ಈ ಸಂಚಿನಲ್ಲಿ ಸಹಭಾಗದ ಬಗ್ಗೆ ಅಮೆರಿಕದಿಂದ ಭಾರತಕ್ಕೆ ಎಚ್ಚರಿಕೆ ನೀಡಿರುವ ಸುದ್ಧಿ ಪ್ರಕಟ !
ನವ ದೆಹಲಿ – ‘ಸಿಖ್ ಫಾರ್ ಜಸ್ಟೀಸ್’ ಈ ನಿಷೇಧಿತ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಗುರುಪತವಂತ ಸಿಂಹ ಪನ್ನು ಇವನ ಹತ್ಯೆಯ ಷಡ್ಯಂತ್ರ ಅಮೇರಿಕಾ ವಿಫಲಗೊಳಿಸಿತ್ತು. ಈ ಷಡ್ಯಂತ್ರದ ಸಹಭಾಗದ ಬಗ್ಗೆ ಅಮೇರಿಕಾವು ಭಾರತಕ್ಕೆ ಎಚ್ಚರಿಕೆ ನೀಡಿದೆ, ಎಂದು ಒಂದು ಇಂಗ್ಲಿಷ್ ದೈನಿಕದಲ್ಲಿ ಸುದ್ಧಿ ಪ್ರಕಟವಾಗಿದೆ. ಪನ್ನು ಬಳಿ ಅಮೆರಿಕಾ ಮತ್ತು ಕೆನಡಾದ ಎರಡು ದೇಶಗಳ ನಾಗರಿಕತ್ವ ಇದೆ. ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಇವನ ಹತ್ಯೆಯಲ್ಲಿ ಭಾರತೀಯ ಹಂತಕರ ಕೈವಾಡ ಇರುವುದೆಂದು ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರೂಡೋ ಇವರು ಈ ಹಿಂದೆ ಆರೋಪಿಸಿರುವುದರಿಂದ ಈಗ ಪನ್ನುನ ಸಂದರ್ಭದಲ್ಲಿ ಈ ಮಾಹಿತಿಯಿಂದ ಭಾರತವನ್ನು ಟೀಕಿಸಬಹುದು.
ಈ ವೃತ್ತದಲ್ಲಿ,
೧. ನಿಜ್ಜರ ಹತ್ಯೆಯ ಪ್ರಕರಣದಲ್ಲಿ ಟ್ರೂಡೋ ಇವರು ಭಾರತದ ಮೇಲೆ ಆರೋಪ ಮಾಡಿದ ನಂತರ ಅಮೇರಿಕಾದಿಂದ ಪನ್ನು ಹತ್ಯೆಯ ಷಡ್ಯಂತ್ರದ ಪರಿಶೀಲನೆ ಅವರ ಮಿತ್ರ ರಾಷ್ಟ್ರದ ಗುಂಪಿನೆದರು ಮಂಡಿಸಿದ್ದರು. ಆದ್ದರಿಂದ ಈ ಘಟನೆಯಲ್ಲಿನ ಸಾಮ್ಯತೆಯಿಂದ ಅಮೆರಿಕ ಮತ್ತು ಅದರ ಮಿತ್ರ ದೇಶದಲ್ಲಿ ಆತಂಕ ನಿರ್ಮಾಣವಾಗಿದೆ.
೨. ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಜೂನ್ ನಲ್ಲಿ ನಡೆದಿರುವ ಅಮೆರಿಕ ಪ್ರವಾಸದ ನಂತರ ಅಮೇರಿಕಾದಿಂದ ಭಾರತದ ಬಳಿ ಈ ಪ್ರಕರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲಾಗಿತ್ತು. ಈ ಷಡ್ಯಂತ್ರ ರಚಿಸುವವರನ್ನು ಇದರಿಂದ ಹಿಂದೆ ಸರಿಯಲು ಭಾರತವನ್ನು ಅನಿವಾರ್ಯಗೊಳಿಸಲಾಯಿತು ? ಅಥವಾ ಅಮೇರಿಕಾದ ತನಿಖಾ ವ್ಯವಸ್ಥೆ ‘ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಕೆಶನ’ಯಿಂದ (ಎಫ್.ಬಿ.ಐ.) ಇದರಲ್ಲಿ ಹಸ್ತಕ್ಷೇಪ ಮಾಡಿ ಈ ಷಡ್ಯಂತ್ರ ವಿಫಲಗೊಳಿಸಿದಿಯೇ ? ಇದು ಮಾತ್ರ ಸಂಬಂಧಿತ ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ.
US panel seeks to put terrorist Pannun, members of his banned group on no-fly list#AirIndiaThreat #USPanel #Pannu #khalistanhttps://t.co/h7KbeNBSqX
— IndiaToday (@IndiaToday) November 21, 2023
ನಾವು ಅಮೆರಿಕಾದ ಆರೋಪವನ್ನು ಗಂಭೀರವಾಗಿಯೇ ಪರಿಶೀಲಿಸುತ್ತಿದ್ದೇವೆ ! – ಭಾರತ
ಅಮೇರಿಕಾದ ದಾವೆಯ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ ಬಾಗಚಿ ಇವರು, ನಾವು ಸಂಘಟಿತ ಅಪರಾಧಿ, ಭಯೋತ್ಪಾದಕರು ಮತ್ತು ಇತರ ಜನರು ಅವರಲ್ಲಿನ ಸಂಬಂಧದ ವಿಚಾರಣೆ ನಡೆಸುತ್ತಿದ್ದೇವೆ. ಭಾರತ ಈ ರೀತಿಯ ಮಾಹಿತಿಯನ್ನು ಗಂಭೀರವಾಗಿದೆ ಪರಿಗಣಿಸುತ್ತೇವೆ; ಕಾರಣ ಇಂತಹ ವಿಷಯ ನಮ್ಮ ರಕ್ಷಣೆಯ ದೃಷ್ಟಿಯಿಂದಲೂ ಕೂಡ ಅಪಾಯತಂದುವಡ್ಡಬಹುದು. ನಾವು ಅಮೆರಿಕಾದ ಆರೋಪದ ವಿಚಾರಣೆ ನಡೆಸುತ್ತಿದ್ದೇವೆ. ಇದು ಎರಡು ದೇಶಕ್ಕಾಗಿ ಕೂಡ ಆತಂಕದ ವಿಷಯವೇ ಆಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಮೆರಿಕ ಸರಕಾರದ ವಕ್ತಾರ ಎಡ್ರಿಯನ್ ವಾಟಸನ್ ಇವರು, ಭಾರತೀಯ ಅಧಿಕಾರಿಗಳು ಈ ಅಂಶದ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದಾರೆ. ಅವರು, ಭಾರತ ಇಂತಹ ನೀತಿಗಳಿಗೆ ಪ್ರೋತ್ಸಾಹ ನೀಡುವುದಿಲ್ಲ ಎಂದು ನಮಗೆ ಭರವಸೆ ನೀಡಿದ್ದಾರೆ. ಭಾರತ ಸರಕಾರ ಸದ್ಯಕ್ಕೆ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಇದಕ್ಕೆ ಕಾರಣಕರ್ತರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಆಶಿಸುತ್ತೇವೆ, ಎಂದು ಹೇಳಿದರು.
ಸಂಪಾದಕರ ನಿಲುವು* ಪ್ರತಿದಿನ ಭಾರತದ ವಿರುದ್ಧ ವಿಷ ಕಾರುವ ಪನ್ನುನನ್ನು ಅಮೆರಿಕ ಭಾರತದ ವಶಕ್ಕೆ ಏಕೆ ನೀಡುತ್ತಿಲ್ಲ ? ಇದನ್ನು ಅಮೇರಿಕಾ ಜಗತ್ತಿಗೆ ಹೇಳಬೇಕು ! |