ಕೇಂದ್ರ ಸಚಿವ ಗಿರಿರಾಜ ಸಿಂಹ ಇವರು ಮುಖ್ಯಮಂತ್ರಿ ನಿತೀಶ ಕುಮಾರ ಇವರಿಗೆ ಪತ್ರ !
ಪಾಟಲಿಪುತ್ರ (ಬಿಹಾರ) – ಕೇಂದ್ರ ಗ್ರಾಮೀಣ ವಿಕಾಸ ಮತ್ತು ಪಂಚಾಯತ ರಾಜ್ಯ ಸಚಿವ ಗಿರಿರಾಜ ಸಿಂಹ ಇವರು ಬಿಹಾರದ ಮುಖ್ಯಮಂತ್ರಿ ನಿತೀಶ ಕುಮಾರ ಇವರಿಗೆ ಪತ್ರ ಬರೆದು ಉತ್ತರ ಪ್ರದೇಶದಂತೆ ಬಿಹಾರದಲ್ಲಿ ಕೂಡ ಹಲಾಲ ಪ್ರಮಾಣೀಕೃತ ಉತ್ಪಾದನೆಗಳ ಮೇಲೆ ನಿಷೇಧ ಹೇರುವ ಮತ್ತು ಪ್ರಮಾಣಪತ್ರದ ಹಿಂದೆ ಇರುವವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ಪತ್ರದಲ್ಲಿ ಸಿಂಹ ಇವರು, ಬಿಹಾರ ರಾಜ್ಯದಲ್ಲಿ ಆಹಾರ ಪದಾರ್ಥ, ಅಡುಗೆ ಎಣ್ಣೆ, ಡ್ರೈಫ್ರೂಟ್ಸ್, ಸಿಹಿ ತಿನುಸಗಳು, ಸೌಂದರ್ಯ ವರ್ದಕಗಳು, ಔಷಧಿಗಳು ಮುಂತಾದವುಗಳಿಗಾಗಿ ಹಲಾಲ್ ಪ್ರಮಾಣಪತ್ರ ನೀಡಲಾಗುತ್ತದೆ. ವಿಶೇಷವೆಂದರೆ ಈ ಪದಾರ್ಥಗಳಿಗಾಗಿ ‘ಭಾರತೀಯ ಆಹಾರ ಸುರಕ್ಷಾ ಮತ್ತು ಪ್ರಾಧೀಕರಣ (ಎಫ್.ಎಸ್.ಎಸ್.ಐ.ಎ.) ಈ ಸರಕಾರಿ ಇಲಾಖೆಯಿಂದ ಪ್ರಮಾಣ ಪತ್ರ ನೀಡುತ್ತಾರೆ. ಹಲಾಲ್ ಪ್ರಮಾಣ ಪತ್ರದ ಹೆಸರಿನಲ್ಲಿ ಇಸ್ಲಾಂನ ಸಂಬಂಧ ಇಲ್ಲದಿರುವ ವ್ಯವಹಾರದ ಇಸ್ಲಾಮಿಕರಣ ಮಾಡಲಾಗುತ್ತಿದೆ. ಹಲಾಲ್ ಪ್ರಮಾಣಪತ್ರ ನೀಡುವ ಸಂಸ್ಥೆ ಸ್ವಯಂಭು ಆಗಿದ್ದೂ ಕಂಪನಿಗಳಿಂದ ಹಣ ಪಡೆದು ಪ್ರಮಾಣಪತ್ರ ನೀಡುತ್ತಿದ್ದಾರೆ. ಇದು ಒಂದು ಷಡ್ಯಂತ್ರವಾಗಿರುವ ಆರೋಪ ನಿರಾಧಾರವಲ್ಲ. ಭಾರತದಂತಹ ಜಾತ್ಯತೀತ ಪ್ರಜಾಪ್ರಭುತ್ವ ದೇಶದಲ್ಲಿ ಹಲಾಲ್ ಪ್ರಮಾಣಪತ್ರದ ಘಟನೆ ಸಂವಿಧಾನದ ವಿರುದ್ಧವಾಗಿದ್ದು ಅದು ದೇಶದ್ರೋಹವೇ ಆಗಿದೆ. ಸಂಪೂರ್ಣ ಜಗತ್ತಿನಲ್ಲಿ ಹಲಾಲ ಪ್ರಮಾಣ ಪತ್ರದ ವ್ಯವಹಾರ ೧೬೬ ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚು ಇದೆ. ಈ ಹಣ ಭಯೋತ್ಪಾದಕ ಚಟುವಟಿಗಾಗಿ ಬಳಕೆ ಮಾಡಲಾಗುತ್ತಿರುವುದು ಕೂಡ ಬೆಳಕಿಗೆ ಬಂದಿದೆ. ಇದರ ವಿಸ್ತೃತ ವಿಚಾರಣೆ ನಡೆಸುವ ಆವಶ್ಯಕತೆ ಇದೆ.
After UP, Union minister @girirajsinghbjp demands ban on halal products in #Biharhttps://t.co/CL4SY9QiWG
— IndiaToday (@IndiaToday) November 23, 2023
ಕರ್ನಾಟಕದಲ್ಲಿ ಕೂಡ ಹಲಾಲ್ ಉತ್ಪಾದನೆಗಳ ಮೇಲೆ ನಿಷೇಧಕ್ಕೆ ಆಗ್ರಹ !
ಕರ್ನಾಟಕದಲ್ಲಿನ ಭಾಜಪದ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಇವರು ಕೇಂದ್ರ ಸಚಿವ ಪಿಯೂಷ್ ಗೋಯಲ ಇವರಿಗೆ ಪತ್ರ ಬರೆದು ಹಲಾಲ್ ಪ್ರಮಾಣ ಪತ್ರ ನೀಡುವ ಸಂಸ್ಥೆಯ ಮೇಲೆ ನಿಷೇಧ ಹೇರಲು ಆಗ್ರಹಿಸಿದ್ದಾರೆ. ಅವರು ಪತ್ರದಲ್ಲಿ, ಧಾರ್ಮಿಕ ಸಂಸ್ಥೆಯ ಹೆಸರಿನಲ್ಲಿ ಕೆಲವು ಇಸ್ಲಾಮಿ ಸಂಘಟನೆಗಳು ಮಾಂಸ, ಆಹಾರ ಪದಾರ್ಥ, ಸೌಂದರ್ಯ ವರ್ದಕಗಳು ಮತ್ತು ಇತರ ವಸ್ತುಗಳಿಗೆ ಹಲಾಲ್ ಪ್ರಮಾಣ ಪತ್ರ ನೀಡುತ್ತಿದೆ. ಇದು ಕಳವಳಕಾರಿಯಾಗಿದೆ.
ಸಂಪಾದಕರ ನಿಲುವು
* ಪ್ರತಿಯೊಂದು ರಾಜ್ಯ ನಿಷೇಧ ಹೇರುವ ಬದಲು ಕೇಂದ್ರ ಸರಕಾರವೇ ದೇಶಾದ್ಯಂತ ಹಲಾಲ್ ಉತ್ಪನ್ನಗಳ ಮೇಲೆ ನಿಷೇದ ಹೇರುವುದೇ ಯೋಗ್ಯ ! |