ನವೆಂಬರ್ ೨೩ ರಂದು ಕಾರ್ತಿಕ ಏಕಾದಶಿ ಇದೆ. ಅದರ ಪ್ರಯುಕ್ತ
೧. ಆಷಾಢ ಮತ್ತು ಕಾರ್ತಿಕ ಮಾಸದಲ್ಲಿನ ಏಕಾದಶಿಯ ಮಹತ್ವ
ಯಾವುದಾದರೂ ವಿಶಿಷ್ಟ ವಾರದಂದು, ತಿಥಿಯಂದು ಅಥವಾ ಯಾವುದಾದರೂ ತಿಂಗಳಲ್ಲಿ ವಿಶಿಷ್ಟ ದೇವತೆಗಳ ಸ್ಪಂದನಗಳು ಪೃಥ್ವಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಆ ಸಮಯವನ್ನು ಆಯಾ ದೇವತೆಯ ಸಮಯ ಎಂದು ತಿಳಿಯಲಾಗುತ್ತದೆ. ಇಡೀ ವರ್ಷದಲ್ಲಿ ೨೪ ಬಾರಿ ಬರುವ ಏಕಾದಶಿಯ ತುಲನೆಯಲ್ಲಿ ಆಷಾಢ ಮತ್ತು ಕಾರ್ತಿಕ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯ ಸಮಯದಲ್ಲಿ ಶ್ರೀವಿಷ್ಣುವಿನ ತತ್ತ್ವವು ಪೃಥ್ವಿಯಲ್ಲಿ ಅಧಿಕಪ್ರಮಾಣದಲ್ಲಿ ಬರುವುದರಿಂದ ಶ್ರೀವಿಷ್ಣುವಿಗೆ
ಸಂಬಂಧಿತ ಈ ಎರಡು ಏಕಾದಶಿಯ ಮಹತ್ವ ಹೆಚ್ಚು ಇದೆ.
೨. ಏಕಾದಶಿಯಲ್ಲಿನ ಹನ್ನೊಂದು (೧೧) ಈ ಸಂಖ್ಯೆಯ ವರ್ಣನೆ
ಅ. ಹನ್ನೊಂದರ ಪೂಜಾ ಸ್ಥಾನದ ಎಂದರೆ ಎಲ್ಲಾ ಭೂತಗಳ (ಜೀವಿ) ಪೂಜೆ ಮಾಡಬೇಕು, ಹೀಗೆ ಸ್ವತಃ ಏಕನಾಥ ಮಹಾರಾಜರು ಹೇಳಿದ್ದಾರೆ. ಒಂದನೆಯದು ೧ ಇದು ಪೂಜ್ಯ (ಭಗವಂತ, ಪರಮಾತ್ಮ) ಮತ್ತು ಎರಡನೆಯ ೨ ಇದು ಪೂಜಕ (ಆತ್ಮ) ಆಗಿದೆ. ಪೂಜ್ಯ ಮತ್ತು ಪೂಜಕ ಇವರಿಬ್ಬರೂ ಒಂದೇ (೧) ಆಗಿದ್ದಾರೆ ಎಂದರೆ ಏಕರೂಪವಾಗಿದ್ದಾರೆ. ೧೧ ಈ ಸಂಖ್ಯೆಯು ೧೦ ಇಂದ್ರಿಯಗಳು ಮತ್ತು ೧ ಮನಸ್ಸು ಸೇರಿ ದೇಹದಲ್ಲಿನ ಅರಿವಿನ ಪ್ರತೀಕವಾಗಿದೆ. ಈ ಅರಿವು ಎಲ್ಲಾ ಜೀವಿಗಳಲ್ಲಿ ಇರುತ್ತದೆ; ಆದ್ದರಿಂದ ಎಲ್ಲಾ ಜೀವಿಗಳ ಪೂಜೆ ಆಗುತ್ತದೆ. ಯಾರು ಸ್ವಂತದ ಎಲ್ಲಾ ಭೋಗಗಳನ್ನು ಭಗವಂತನಿಗೆ ಅರ್ಪಿಸುವ ಭಾವನೆಯನ್ನು ಇಟ್ಟುಕೊಳ್ಳುತ್ತಾನೆಯೋ ಅವನಿಗೆ ಆತ್ಮತತ್ತ್ವದ ಅರಿವಾಗುತ್ತದೆ. ಅದು ಎಲ್ಲಾ ಕಡೆಗೆ ಸಮತ್ವದಿಂದಿದೆ.
(ಆಧಾರ : ಸಾರ್ಥ ಶ್ರೀ ಏಕನಾಥಿ ಭಾಗವತ ಅಧ್ಯಾಯ ೧೧, ಶ್ಲೋಕ ೧೪೪೭ ರಿಂದ ೧೪೪೯)
ಆ. ಆಷಾಢ ಏಕಾದಶಿ ಮತ್ತು ಕಾರ್ತಿಕ ಏಕಾದಶಿ ಈ ತಿಥಿಗಳಂದು ಪಂಢರಪುರದ ಯಾತ್ರೆ ಇರುತ್ತದೆ. ಪಾಂಡುರಂಗನ ದರ್ಶನಕ್ಕಾಗಿ ವಾರಕರಿಗಳು ಏಕಾದಶಿ ಮಾಡುವುದು (ಒಂದು + ಹತ್ತು) ಎಂದರೆ ಒಂದು ಮನಸ್ಸು ಮತ್ತು ೧೦ ಇಂದ್ರಿಯಗಳು ಪಾಂಡುರಂಗನಿಗೆ ಸಂಪೂರ್ಣವಾಗಿ ಸಮರ್ಪಿಸುವುದು. ಪಾಂಡುರಂಗನ ಸೆಳೆತದಿಂದ ಈ ವಾರಿ (ಯಾತ್ರೆ) ನಿಯಮಿತವಾಗಿ ಪ್ರತಿ ವರ್ಷ ಮಾಡುವವನೇ ವಾರಕರಿ !
ಸಂಕಲನಕಾರರು : ಪರಾತ್ಪರ ಗುರು (ದಿ.) ಪರಶರಾಮ ಮಾಧವ ಪಾಂಡೆ ಮಹಾರಾಜರು (ಆಧಾರ : ಸನಾತನದ ಮರಾಠಿ ಗ್ರಂಥ ಪಂಢÀರಿಯ ಮೊದಲ ವಾರಕರಿ (ಪಾಂಡುರಂಗ))