ಸಂತ ನಾಮದೇವ ಮಹಾರಾಜರ ಧರ್ಮಪ್ರಸಾರದ ಕಾರ್ಯ !

ನವೆಂಬರ್‌ ೨೩ ರಂದು ನಾಮದೇವ ಮಹಾರಾಜರ ಜಯಂತಿ ಇದೆ. ಆ ನಿಮಿತ್ತ …

ಸಂತ ನಾಮದೇವ ಮಹಾರಾಜರು ಜೀವನ ಪರ್ಯಂತ ಭಗವಂತನ ನಾಮದ ಪ್ರಸಾರ ಮಾಡಿದರು. ಭಾಗವತ ಧರ್ಮದ ಪತಾಕೆಯನ್ನು ಪಂಜಾಬದ ವರೆಗೆ ಕೊಂಡೊಯ್ಯುವ ಕಾರ್ಯ ಅವರು ಸ್ವತಃ ಮಾಡಿದರು. ಸಂತ ನಾಮದೇವರ ಸುಮಾರು ೨೫೦೦ ಅಭಂಗಗಳ ಅಭಂಗಗಾಥ ಪ್ರಸಿದ್ಧವಾಗಿದೆ. ಅವರು ಹಿಂದಿ ಭಾಷೆಯಲ್ಲಿ ಸಹ ಕೆಲವು ಅಭಂಗಗಳ ರಚನೆ (ಸುಮಾರು ೧೨೫ ಅಭಂಗಗಳು) ಮಾಡಿದ್ದಾರೆ. ಅದರಲ್ಲಿನ ಸುಮಾರು ೬೨ ಅಭಂಗಗಳನ್ನು ನಾಮದೇವಜಿ ಕೀ ಮುಖಬಾನಿ ಈ ಸಿಖ್‌ ಪಂಥದ ಗುರುಗ್ರಂಥ ಸಾಹೇಬ್‌ ಗ್ರಂಥದಲ್ಲಿ ಗುರುಮುಖಿ ಲಿಪಿಯಲ್ಲಿ ಸೇರಿಸಲಾಗಿದೆ ಸಂತ ನಾಮದೇವರು ಮರಾಠಿ ಭಾಷೆಯಲ್ಲಿ ಆತ್ಮಚರಿತ್ರೆ ಬರೆದಿರುವವರಲ್ಲಿ ಮೊದಲಿಗರು. ಸಂತ ನಾಮದೇವರು ಆದಿ, ಸಮಾಧಿ ಮತ್ತು ತೀರ್ಥಾವಳಿ ಈ ಗ್ರಂಥದಲ್ಲಿನ ಮೂರು ಅಧ್ಯಾಯಗಳಲ್ಲಿ ಸಂತ ಜ್ಞಾನೇಶ್ವರರ ಚರಿತ್ರೆಯನ್ನು ಹೇಳಿದ್ದಾರೆ.

ದಾಹಿ ದಿಶಾ ಮನಾ ಧಾವಸಿ ತೂ ಸಯಿರಾ |
ನಾ ಚುಕತಿ ಏರಝಾರ ಕಲ್ಪಕೋಟಿ ||೧||
ವಿಠೋಬಾಚೆ ನಾಮಿ ದೃಢ ಧರಿ ಭಾವ |
ತೇರ ಸಾಂಡಿ ವಾವ ಮೃಗ ಜಳ ||೨||
ಭಕ್ತಿ ಮುಕ್ತಿ ಸಿದ್ಧಿ ಜೋಡೋನಿಯ ಕರ |
ಕರೀತಿ ನಿರಂತರ ಒಳಗಣೆ ||೩||
ನಾಮಾ ಮ್ಹಣಿ ಮನಾ ಧರಿ ತು ವಿಶ್ವಾಸ |
ಮಗ ಗರ್ಭವಾಸ ನಹೆ ತುಜ ||೪||

ಭಾವಾರ್ಥ : ಹೇ ಮನಸೇ, ನೀನು ದಶ ದಿಕ್ಕಿಗೂ ಓಡಿದರೂ, ಜನನ ಮರಣದ ಚಕ್ರವು ಕಾಲದ ಅಂತ್ಯದಲ್ಲಿಯೂನಿನ್ನನ್ನು ಬಿಡಲಾರದು. ವಿಠಲನ ನಾಮದಲ್ಲಿ ದೃಢವಾದ ಶ್ರದ್ಧೆ ಇಡು. ಅದೇ ನಾಮ ನಿನ್ನನ್ನು ಸಂಸಾರ ರೂಪದ ಮೃಗಜಲವನ್ನು ನಾಶ ಮಾಡುತ್ತದೆ ಮತ್ತು ಭಕ್ತಿ, ಮುಕ್ತಿ ಮತ್ತು ಸಿದ್ಧಿ ಇವುಗಳು ಸತತ ನಿನ್ನ ಮುಂದೆ ಕೈಜೋಡಿಸಿ ನಿಲ್ಲುವವವು. ನೀನು ವಿಶ್ವಾಸವಿಡು, ಆಗಲೇ ನಿನಗೆ ಗರ್ಭವಾಸ (ಪುನರ್ಜನ್ಮ) ಇಲ್ಲ. ಸಂತ ನಾಮದೇವರು ಪಂಢÀರಪುರದ ವಿಠಲ ದೇವಸ್ಥಾನದಲ್ಲಿನ ಮೆಟ್ಟಿಲಿನ ಮೇಲೆ ಸಮಾಧಿ ತೆಗೆದುಕೊಂಡರು. ನಮ್ಮ ಅಹಂ ಎಂದಿಗೂ ಹೆಚ್ಚಾಗಬಾರದು; ಎಂದು ಸಂತ ನಾಮದೇವರು ಭಗವಂತನ ಚರಣದಲ್ಲಿ ವಿಲೀನರಾದರು. ಸಂತ ನಾಮದೇವರು ಸಮಾಧಿ ತೆಗೆದುಕೊಂಡಿರುವ ಮೆಟ್ಟಲು ’ನಾಮದೇವ ಪಾಯರಿ (ಮೆಟ್ಟಿಲು)’ ಹೆಸರಿನಿಂದ ಪ್ರಸಿದ್ಧವಾಗಿದೆ.