ರಾಜಪ್ರಭುತ್ವ ವ್ಯವಸ್ಥೆಯನ್ನು ಆಗ್ರಹಿಸುವ ಮತ್ತು ಪೊಲೀಸರ ನಡುವೆ ಸಂಘರ್ಷ! ಸೈನ್ಯಕ್ಕೆ ಸತರ್ಕರಾಗಿರಲು ಆದೇಶ |
ಕಾಠ್ಮಾಂಡು (ನೇಪಾಳ) – ನೇಪಾಳದಲ್ಲಿ ಮತ್ತೊಮ್ಮೆ ಹಿಂದೂ ರಾಜಪ್ರಭುತ್ವ ವ್ಯವಸ್ಥೆ ಜಾರಿಗೊಳಿಸುವುದಕ್ಕಾಗಿ ಆಗ್ರಹಿಸಿ ನವಂಬರ್ ೨೩ ರಂದು ಪ್ರತಿಭಟನೆ ನಡೆಸಲಾಯಿತು. ಈ ಸಮಯದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯ ಸಂಘರ್ಷ ನಡೆಯಿತು. ಪ್ರತಿಭಟನೆಯ ಸಮಯದಲ್ಲಿ ಮಾಜಿ ಪ್ರಧಾನಮಂತ್ರಿ ಕೆ.ಪಿ. ಓಲಿ ಶರ್ಮಾ ಅವರ ಯು.ಎಂ.ಎಲ್. ಈ ಪಕ್ಷದ ಯುವಶಾಖೆ ‘ಯುಬಸಂಘ’ದ ಕಾರ್ಯಕರ್ತರ ಜೊತೆಗೆ ಹೊಡೆದಾಟ ನಡೆಯಿತು. ಆದ್ದರಿಂದ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಬಳಸಿದರು. ಈ ಘಟನೆಯ ನಂತರ ಸರಕಾರವು ಸೈನ್ಯಕ್ಕೆ ಸತರ್ಕವಾಗಿರಲು ಆದೇಶ ನೀಡಿತು. ಈ ಪ್ರತಿಭಟನೆ ಶ್ರೀ ದುರ್ಗಾ ಪರಸಾಯಿ ಇವರ ನೇತೃತ್ವದಲ್ಲಿ ನಡೆಯಿತು. ಅವರು ಓರ್ವ ಉದ್ಯಮಿಯಾಗಿದ್ದು ಹಿಂದೆ ಅವರು ಮಾವೋವಾದಿ ಆಗಿದ್ದರು.
‘Restore Monarchy’ protest in Nepal: Thousands of protesters call for abolishment of Republic@alysonle talks to @murarka_saloni for more
Watch more: https://t.co/AXC5qRugeb pic.twitter.com/MUJwAwe9qX
— WION (@WIONews) November 24, 2023