ಕಲಿಯುಗದಲ್ಲಿನ ಸರ್ವಶೇಷ್ಠ ನಾಮಜಪಸಾಧನೆ, ನಾಮಜಪ ವಾಣಿ ಮತ್ತು ಧ್ವನಿ-ಪ್ರಕಾಶ ವಿಜ್ಞಾನ

(ಸದ್ಗುರು) ಡಾ. ಪಿಂಗಳೆ

ಏಪ್ರಿಲ್‌ ೧೯೯೭ ರಲ್ಲಿ “ನಾಮಜಪದ ೪ ವಾಣಿಗಳ ಬಗ್ಗೆ ಅಭ್ಯಾಸವರ್ಗವನ್ನು  ತೆಗೆದುಕೊಳ್ಳಿ” ಎಂದು ಸಚ್ಚಿದಾನಂದ ಪರಬ್ರಹ್ಮ ಗುರುದೇವ ಡಾ. ಆಠವಲೆಯವರಿಂದ ನನಗೆ ಸಂದೇಶ ಬಂದಿತು.  ಆಗ ನನಗೆ ವಾಣಿಯ ೪ ವಿಧಗಳಾದ ವೈಖರಿ, ಮಧ್ಯಮಾ, ಪಶ್ಯಂತಿ ಮತ್ತು ಪರಾ ಇವುಗಳ ಬಗ್ಗೆ ಮಾತ್ರ ತಿಳಿದಿತ್ತು. ಇದರ ಹೊರತು ಬೇರೆ ಯಾವುದೇ ಮಾಹಿತಿ ಇರಲಿಲ್ಲ ಮತ್ತು ಇಷ್ಟು ಮಾಹಿತಿಯಿಂದ ಅಭ್ಯಾಸ ವರ್ಗವನ್ನು ತೆಗೆದು ಕೊಳ್ಳಲು ಸಾಧ್ಯವಿಲ್ಲವೆಂದು, ಮೊದಲು ನಾನು ಅಭ್ಯಾಸವರ್ಗವನ್ನು ತೆಗೆದುಕೊಳ್ಳಲು ನಿರಾಕರಿಸಿದೆ. ಆಗ ಗುರು ದೇವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಂದ ಪುನಃ ನನಗೆ ”ಈ ಅಭ್ಯಾಸವರ್ಗವನ್ನು ನೀವೇ  ತೆಗೆದುಕೊಳ್ಳಬೇಕು’’ ಎಂಬ ಸಂದೇಶ ಬಂದಿತು, ಹಾಗಾಗಿ ಅವರ ಇಚ್ಛೆಯನ್ನು ಆಜ್ಞೆ ಎಂದು ಪರಿಗಣಿಸಿ ನಾನು ಅಭ್ಯಾಸವರ್ಗ ತೆಗೆದುಕೊಳ್ಳಲು ನಿರ್ಧರಿಸಿದೆ.

ಆ ಸಮಯದಲ್ಲಿ ನಾನು ಒಂದು ಜಿಲ್ಲೆಯಲ್ಲಿ ಒಂದು ಆಸ್ಪತ್ರೆಯಲ್ಲಿ ರೋಗಿಗಳನ್ನು ನೋಡಲು ಒಂದು ಕೋಣೆಯಲ್ಲಿ ಕುಳಿತುಕೊಳ್ಳುತ್ತಿದ್ದೆ. ನನ್ನ ‘ಕನ್ಸಲಟೇಶನ್’ (ಸಮಾಲೋಚನೆ) ಕೊಠಡಿಯಲ್ಲಿ, ಪ.ಪೂ. ಭಕ್ತರಾಜ ಮಹಾರಾಜರ ಛಾಯಾಚಿತ್ರವನ್ನು ಹಾಕಲಾಗಿತ್ತು. ನಾನು ಅಲ್ಲಿ ಕುಳಿತಿರುವಾಗ ಅವರೊಂದಿಗೆ ಸಂವಾದ ನಡೆಸಿದೆ. ನಾನು ಅವರಿಗೆ ದೂರಿನ ಸ್ವರದಲ್ಲಿ “ನೀವು ನಾಮಜಪದ ವಿಷಯದಲ್ಲಿ ಕೇವಲ ೪ ಶಬ್ದಗಳನ್ನು ಹೇಳಿದ್ದೀರಿ. ಇಷ್ಟು ಮಾಹಿತಿಯನ್ನಾಧರಿಸಿ ಅಭ್ಯಾಸ ವರ್ಗವನ್ನು ತೆಗೆದುಕೊಳ್ಳುವುದಾದರೂ ಹೇಗೆ ?’’ ಎಂದು ಕೇಳಿದೆನು. ಆ ಸಮಯದಲ್ಲಿ ‘ನಾನು ಡಾಕ್ಟರ’ ಎಂಬ ಬಗ್ಗೆ ನನಗೆ ಬಹಳ ಅಹಂಕಾರವಿತ್ತು.  ಇದರಿಂದ  ನಾಮಜಪದ  ವಾಣಿ ಮತ್ತು ಅದರ ಮಹತ್ವವನ್ನು ವಿಜ್ಞಾನ ಮತ್ತು ವೈದ್ಯಕೀಯ ಶಾಸ್ತ್ರದ ಪ್ರಕಾರ ಎಲ್ಲರಿಗೂ ತಿಳಿಯುವಂತೆ ಹೇಳಲು ಸಾಧ್ಯವಾದರೆ ಮಾತ್ರ ಅದು ಎಲ್ಲರಿಗೂ ತಿಳಿಯುತ್ತದೆ ಎಂದು ನನಗೆ ಅನಿಸುತ್ತಿತ್ತು. ಇದರ ಕೆಲವು ಅಂಶಗಳನ್ನು ನಾವು ೨೫/೯ ರ ಸಂಚಿಕೆಯಲ್ಲಿ ತಿಳಿದುಕೊಂಡಿದ್ದೆವು. ಅದರ ಮುಂದಿನ ಭಾಗವನ್ನು ನೋಡೋಣ.

ಭಾಗ -೨

೫. ಅಧ್ಯಾತ್ಮಶಾಸ್ತ್ರಕ್ಕನುಸಾರ ಮನುಷ್ಯನ ದೇಹ ಮತ್ತು ಅವನ ನಾಮಜಪದ ವಾಣಿ

ಆಧುನಿಕ ವಿಜ್ಞಾನಕ್ಕೆ ತಿಳಿಯದೇ ಇದ್ದರೂ, ಅಧ್ಯಾತ್ಮ ಶಾಸ್ತ್ರದಲ್ಲಿ ಮನುಷ್ಯನ ೪ ದೇಹಗಳನ್ನು  ಹೇಳಲಾಗಿದೆ. ಈ ೪ ದೇಹಗಳು ವೈಖರಿ, ಮಧ್ಯಮಾ, ಪಶ್ಯಂತಿ ಮತ್ತು  ಪರಾ  ಹೀಗೆ ೪ ವಾಣಿಗಳು ಏರಿಕೆಯ ಕ್ರಮದಲ್ಲಿ ಉಚ್ಚ ಸ್ತರದ್ದಾಗುತ್ತಾ ಹೋಗುತ್ತವೆ. ಪ್ರತಿಯೊಂದು ವಾಣಿಯ ಮಹತ್ವವೇನು ? ಯಾವ ವಾಣಿಯಲ್ಲಿ ನಾಮಜಪ ಮಾಡಿದರೆ ಯಾವ ರೀತಿಯ ಊರ್ಜೆ(ಶಕ್ತಿ) ನಿರ್ಮಾಣವಾಗುತ್ತದೆ ? ಅವುಗಳ ಪ್ರಮಾಣ ಎಷ್ಟಿರುತ್ತದೆ ? ಅವುಗಳ ಶೇಕಡಾವಾರು ಎಷ್ಟು ?  ಸಾಧನೆ, ದೇಹಶುದ್ಧಿ ಅಥವಾ ಈಶ್ವರಪ್ರಾಪ್ತಿಗಾಗಿ ಎಷ್ಟು ಉಪಯುಕ್ತವಾಗಿದೆ ? ಇಂತಹ ಅನೇಕ ಮಾಹಿತಿಯನ್ನು ನೀಡಲಾಗಿದ್ದು, ಅದರ ಸುಂದರ ಕೋಷ್ಟಕವನ್ನು ತಯಾರಿಸಲು ಅಥವಾ ಪರಮಾತ್ಮನೊಂದಿಗೆ ಅನುಸಂಧಾನ ಆಗುವುದಿಲ್ಲ. ಉದಾ. ಯಾವ ರೀತಿ ತರಗತಿಯಲ್ಲಿನ ಒಬ್ಬ ವಿದ್ಯಾರ್ಥಿಯು ಯಾವುದಾದರೊಂದು ವಿಷಯದಲ್ಲಿ ಶೇ. ೧೦೦ ಕ್ಕೆ ಶೇ. ೨ ಅಂಕಗಳನ್ನುಗಳಿಸುತ್ತಾನೆಯೋ, ಆಗ ಶಿಕ್ಷಕನು ಇಂತಹ ವಿದ್ಯಾರ್ಥಿಯತ್ತ ಹೆಚ್ಚಿನ ಗಮನ ಹರಿಸದೆ,  ಯಾವ ವಿದ್ಯಾರ್ಥಿ ೩೦ ಅಂಕಗಳನ್ನು ಗಳಿಸಿರು ತ್ತಾನೆಯೋ, ಆ ವಿದ್ಯಾರ್ಥಿಯನ್ನು ಯಾವ ರೀತಿ ೩೫ ರ ವರೆಗೆ ತಂದು ಉತ್ತೀರ್ಣಗೊಳಿಸಬಹುದು ಎಂದು ವಿಚಾರ ಮಾಡುತ್ತಾನೆ ಅಥವಾ ಜಾಣ ವಿದ್ಯಾರ್ಥಿಗೆ ಹೆಚ್ಚೆಚ್ಚು ಅಂಕಗಳನ್ನು ಪಡೆಯಲು ಪ್ರೋತ್ಸಾಹಿಸುತ್ತಿರುತ್ತಾನೆ. ಅದೇ ರೀತಿ ಈಶ್ವರನಿಗೆ ವೈಖರಿಯಲ್ಲಿ ಯಾರೋ ನಾಮಜಪಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಮಾತ್ರ ತಿಳಿಯುತ್ತದೆ; ಆದರೆ ಅವನ ತಳಮಳ ಮತ್ತು ಪ್ರಯತ್ನ ಹೆಚ್ಚಾಗುವವರೆಗೆ ಅವನು ಅದರ ಕಡೆಗೆ ಹೆಚ್ಚು ಗಮನ ಕೊಡುವುದಿಲ್ಲ.

೫ ಅ. ಸ್ಥೂಲ ದೇಹ

೫ ಅ ೧. ಕಾರ್ಯ : ಸ್ಥೂಲ ದೇಹ, ಅಂದರೆ ಹೊರಗಿನಿಂದ ಎಲ್ಲರೂ ಪರಸ್ಪರರನ್ನು ನೋಡಬಹುದಾದ ದೇಹ. ಸ್ಥೂಲ ದೇಹವು ಶಾಶ್ವತ ಸ್ವರೂಪವಾದ ಮನಸ್ಸು ಮತ್ತು ಬುದ್ಧಿಗಳ ಕಾರ್ಯದ ಪ್ರಕಟೀಕರಣದ ಮಾಧ್ಯಮವಾಗಿರುತ್ತದೆ.

೫ ಅ ೨. ನಾಮಜಪದ ವಾಣಿ : ದೇಹದಿಂದಾಗುವ ನಾಮಜಪಕ್ಕೆ ವೈಖರಿ ವಾಣಿಯಲ್ಲಿನ ನಾಮಜಪ ಎನ್ನುತ್ತಾರೆ.

೫ ಅ ೩. ಯಾವ ರೀತಿಯ ಘರ್ಷಣೆ ? : ಸ್ಥೂಲದೇಹದ ನಾಲಿಗೆ, ಅಂಗುಳ (ಗಂಟಲು) ಮತ್ತು ತುಟಿ ಇವುಗಳ ಘರ್ಷಣೆಯಿಂದ ನಾಮಜಪ ಮಾಡುವುದೆಂದರೆ ವೈಖರಿ ನಾಮಜಪ ಆಗಿರುತ್ತದೆ.

೫ ಅ ೪. ಊರ್ಜಾನಿರ್ಮಿತಿ (ಶಕ್ತಿ ಉತ್ಪಾದನೆ) :  ವೈಖರಿ ವಾಣಿಯಲ್ಲಿನ ನಾಮಜಪದಿಂದ ಉತ್ಪನ್ನವಾಗುವ ಊರ್ಜೆ ಹೆಚ್ಚಿನಂಶ ಸ್ಥೂಲ (ಧ್ವನಿ)ದ್ದಾಗಿದ್ದು ಮತ್ತು ಸ್ವಲ್ಪಾಂಶ ಸೂಕ್ಷ್ಮ (ಪ್ರಕಾಶ) ಸ್ತರದ್ದಾಗಿರುತ್ತದೆ.

೫ ಅ ೫. ಧ್ವನಿ ಮತ್ತು ಪ್ರಕಾಶದ ಶಕ್ತಿಯ ಪ್ರಮಾಣ : ಪ್ರಕಾಶದ ತುಲನೆಯಲ್ಲಿ ಧ್ವನಿಶಕ್ತಿಯು ಸ್ಥೂಲವಾಗಿರುತ್ತದೆ. ಈ ವಾಣಿಯ ನಾಮಜಪದಲ್ಲಿ ಶೇ. ೯೮ ರಷ್ಟು  ಧ್ವನಿ ಮತ್ತು ಶೇಕಡಾ ೨ ರಷ್ಟು ಪ್ರಕಾಶಶಕ್ತಿಯು ಉತ್ಪಾದನೆಯಾಗುತ್ತದೆ.

೫ ಅ ೬. ಯಾರು ಕೇಳಬಹುದು ? : ಧ್ವನಿಊರ್ಜೆ ಅತ್ಯಧಿಕ ವಿರುವುದರಿಂದ ನಾಮಜಪ ಮಾಡುವ ವ್ಯಕ್ತಿಗೆ ಮತ್ತು ಸುತ್ತಮುತ್ತಲಿನ ಜನರಿಗೆ ಅದು ಕೇಳಿಸುತ್ತದೆ. ಶೇ. ೨ ರಷ್ಟು  ಪ್ರಕಾಶ ಶಕ್ತಿಯು ಅತ್ಯಲ್ಪ ಇರುವುದರಿಂದ, ನಾಮಧಾರಕನಿಗೆ ಈಶ್ವರ ಅಥವಾ ಪರಮಾತ್ಮನೊಂದಿಗೆ ಅನುಸಂಧಾನ ಆಗುವುದಿಲ್ಲ. ಉದಾ. ಯಾವ ರೀತಿ ತರಗತಿಯಲ್ಲಿನ ಒಬ್ಬ ವಿದ್ಯಾರ್ಥಿಯು ಯಾವುದಾದರೊಂದು ವಿಷಯದಲ್ಲಿ ಶೇ. ೧೦೦ ಕ್ಕೆ ಶೇ. ೨ ಅಂಕಗಳನ್ನು ಗಳಿಸುತ್ತಾನೆಯೋ, ಆಗ ಶಿಕ್ಷಕನು ಇಂತಹ ವಿದ್ಯಾರ್ಥಿಯತ್ತ ಹೆಚ್ಚಿನ ಗಮನ ಹರಿಸದೆ,  ಯಾವ ವಿದ್ಯಾರ್ಥಿ ೩೦ ಅಂಕಗಳನ್ನುಗಳಿಸಿರುತ್ತಾನೆಯೋ, ಆ ವಿದ್ಯಾರ್ಥಿಯನ್ನು ಯಾವ ರೀತಿ ೩೫ ರವರೆಗೆ ತಂದು ಉತ್ತೀರ್ಣಗೊಳಿಸಬಹುದು ಎಂದು ವಿಚಾರ ಮಾಡುತ್ತಾನೆ ಅಥವಾ ಜಾಣ ವಿದ್ಯಾರ್ಥಿಗೆ ಹೆಚ್ಚೆಚ್ಚು ಅಂಕಗಳನ್ನು ಪಡೆಯಲು ಪ್ರೋತ್ಸಾಹಿಸುತ್ತಿರುತ್ತಾನೆ. ಅದೇ ರೀತಿ ಈಶ್ವರನಿಗೆ ವೈಖರಿಯಲ್ಲಿ ಯಾರೋ ನಾಮಜಪಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಮಾತ್ರ ತಿಳಿಯುತ್ತದೆ; ಆದರೆ ಅವನ ತಳಮಳ ಮತ್ತು ಪ್ರಯತ್ನ ಹೆಚ್ಚಾಗುವವರೆಗೆ ಅವನು ಅದರ ಕಡೆಗೆ ಹೆಚ್ಚು ಗಮನ ಕೊಡುವುದಿಲ್ಲ.

೫ ಆ. ಸೂಕ್ಷ್ಮ ದೇಹ

೫ ಆ ೧. ಕಾರ್ಯ : ಸೂಕ್ಷ್ಮ ದೇಹ, ಅಂದರೆ ಮನಸ್ಸು. ಮನಸ್ಸು ಸ್ಥೂಲ ದೇಹವನ್ನು ಒಳಗಿನಿಂದ ಮತ್ತು ಹೊರಗಿನಿಂದ (ಅಂತರ್ಬಾಹ್ಯ) ವ್ಯಾಪಿಸಿರುತ್ತದೆ.

೧. ಮನುಷ್ಯನರು ಪರಸ್ಪರರ ಮನಸ್ಸನ್ನು ಪ್ರತ್ಯಕ್ಷ ನೋಡಲು ಸಾಧ್ಯವಿಲ್ಲ; ಆದರೆ ಅವರು ತಮ್ಮ  ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅನುಭವಿಸಬಲ್ಲರು.

೨. ಯಾವುದಾದರೊಬ್ಬ ವ್ಯಕ್ತಿಯ ವಿಚಾರಗಳ ಪ್ರತಿಬಿಂಬವು ಆತನ ಆಚರಣೆಯಿಂದ ಪ್ರಕಟವಾಗುತ್ತಿರುತ್ತದೆ ಅಥವಾ ವ್ಯಕ್ತಿಯ ವ್ಯಕ್ತಿತ್ವ ಮತ್ತು ಆಚರಣೆಯು ಅವನ ವಿಚಾರ ಮತ್ತು ಸಂಸ್ಕಾರವನ್ನು ಪ್ರತಿನಿಧಿಸುತ್ತವೆ ಎನ್ನಬಹುದು.

೩.  ಸಂತರು ಅಥವಾ ಆಧ್ಯಾತ್ಮಿಕ ಅಧಿಕಾರಿ ವ್ಯಕ್ತಿಗಳು ಆವಶ್ಯಕತೆಗನುಸಾರ ಇತರ ವ್ಯಕ್ತಿಗಳ ಮನಸ್ಸಿನಲ್ಲಿರುವ ವಿಚಾರಗಳನ್ನು ಅರಿಯಬಲ್ಲರು.

೪. ಮನಸ್ಸನ್ನು ಪ್ರತ್ಯಕ್ಷ ತೋರಿಸಲು ಅಥವಾ ನೋಡಲು ಸಾಧ್ಯವಾಗದಿದ್ದರೂ, ಆಧುನಿಕ ವಿಜ್ಞಾನವು ಮನಸ್ಸಿನ ಅಸ್ತಿತ್ವವನ್ನು ಒಪ್ಪಿಕೊಳ್ಳುತ್ತದೆ; ಏಕೆಂದರೆ ಪ್ರತಿಯೊಬ್ಬರೂ ತಮ್ಮ ಮನಸ್ಸನ್ನು ಅನುಭವಿಸಬಹುದು.

ವಿಜ್ಞಾನದ ದೃಷ್ಟಿಯಿಂದ, ಮನಸ್ಸಿನ ಅನುಭವ ವೈಯಕ್ತಿಕ (ಸಬ್ಜೆಕ್ಟಿವ್) ಆಗಿರುತ್ತದೆ. ಅದು ಸಮಷ್ಟಿ (ಅಂದರೆ ಆಬ್ಜೆಕ್ಟಿವ್) ಆಗಿರುವುದಿಲ್ಲ. ಪ್ರಸ್ತುತ ಸಮಷ್ಟಿ (ಆಬ್ಜೆಕ್ಟಿವ್) ಸ್ತರದ ಅನುಭವಕ್ಕಾಗಿ ವಿಜ್ಞಾನವಾದಿಗಳ ಆಗ್ರಹ ಇರುತ್ತದೆ. ಅದಕ್ಕೆ  ಅವರು ವಿಜ್ಞಾನವೆಂದು ಮಾನ್ಯತೆಯನ್ನು ನೀಡುತ್ತಾರೆ. ಎಲ್ಲ ವ್ಯಕ್ತಿಗಳಲ್ಲಿ ಸಮಾನ (ಕಾಮನ್) ಇರುವ ಒಂದು ಮನಸ್ಸು (ವಿಶ್ವಮನಸ್ಸು) ಇರುತ್ತದೆ.  ಅದರೊಂದಿಗೆ ಎಲ್ಲರೂ ಜೋಡಿಸಲ್ಪಟ್ಟಿರುತ್ತಾರೆ.  ವ್ಯಕ್ತಿಯ ಮನಸ್ಸು ತನ್ನ ಅನುಭವ ಮತ್ತು ಸಂಸ್ಕಾರಗಳ ಜೊತೆಗೆ ವಿಶ್ವಮನಸ್ಸಿನಿಂದಲೂ ವಿಚಾರಗಳ ಕೊಡುಕೊಳ್ಳುವಿಕೆಯನ್ನು  ಮಾಡಿಕೊಳ್ಳುತ್ತಿರುತ್ತದೆ.

ಸೂಕ್ಷ್ಮ ದೇಹವು ಅಶುದ್ಧ ಸ್ಥಿತಿಯಲ್ಲಿ ಚಿತ್ತದಲ್ಲಿನ ವಿವಿಧ ಜನ್ಮಗಳ ತ್ರಿಗುಣಾತ್ಮಕ ಸಂಸ್ಕಾರಗಳಿಗನುಸಾರ ಕಾರ್ಯನಿರತವಾಗಿರುತ್ತದೆ, ಆದರೆ ಶುದ್ಧ ಸ್ಥಿತಿಯಲ್ಲಿ ಅದು ಭಗವಂತನ ಇಚ್ಛೆಗನುಸಾರ ಕಾರ್ಯನಿರತವಾಗಿರುತ್ತದೆ. ಅಶುದ್ಧ ಅಥವಾ ಶುದ್ಧ ಕಾರಣದೇಹದ ಸ್ಥಿತಿಗನುಸಾರ ಮನಸ್ಸಿನ ಮೇಲೆ ಪ್ರಭಾವ ಬೀಳುತ್ತಿರುತ್ತದೆ.

೫ ಆ ೨. ನಾಮಜಪದ ವಾಣಿ : ಮನಸ್ಸಿನಿಂದಾಗುವ ನಾಮಜಪಕ್ಕೆ ‘ಮಧ್ಯಮಾ ವಾಣಿಯ ನಾಮಜಪ’ ಎನ್ನುತ್ತಾರೆ. ಅದು ಮನಸ್ಸಿನಲ್ಲಿ ನಿರಂತರವಾಗಿ ಆಗತೊಡಗಿದರೆ, ಮನಸ್ಸು ಸ್ಥಿರವಾಗತೊಡಗಿದೆ ಎಂಬುದನ್ನು ಅನುಭವಿಸುತ್ತೇವೆ, ಆಗ ಅದು ‘ಮಧ್ಯಮಾ’ ವಾಣಿ ಆಗಿರುತ್ತದೆ.

೫ ಆ ೩. ಯಾವ ರೀತಿಯ ಘರ್ಷಣೆ ? : ಸ್ಥೂಲದೇಹದ ಹಾಗೆ ಸೂಕ್ಷ್ಮದೇಹವೂ ಇರುತ್ತದೆ.  ಸೂಕ್ಷ್ಮದೇಹಕ್ಕೆ ಸೂಕ್ಷ್ಮ ನಾಲಿಗೆ, ಸೂಕ್ಷ್ಮ ಅಂಗುಳ (ಗಂಟಲು) ಮತ್ತು ಸೂಕ್ಷ್ಮ ತುಟಿಗಳ ಘರ್ಷಣೆಯಿಂದ ನಾಮಜಪವಾದಾಗ ಅದು ಮಧ್ಯಮಾ ವಾಣಿಯ ನಾಮಜಪವಾಗಿರುತ್ತದೆ. ಪ್ರಾರಂಭದಲ್ಲಿ ಮನಸ್ಸಿನಲ್ಲಿ ಪಠಿಸಲು ಪ್ರಯತ್ನಿಸುವಾಗ ಮನಸ್ಸಿನಲ್ಲಿ ಈ ಸೂಕ್ಷ್ಮ ಘರ್ಷಣೆಯ ಅನುಭೂತಿ ಬರಬಹುದು. ಯಾರ ಪೂರ್ವಜನ್ಮದ ಸಾಧನೆಯ ಕಾರಣದಿಂದ ತನ್ನಿಂತಾನೇ ಮಧ್ಯಮಾದಲ್ಲಿ ನಾಮಜಪ ಪ್ರಾರಂಭವಾಗುತ್ತದೆಯೋ, ಅವರಿಗೆ ಈ ಘರ್ಷಣೆಯ ಅನುಭೂತಿ ಬಂದರೂ, ನೆನಪಿನಲ್ಲಿರುವುದಿಲ್ಲ.

೫ ಆ ೪. ಶಕ್ತಿಯ ಉತ್ಪಾದನೆ : ಮಧ್ಯಮಾವಾಣಿಯ ನಾಮಜಪದಿಂದ ಗರಿಷ್ಟು ಸ್ಥೂಲ (ಧ್ವನಿ) ಮತ್ತು ಅಧಿಕ ಸೂಕ್ಷ್ಮ (ಪ್ರಕಾಶ) ಸ್ತರದ ಶಕ್ತಿ ಉತ್ಪಾದನೆಯಾಗುತ್ತದೆ.

೫ ಆ ೫. ಧ್ವನಿ ಮತ್ತು ಪ್ರಕಾಶ ಶಕ್ತಿಯ ಪ್ರಮಾಣ : ಮಧ್ಯಮಾ ವಾಣಿಯ ನಾಮಜಪದಲ್ಲಿ ಶೇ. ೭೦ ರಷ್ಟು ಧ್ವನಿ ಮತ್ತು ಶೇ. ೩೦ ರಷ್ಟು ಪ್ರಕಾಶ ಶಕ್ತಿ ಉತ್ಪಾದನೆಯಾಗುತ್ತದೆ.

೫ ಆ ೬. ಯಾರು ಕೇಳಬಹುದು ? : ಸ್ಥೂಲ ಧ್ವನಿ ಕಡಿಮೆ ಆಯಿತೆಂದರೆ ಅದು ಇತರರಿಗೆ ಕೇಳಿಸುವುದಿಲ್ಲ; ಆದರೆ ಧ್ವನಿಶಕ್ತಿಯು ಆಗಲೂ ಅಧಿಕವಿರುವುದರಿಂದ ನಾಮಜಪ ಮಾಡುವವನಿಗೆ ಮನಸ್ಸಿನಲ್ಲಿ ಅದು ಕೇಳಿಸುತ್ತದೆ. ಈಶ್ವರನು ಈ ನಾಮಜಪ ಮಾಡುವವನ್ನು ತನ್ನಲ್ಲಿ ನೋಂದಣಿ ಮಾಡುತ್ತಾನೆ. ಶೇ. ೩೦ ರಷ್ಟು ಪ್ರಕಾಶಶಕ್ತಿ ಉತ್ಪನ್ನ ಆಗುವುದ ರಿಂದ, ಈಗ ಬಹಳಷ್ಟು ಸಲ ಈಶ್ವರನೊಂದಿಗೆ ಅನುಸಂಧಾನ ಉಂಟಾಗುತ್ತದೆ. ಈಶ್ವರನ ಗಮನವು ಇಂತಹ ಸಾಧಕನ ಕಡೆಗೆ ಹೋಗುತ್ತದೆ. ಯಾವ ರೀತಿ ಒಂದು ವಿಷಯದಲ್ಲಿ ಶೇ. ೩೦ ಅಂಕಗಳನ್ನುಗಳಿಸಿದವನನ್ನು ಮೊದಲು ೩೫ ಕ್ಕಿಂತ ಮೇಲಕ್ಕೆ ತಂದು ಉತ್ತೀರ್ಣಗೊಳಿಸಲು ಪ್ರಯತ್ನಿಸುತ್ತಾರೆ ಮತ್ತು ಬಳಿಕ ಅವನ ಕ್ಷಮತೆ ಹೆಚ್ಚಿಸಲು ಶಿಕ್ಷಕರು ಯೋಚಿಸು ತ್ತಾರೆಯೋ, ಅದೇ ರೀತಿ ಈಶ್ವರನೂ ಯಾರಾದರೂ ತಳಮಳದಿಂದ ಸಾಧನೆಯನ್ನು ಪ್ರಾರಂಭಿಸಿದ್ದಾರೆ ಎಂದು ತಿಳಿದು ಅವನ ಮೇಲೆ ಕೃಪೆ ಮಾಡಲು ಪ್ರಾರಂಭಿಸುತ್ತಾನೆ.

– (ಸದ್ಗುರು) ಡಾ. ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ (ಆಗಸ್ಟ್ ೨೦೨೩)

(ಮುಂದುವರಿಯುವುದು)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ