|
ನವ ದೆಹಲಿ – ನಮ್ಮಲ್ಲಿ ಜ್ಞಾನ ಮತ್ತು ವಿಜ್ಞಾನದ ಸಂಪತ್ತು ಇದೆ; ಆದರೆ ಜನಬಲದಿಂದ ಸತ್ಯ ಮತ್ತು ಅಸತ್ಯವನ್ನು ನಿರ್ಣಯಿಸಲು ಸಾಧ್ಯವಿಲ್ಲ ಎಂದು ಯೋಗಿ ರಾಮದೇವ ಬಾಬಾ ಅವರು ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಪತಂಜಲಿಯ ಜಾಹೀರಾತಿಗೆ ಸರ್ವೋಚ್ಚ ನ್ಯಾಯಾಲಯ ನೀಡಿರುವ ಎಚ್ಚರಿಕೆಯ ವಿಷಯದಲ್ಲಿ ಅವರು ಮಾತನಾಡುತ್ತಿದ್ದರು.
(ಸೌಜನ್ಯ – IndiaTV)
ಯೋಗ ಋಷಿ ರಾಮದೇವ ಬಾಬಾ ಅವರು ಮಂಡಿಸಿದ ಅಂಶಗಳು
1. ವೈದ್ಯಕೀಯ ಮಾಫಿಯಾ ಸುಳ್ಳು ಪ್ರಚಾರ ಮಾಡುತ್ತಾರೆ, ಪತಂಜಲಿ ಎಂದಿಗೂ ಸುಳ್ಳು ಪ್ರಚಾರ ಮಾಡುವುದಿಲ್ಲ. ತದ್ವಿರುದ್ಧ ಪತಂಜಲಿ ಸ್ವದೇಶಿ ಚಳುವಳಿಯನ್ನು ಉತ್ತೇಜಿಸಿದೆ. ಹರಡುತ್ತಿರುವ ಸುಳ್ಳು ಸುದ್ದಿಗಳು ಬಹಿರಂಗವಾಗಬೇಕು. ಅನಾರೋಗ್ಯಗಳ ಹೆಸರಿನಲ್ಲಿ ಜನರಿಗೆ ಹೆದರಿಸಲಾಗುತ್ತಿದೆ.
2. ನಾನು ಎಂದಿಗೂ ನ್ಯಾಯಾಲಯದಲ್ಲಿ ಹಾಜರಾಗಿಲ್ಲ; ಆದರೆ ನಾನು ಸರ್ವೋಚ್ಚ ನ್ಯಾಯಾಲಯದಲ್ಲಿ ಹಾಜರಾಗಲು ಸಿದ್ಧನಿದ್ದೇನೆ. ನನಗೆ ನನ್ನ ಸಂಪೂರ್ಣ ಸಂಶೋಧನೆಯನ್ನು ಹಾಜರುಪಡಿಸಲು ಅನುಮತಿಸಲು ಸಿಗಬೇಕು ಎನ್ನುವುದು ನನ್ನ ಇಚ್ಛೆಯಾಗಿದೆ. ನಮಗೆ ನಮ್ಮ ರೋಗಿಗಳು ಮತ್ತು ಸಂಶೋಧನೆಯನ್ನು ಹಾಜರು ಪಡಿಸಲು ಅವಕಾಶ ನೀಡಬೇಕು. ನಾನು 1940ರಲ್ಲಿ ಜಾರಿಗೆ ತಂದ ‘ಡ್ರಗ್ ಅಂಡ್ ಮ್ಯಾಜಿಕ್ ರೆಮಿಡೀಸ್ ಆಕ್ಟ್’ನಲ್ಲಿನ ದೋಷಗಳನ್ನು ನಾನು ಬಹಿರಂಗಪಡಿಸಬಲ್ಲೆ.
3. ಜನರಿಗೆ ಒಮ್ಮೆ ಕಾಯಿಲೆ ಬಂದರೆ ಜೀವನಪೂರ್ತಿ ಔಷಧಿ ಸೇವಿಸಬೇಕು ಎಂದು ಹೇಳಲಾಗುತ್ತಿದೆ. ಆದರೆ ನಾವು ಔಷಧಿಗಳನ್ನು ಬಿಟ್ಟು ನೈಸರ್ಗಿಕ ಜೀವನ ಜೀವಿಸುವಂತೆ ಹೇಳುತ್ತೇವೆ. ನಾವು ನೂರಾರು ರೋಗಿಗಳನ್ನು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಎದುರಿಗೆ ತರಲು ಸಿದ್ಧರಾಗಿದ್ದೇವೆ. ಎಲ್ಲ ಸಂಶೋಧನೆಗಳನ್ನು ನೀಡಲು ಸಿದ್ಧ.
4. ನಮ್ಮಲ್ಲಿ ನೂರಾರು ವಿಜ್ಞಾನಿಗಳಿದ್ದಾರೆ. ನಾವು ನೂರಾರು ಸಂಶೋಧನೆಗಳನ್ನು ಮಾರ್ಗದರ್ಶಿ ಸೂಚಿಗಳನ್ನು ಅನುಸರಿಸಿ ನಡೆಸಿದ್ದೇವೆ ಮತ್ತು ಅಂತರರಾಷ್ಟ್ರೀಯ `ಜರ್ನಲ್ಸ್‘ ನಲ್ಲಿ ಸಂಶೋಧನಾ ಪ್ರಬಂಧಗಳು ಪ್ರಕಟಣೆಗೊಂಡಿದೆ. ಅದರ ನಂತರ ನಾವು ಹೇಳುತ್ತಿದ್ದೇವೆ. ಸತ್ಯ-ಅಸತ್ಯದ ನಿರ್ಣಯ ಸಂಪೂರ್ಣ ದೇಶದ ಎದುರಿಗೆ ಆಗಬೇಕು.
5. ಅಲೋಪತಿ ಚಿಕಿತ್ಸೆ ಮಾಡುವ ವೈದ್ಯರ ಸಂಖ್ಯೆ ಬಹಳ ದೊಡ್ಡದಿದೆ. ಅವರ ಲಕ್ಷಾಂತರ ಕೋಟಿ ರೂಪಾಯಿಗಳ ಸಾಮ್ರಾಜ್ಯ ಇದೆ. ಇದರಿಂದ ಸತ್ಯ ಮತ್ತು ಅಸತ್ಯದ ನಿರ್ಣಯವಾಗುವುದಿಲ್ಲ. ಅವರ ಬಳಿ ಅಧಿಕ ಆಸ್ಪತ್ರೆಗಳು ಮತ್ತು ಅಧಿಕ ಡಾಕ್ಟರರು ಇದ್ದಾರೆ, ಆದ್ದರಿಂದ ಅವರ ಧ್ವನಿ ಹೆಚ್ಚು ಕೇಳುತ್ತದೆ, ಆದರೆ ಕಡಿಮೆ ಹಣದ ಕಾರಣ ನಮ್ಮ ಧ್ವನಿ ಕೇಳುವುದಿಲ್ಲ.
6. ನಾವು ಬಡವರಲ್ಲ, ನಮಗೆ ಋಷಿಮುನಿಗಳ ಜ್ಞಾನದ ಪರಂಪರೆಯಿದೆ; ಆದರೆ ನಮ್ಮ ಸಂಖ್ಯೆ ಕಡಿಮೆ ಇದೆ. ನಾವು ಒಂದು ಸಂಸ್ಥೆಯೆಂದು ಸಂಪೂರ್ಣ ಜಗತ್ತಿನ ಔಷಧಿ ಮಾಫಿಯಾಗಳ ವಿರುದ್ಧ ಏಕಾಂಗಿಯಾಗಿ ಹೋರಾಡಲು ಸಿದ್ಧರಾಗಿದ್ದೇವೆ. ಸ್ವಾಮಿ ರಾಮದೇವ ಎಂದಿಗೂ ಹೆದರಲಿಲ್ಲ ಅಥವಾ ಸೋತಿಲ್ಲ. ಅಂತಿಮ ನಿರ್ಣಯದವರೆಗೂ ನಾವು ಈ ಹೋರಾಟ ನಡೆಸುತ್ತೇವೆ. ಸರ್ವೋಚ್ಚ ನ್ಯಾಯಾಲಯವನ್ನು ನಾವು ಯಾವಾಗಲೂ ಗೌರವಿಸುತ್ತೇವೆ.
ಯಾವ ವಿಷಯ?
ಪತಂಜಲಿ ಆಯುರ್ವೇದ ಸಂಸ್ಥೆಯು, ‘ಕೊರೊನಾ ಮೇಲೆ ಅವರ ಉತ್ಪಾದನೆಗಳಾದ ‘ಕೊರೊನಿಲ್’ ಮತ್ತು ‘ಶ್ವಾಸಾರಿ’ ಈ ಔಷಧಗಳ ಮೂಲಕ ಉಪಚಾರವನ್ನು ಮಾಡಬಹುದು’ ಎಂದು ಹೇಳಿಕೆ ನೀಡಿದ ಬಳಿಕ ಆಯುಷ್ ಸಚಿವಾಲಯವು ಸಂಸ್ಥೆಗೆ ಅವರ ಜಾಹೀರಾತನ್ನು ತಕ್ಷಣವೇ ನಿಲ್ಲಿಸುವಂತೆ ಸೂಚಿಸಿತು. ಹಾಗೆಯೇ ಭಾರತೀಯ ವೈದ್ಯಕೀಯ ಸಂಘವು ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿತ್ತು.