5 ಎಕರೆ ಜಾಗದಲ್ಲಿ ರಸ್ತೆ ನಿರ್ಮಾಣ !
ಪ್ರಯಾಗರಾಜ (ಉತ್ತರ ಪ್ರದೇಶ) – ಮಥುರಾದ ಪ್ರಸಿದ್ಧ ಬಾಂಕೆ ಬಿಹಾರಿ ದೇವಸ್ಥಾನದ ಮಾರ್ಗಕ್ಕೆ (‘ಕಾರಿಡಾರ್’ಗೆ) ಅಲಹಾಬಾದ ಉಚ್ಚನ್ಯಾಯಾಲಯವು ಅನುಮತಿ ನೀಡಿದೆ. ಇದಲ್ಲದೇ, ಕುಂಜ ರಸ್ತೆಯ ಮೇಲಿನ ಅತಿಕ್ರಮಣವನ್ನು ತೆಗೆದುಹಾಕಲು ಸಹ ಆದೇಶವನ್ನು ನೀಡಿದೆ; ಆದರೆ ಅದೇ ಸಮಯದಲ್ಲಿ ದೇವಸ್ಥಾನದ ಬ್ಯಾಂಕ್ ಖಾತೆಗೆ ಜಮೆಯಾಗಿದ್ದ 262 ಕೋಟಿ 50 ಲಕ್ಷ ರೂಪಾಯಿಗಳನ್ನು ಈ ರಸ್ತೆ ನಿರ್ಮಾಣಕ್ಕೆ ಬಳಸಲು ಸರಕಾರಕ್ಕೆ ಅವಕಾಶ ನೀಡಿಲ್ಲ. ಇದಕ್ಕಾಗಿ ಸರಕಾರವು ತನ್ನ ಸ್ವಂತ ಹಣವನ್ನು ಬಳಸಬೇಕು ಎಂದು ನ್ಯಾಯಾಲಯ ಹೇಳಿದೆ. ಉತ್ತರ ಪ್ರದೇಶ ಸರಕಾರ ದೇವಸ್ಥಾನದ ಸುತ್ತಲಿನ 5 ಎಕರೆ ಜಾಗದಲ್ಲಿ ಈ ರಸ್ತೆ ನಿರ್ಮಾಣವಾಗಲಿದೆ.
ನ್ಯಾಯಾಲಯವು, ಸರಕಾರದ ಉದ್ದೇಶಿತ ಯೋಜನೆಯೊಂದಿಗೆ ಮುಂದುವರಿಯಬಹುದು; ಆದರೆ ದರ್ಶನಕ್ಕಾಗಿ ಬರುವವರಿಗೆ ಯಾವುದೇ ಅಡೆತಡೆಗಳನ್ನು ಎದುರಿಸುವಂತಾಗಬಾರದು. ಒಮ್ಮೆ ಒತ್ತುವರಿಯನ್ನು ತೆರವು ಮಾಡಿದ ಬಳಿಕ ಮತ್ತೆ ಈ ರಸ್ತೆಗಳು ಅತಿಕ್ರಮಣವಾಗದಂತೆ ಹಾಗೂ ದೇವಸ್ಥಾನದ ಪ್ರವೇಶದ ರಸ್ತೆಗಳಲ್ಲಿ ಯಾವುದೇ ಅಡಚಣೆಯಾಗದಂತೆ ಸರಕಾರ ಎಚ್ಚರಿಕೆ ವಹಿಸಬೇಕು ಎಂದು ಹೇಳಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ನ್ಯಾಯಾಲಯದ ತೀರ್ಪು !
ಅನಂತ ಶರ್ಮಾ, ಮಧುಮಂಗಲ ದಾಸ ಮತ್ತು ಇತರರ ಪರವಾಗಿ 2022 ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಸಾಮಾನ್ಯ ದಿನಗಳಲ್ಲಿ ದೇವಸ್ಥಾನ ದರ್ಶನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ 40 ರಿಂದ 50 ಸಾವಿರ ಎಂದು ಹೇಳಲಾಗುತ್ತದೆ; ಆದರೆ ಶನಿವಾರ, ಭಾನುವಾರ ಮತ್ತು ರಜಾ ದಿನಗಳಲ್ಲಿ ಈ ಸಂಖ್ಯೆ ಒಂದೂವರೆಯಿಂದ ಎರಡೂವರೆ ಲಕ್ಷಕ್ಕೆ ತಲುಪುತ್ತದೆ. ಹಬ್ಬ ಹರಿದಿನಗಳು ಮತ್ತು ಶುಭದಿನಗಳಲ್ಲಿ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಸುಮಾರು 5 ಲಕ್ಷಕ್ಕೆ ತಲುಪುತ್ತದೆ. ದೇವಸ್ಥಾನಕ್ಕೆ ಹೋಗುವ ರಸ್ತೆಗಳು ತುಂಬಾ ಕಿರಿದಾಗಿದೆ. ಇದರಿಂದ ಜನ ದಟ್ಟಣೆಯಿಂದ ಸಂಚಾರಕ್ಕೆ ಬಹಳ ತೊಂದರೆಯಾಗುತ್ತಿದೆ. ಕಿರಿದಾದ ರಸ್ತೆಗಳ ಮೇಲೆ ಒತ್ತುವರಿ ಮಾಡಲಾಗಿದೆ. ಇದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಅನೇಕ ಬಾರಿ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಕೆಲವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಜನದಟ್ಟಣೆಯ ಸಮಯದಲ್ಲಿ ಆಡಳಿತ ಸಂಪೂರ್ಣ ವಿಫಲಗೊಳ್ಳುತ್ತದೆ. ಇದಾದ ನಂತರವೂ ಉತ್ತರ ಪ್ರದೇಶ ಸರಕಾರ ಮತ್ತು ಜಿಲ್ಲಾಡಳಿತ ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ. ಈ ಪ್ರಕರಣದಲ್ಲಿ ರಾಜ್ಯ ಸರಕಾರಕ್ಕೆ ಯೋಗ್ಯ ಹೆಜ್ಜೆಯನ್ನಿಡಲು ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದರು.
ಈ ಮಾರ್ಗ (ಕಾರಿಡಾರ) ಹೇಗಿರುತ್ತದೆ ?
1. ಯಮುನಾ ಕಡೆಯಿಂದ ಬರುವ ರಸ್ತೆಯು 2 ಸಾವಿರದ 100 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುತ್ತದೆ. ಈ ಮಾರ್ಗದಲ್ಲಿ ಸಂಚರಿಸುವವರಿಗಾಗಿ 2 ಭಾಗಗಳಲ್ಲಿ ‘ಕಾರಿಡಾರ’ ಅಭಿವೃದ್ಧಿಪಡಿಸಲಾಗುವುದು. ಒಂದು ಕೆಳಗಿನ ಭಾಗವಿರುತ್ತದೆ ಮತ್ತು ಇನ್ನೊಂದು ಅದರ ಮೇಲೆ ಸರಿಸುಮಾರು 3.5 ಮೀಟರ್ ಇರುತ್ತದೆ, ಅದರ ಮೇಲೆ ರಾಂಪ್(ಇಳಿಜಾರು) ಅನ್ನು ನಿರ್ಮಿಸಲಾಗುತ್ತದೆ.
2. ಎರಡೂ ವಿಭಾಗಗಳಲ್ಲಿ ಶೌಚಾಲಯ, ಸಾಮಾನು ಇಡುವ ಕೋಣೆಗಳು, ಕುಡಿಯುವ ನೀರಿನ ಸೌಲಭ್ಯಗಳು, ಮಕ್ಕಳ ಆರೈಕೆ ಕೋಣೆ, ವೈದ್ಯಕೀಯ ಸೌಲಭ್ಯಗಳು, ಗಣ್ಯರಿಗೆ ಕೊಠಡಿಗಳು ಮತ್ತು ಯಾತ್ರಾರ್ಥಿಗಳಿಗಾಗಿ ಕಾಯುವ ಕೊಠಡಿಗಳನ್ನು ನಿರ್ಮಿಸಲಾಗುವುದು. ಕಾರಿಡಾರ್‌ನ ಕೆಳಗಿನ ಭಾಗ ಸುಮಾರು 5 ಸಾವಿರ ಚದರ ಮೀಟರ್ ಎಂದು ಅಂದಾಜಿಸಲಾಗಿದೆ, ಆದರೆ ಮೇಲಿನ ಭಾಗವು 650 ಚದರ ಮೀಟರ್ ಇರಲಿದೆ.
3. ಕಾರಿಡಾರ್‌ನ ಕೆಳಗಿನ ಭಾಗದಲ್ಲಿ ಅಂದಾಜು 800 ಚದರ ಮೀಟರ್ ಪ್ರದೇಶದಲ್ಲಿ ಪೂಜಾ ಸಾಮಗ್ರಿಗಳ ಅಂಗಡಿಗಳನ್ನು ನಿರ್ಮಿಸಲಾಗುವುದು. ಕಾರಿಡಾರ ನಿರ್ಮಾಣಕ್ಕಾಗಿ ಯಾವ ಅಂಗಡಿಗಳನ್ನು ಕೆಡವಲಾಗುವುದೋ, ಅವರಿಗೆ ಅಲ್ಲಿ ಅಂಗಡಿಗಳನ್ನು ನೀಡಲಾಗುವುದು.
4. ಯಮುನಾ ಶೀಘ್ರಗತಿ ಮಾರ್ಗದಿಂದ ಬರುವ ಭಕ್ತರಿಗಾಗಿ ಬಾಂಕೆ ಬಿಹಾರಿ ಸೇತುವೆಯ ವಾಹನ ನಿಲ್ದಾಣ ಸ್ಥಳವನ್ನು 37 ಸಾವಿರ ಚದರ ಮೀಟರ್‌ನಲ್ಲಿ ನಿರ್ಮಾಣಮಾಡಲಾಗುವುದು. ಇದರಲ್ಲಿ 11 ಸಾವಿರ ಚದರ ಮೀಟರ ಅಂದಾಜು ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುವುದು. ಇಲ್ಲಿ ಏಕಕಾಲಕ್ಕೆ 1 ಸಾವಿರದ 550 ವಾಹನಗಳನ್ನು ನಿಲ್ಲಿಸಲು ಸಾಧ್ಯವಾಗಲಿದೆ.