಚಾಲಿಸಾ ವಿತರಿಸಲಾಗಿದೆ. ಹಾಗೂ ಅಲ್ಲಿ ಸಾಮೂಹಿಕ ಪಾರಾಯಣ ಕೂಡ ನಡೆಸಲಾಗುತ್ತಿದೆ. ಇದರ ನಂತರ ಅಲ್ಲಿ ಪಾರಾಯಣಕ್ಕೆ ಕೈಡಿಗಳ ಜನಜಂಗುಳಿಯಾಗುತ್ತಿದೆ. ಈ ಪರಿಸ್ಥಿತಿ ಆಝಮಗಡದ ಜೈಲಿನಲ್ಲಿ ಕೂಡ ಕಂಡುಬಂದಿದೆ. ಅದ್ದರಿಂದ ಇಲ್ಲಿ ಯಾರೇ ಧಾರ್ಮಿಕ ಗ್ರಂಥಕ್ಕೆ ಬೇಡಿಕೆ ನೀಡಿದರೆ ಅದನ್ನು ಅವರಿಗೆ ತಕ್ಷಣ ಒದಗಿಸಿ ಕೊಡಲಾಗುತ್ತಿದೆ. ಇದಕ್ಕಾಗಿ ಗ್ರಂಥಾಲಯಗಳಲ್ಲಿ ಗ್ರಂಥಗಳು ಇಡಲಾಗುವುದು. ರಾಜ್ಯದ ಎಲ್ಲಾ ಜೈಲುಗಳಲ್ಲಿ ಈ ರೀತಿಯ ವ್ಯವಸ್ಥೆ ಮಾಡಲಾಗಿದೆ.

೩. ಕೆಲವು ಮುಸಲ್ಮಾನ ಕೈದಿಗಳು ಕೂಡ ಹಿಂದೂಗಳ ಧರ್ಮಗ್ರಂಥಗಳನ್ನು ಓದುತ್ತಿದ್ದಾರೆ, ಈ ರೀತಿಯ ಅನೇಕ ಕೈದಿಗಳು ಇತರ ಧರ್ಮಗಳ ಗ್ರಂಥಗಳನ್ನು ಓದುತ್ತಿದ್ದಾರೆ, ಎಂಬ ಮಾಹಿತಿ ಕೂಡ ಮಂತ್ರಿ ಪ್ರಜಾಪತಿ ಇವರು ನೀಡಿದರು. (ಇತರ ಧರ್ಮಗಳ ಪುಸ್ತಕಗಳನ್ನು ಹಿಂದೂ ಕೈದಿಗಳು ಓದಿದ ನಂತರ ಅವರನ್ನು ಮತಾಂತರಿಸುವ ಪ್ರಯತ್ನ ಯಾರು ಮಾಡದಂತೆ ಗಮನ ನೀಡುವುದೂ ಆವಶ್ಯಕವಾಗಿದೆ ! – ಸಂಪಾದಕರು)

ಸಂಪಾದಕೀಯ ನಿಲುವು

ಉತ್ತರಪ್ರದೇಶ ಸರಕಾರದ ಶ್ಲಾಘನೀಯ ನಿರ್ಣಯ ! ಹೀಗೆ ದೇಶದ ಪ್ರತಿಯೊಂದು ಜೈಲಿನಲ್ಲಿ ಮಾಡಬೇಕು. ಹಾಗೂ ಕೈದಿಗಳಿಗೆ ಧರ್ಮಶಿಕ್ಷಣ ನೀಡಿ ಅವರಿಗೆ ಧರ್ಮಾಚರಣೆ ಮಾಡಲು ಹೇಳಬೇಕು. ಇದರ ಮೂಲಕ ಅವರ ಮನೋವೃತ್ತಿ ಬದಲಾಗಿ ಅವರು ಸುಸಂಸ್ಕೃತವಾಗುವರು.